Home ಜಿಲ್ಲೆ ಮೈಸೂರು ಸಂವಿಧಾನ ಪ್ರಜಾಪ್ರಭುತ್ವದ ಮೇಲೆ ಜಾತಿ ಧರ್ಮಗಳು ಸವಾರಿ ಮಾಡುತ್ತಿವೆ ಸಚಿವ ಮಹದೇವಪ್ಪ

ಸಂವಿಧಾನ ಪ್ರಜಾಪ್ರಭುತ್ವದ ಮೇಲೆ ಜಾತಿ ಧರ್ಮಗಳು ಸವಾರಿ ಮಾಡುತ್ತಿವೆ ಸಚಿವ ಮಹದೇವಪ್ಪ

ಸಂಜೆವಾಣಿ ವಾರ್ತೆ
ಹನೂರು.ಮೇ.3:-
ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ಜಾತಿ ಮತ್ತು ಧರ್ಮಗಳು ಸವಾರಿ ಮಾಡಲು ಮುಂಚೂಣಿಯಲ್ಲಿ ಬರುತ್ತಿವೆ ಅದಕ್ಕೆ ನಾವು ಅವಕಾಶ ಮಾಡಿಕೊಡಬಾರದು ಇದರಿಂದ ಭಾರತ ದೇಶದ ಅಭಿವೃದ್ಧಿ ಮೇಲೆ ಹಿನ್ನೆಡೆ ಉಂಟು ಮಾಡುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಡಾ ಎಚ್ ಸಿ ಮಹಾದೇವಪ್ಪ ಅವರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.


ಕೊಳ್ಳೇಗಾಲ ತಾಲೂಕಿನ ಕಾಮಗೆರೆ ಗ್ರಾಮದಲ್ಲಿ ಯಜಮಾನರು, ಯುವಕರು, ರೇಷ್ಮೆ ನೂಲು ಬಿಚ್ಚಣಿಕೆ ಕಾರ್ಖಾನೆಗಳ ಮಾಲೀಕರು ಹಾಗೂ ಅಂಬೇಡ್ಕರ್ ಭವನ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಡಾ ಬಿ ಆರ್ ಅಂಬೇಡ್ಕರ್ ರವರ 135 ನೇ ಜಯಂತಿ ಹಾಗೂ 2570 ನೇ ಗೌತಮ ಬುದ್ಧರ ಜಯಂತಿ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು
ಬಾಬಾಸಾಹೇಬರೂ ಕೊಟ್ಟಿರುವ ಸಂವಿಧಾನದ ಹಕ್ಕುಗಳು ಯತವತ್ತಾಗಿ ಜಾರಿಯಾಗಿಲ್ಲ ಜಾರಿಯಾಗದೆ ಅಸಮಾನತೆಯ ಸಮಾಜವನ್ನು ನಾವು ಕಾಣುತ್ತಿದ್ದೇವೆ ಸ್ವತಂತ್ರ ಮತ್ತು ಸಮಾನತೆ ಜೊತೆ ಜೊತೆಗೆ ಹೋಗದಿದ್ದರೆ ಸ್ವತಂತ್ರಕ್ಕೆ ಅರ್ಥವಿಲ್ಲ ಸಮಾನತೆಯ ಸಮಾಜ ಬಾರದೆ ಇದ್ದರೆ ಸ್ವತಂತ್ರಕ್ಕೆ ಅರ್ಥವಿಲ್ಲ ಜಾತಿ ಮತ್ತು ಧರ್ಮ ಮುಂಚೂಣಿಯಲ್ಲಿ ಬರುತ್ತಿದೆ.


ಜಾತಿ ಮತ್ತು ಧರ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ಸವಾರಿ ಮಾಡಲು ಅವಕಾಶ ಮಾಡಿಕೊಡಬಾರದು ಇವೆರಡು ಕೂಡ ಭಾರತದ ಅಭಿವೃದ್ಧಿಗೆ ಹಿನ್ನೆಡೆ ಉಂಟು ಮಾಡುತ್ತದೆ. ಮನುಷ್ಯ ಹುಟ್ಟಿದ ಮೇಲೆ ಧರ್ಮ ಹುಟ್ಟಿದ್ದು ಧರ್ಮ ಇರುವುದು ನಮ್ಮ ಕ್ಷೇಮ, ಅಭಿವೃದ್ಧಿಗೆ ಅದಕ್ಕಾಗಿ ಭಗವಾನ್ ಬುದ್ದರು ತಮ್ಮ ನಂತರ ಉತ್ತರಾಧಿಕಾರಿಯಾಗಿ ಬೌದ್ಧ ಧರ್ಮದಲ್ಲಿ ಯಾರು ಇಲ್ಲ ನಮಗೆ ನಾವೇ ಅರ್ಥ ಮಾಡಿಕೊಂಡು ಕರುಣೆ ಮೈತ್ರಿ ಸಮಾನತೆಯನ್ನು ಪ್ರತಿಪಾದಿಸುವ ಬೌದ್ಧ ದಮ್ಮವನ್ನು ನಾವು ಭಾರತ ದೇಶದಲ್ಲಿ ಕಟ್ಟಬೇಕಾಗಿದೆ.
ಬುದ್ದರು ಹೇಳಿರುವುದು ನಿನಗೆ ನೀನೇ ಬೆಳಕು ಇನ್ಯಾರನ್ನು ಹುಡುಕಬೇಡ ನಿನಗೆ ನೀನೇ ದಾರಿ ದೀಪ ಅಂತ ಹೇಳಿದ್ದಾರೆ ಸ್ವರ್ಗ ನರಕ ಪುನರ್ ಜನ್ಮ ಯಾವುದು ಇಲ್ಲ ಆಧ್ಯಾತ್ಮಿಕದ ಜೊತೆಗೆ ವೈಚಾರಿಕತೆ ವೈಜ್ಞಾನಿಕ ಮನೋಭಾವವನ್ನು ನಾವು ಬೆಳೆಸಿಕೊಳ್ಳಬೇಕು. ಭಗವಾನ್ ಬುದ್ಧರು ದೊಡ್ಡ ಶ್ರೀಮಂತ ಕುಟುಂಬದಲ್ಲಿ ಹುಟ್ಟಿ ಜನ ಮತ್ತು ಸಮಾಜದ ಅಭಿವೃದ್ಧಿ ಗೆ ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದಾರೆ ನಮ್ಮ ಬದುಕಿಗೆ ಆದರ್ಶ ಭಗವಾನ್ ಬುದ್ಧರು ಎಂದು ತಿಳಿಸಿದರು.


ಡಾಕ್ಟರ್ ಪ್ರೀತನ್ ನಾಗಪ್ಪ ರವರು ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ಭಗವಾನ್ ಬುದ್ಧರ ಜೀವನ ಚರಿತ್ರೆ ಸಭೆ ಸಮಾಜವನ್ನು ಕಟ್ಟಲು ಅವರ ಹೋರಾಟದ ತತ್ವ ಆದರ್ಶಗಳನ್ನು ಬಗ್ಗೆ ವಿಚಾರಗಳನ್ನು ಪುಸ್ತಕದ ಮೂಲಕ ಪ್ರತಿಯೊಬ್ಬರಿಗೂ ತಲುಪಿಸಿ ಸಂವಿಧಾನ ಪುಸ್ತಕವನ್ನು ಪ್ರತಿ ಮನೆಯಲ್ಲಿ ದಿನನಿತ್ಯ ಓದುವ ಮೂಲಕ ನಮಗೆ ಹೆಚ್ಚು ಜ್ಞಾನ ಬರುತ್ತದೆ ಮತ್ತು ಅವರ ತತ್ವ ಸಿದ್ದಾಂತಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಮತ್ತು ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯಬೇಕು ಪ್ರತಿಯೊಬ್ಬ ತಂದೆ ತಾಯಂದಿರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡುವ ಮುಖಾಂತರ ಸಮಾಜದಲ್ಲಿ ಸಮಾನತೆಯನ್ನು ಸೃಷ್ಟಿಸುವಂತಾಗಬೇಕು ಎಂದ ಅವರು ಅಂಬೇಡ್ಕರ್ ಬುದ್ದ ಜಯಂತಿ ಶುಭಾಶಯಗಳನ್ನು ಕೋರಿದರು.


ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು ಹಾಗೂ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರುಗಳಿಗೆ ಸನ್ಮಾನ ಮಾಡಲಾಯಿತು. ಅಂಬೇಡ್ಕರ್ ಜಯಂತಿ ಅಂಗವಾಗಿ ಮಹಿಳೆಯರು, ಪುರುಷರು, ಯುವಕರು ಹಾಗೂ ಯುವತಿಯರು ಮತ್ತು ನೀಲಿ ಬಣ್ಣದ ಉಡುಪು ಧರಿಸಿ ವೇದಿಕೆ ಕಾರ್ಯಕ್ರಮಕ್ಕೆ ವಿಶೇಷ ಮೆರಗು ತಂದರು. ಸುಮಾರು 2000 ಜನರಿಗೆ ವಿಶೇಷ ಭೋಜನ ವ್ಯವಸ್ಥೆ ಮಾಡಲಾಗಿದ್ದು, ಗ್ರಾಮಸ್ಥರು ಜಯಂತಿಯನ್ನು ಅತ್ಯಂತ ಶಿಸ್ತಿನಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸಿದರು.