Home ಜಿಲ್ಲೆ ಮೈಸೂರು ಸಂವಿಧಾನದಡಿ ಸ್ಥಾಪಿತವಾದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಕೊಳಿಸಲು ಮಾಧ್ಯಮಗಳು ಶ್ರಮಿಸಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ

ಸಂವಿಧಾನದಡಿ ಸ್ಥಾಪಿತವಾದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಕೊಳಿಸಲು ಮಾಧ್ಯಮಗಳು ಶ್ರಮಿಸಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ

ಸಂಜೆವಾಣಿ ವಾರ್ತೆ
ಕೊಳ್ಳೇಗಾಲ ಜು. 27:
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ) ಕೊಳ್ಳೇಗಾಲ ತಾಲೂಕು ಘಟಕ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ-2026 ಸಮಾ ರಂಭಕ್ಕೆ ಕೊಳ್ಳೇಗಾಲ ಶಾಸಕರು ಎ. ಆರ್. ಕೃಷ್ಣಮೂರ್ತಿ ಚಾಲನೆ ನೀಡಿ ಮಾತನಾಡಿದರು.
ಪ್ರಸ್ತುತ ಪತ್ರಿಕೋದ್ಯಮ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಪತ್ರಿಕೆಗಳಿಗೆ ನಾಗರೀಕ ಸಮಾಜದಲ್ಲಿ ಗೌರವವಿದೆ. ಭಾರತೀಯರೆಲ್ಲರೂ ಒಂದೇ ಎಂದು ಹೇಳುತ್ತೇವೆ. ಸಂವಿಧಾನದಡಿ ಪ್ರತಿಯೊಬ್ಬರಿಗೂ ಸಮಾನ ಅವಕಾಶ ದೊರೆತಿದೆ. ಆದರೂ ಜಾತೀಯತೆ, ಅಸ ಮಾನತೆ, ದೌರ್ಜನ್ಯ, ಅತ್ಯಾಚಾರಗಳು ನಡೆಯುತ್ತಿದೆ. ಇವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾಧ್ಯಮಗಳು ಕೆಲಸ ಮಾಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಕೊ ಳ್ಳಿಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದರು.
ಕೊಳ್ಳೇಗಾಲ ತಾಲೂಕು ಪತ್ರಕರ್ತರು ನಿವೇಶನ, ಲ್ಯಾಪ್ ಟಾಪ್ ವಿತರಿಸಲು ಮನವಿ ಮಾಡಿದ್ದು ಈ ಬಗ್ಗೆ ಕ್ರಮ ವಹಿಸಲಾಗುತ್ತದೆ. ಪತ್ರಕರ್ತರ ಭವನ ನಿರ್ಮಾಣಕ್ಕೆ ಅನು ದಾನ ನೀಡಿ ಪೂರ್ಣಗೊಳಿಸಲಾಗುತ್ತದೆ ಎಂದರು.


ಹನೂರು ಶಾಸಕ ಆರ್.ನರೇಂದ್ರ ಮಾತನಾಡಿ, ಪತ್ರಿಕೆ ಗಳನ್ನು ನಡೆಸುವುದು ಸುಲಭದ ವಿಚಾರವಲ್ಲ. ಸವಾಲುಗಳನ್ನು ಎದುರಿಸುತ್ತ ಪತ್ರಿಕೆಗಳು ಸಮಾಜಮುಖಿ ಕೆಲಸ ಮಾಡುತ್ತಿದೆ. ಪತ್ರಕರ್ತರು ಸಮಾಜದ ಕಿವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ತಾಲೂಕು ಸಂಘದ ಅಧ್ಯಕ್ಷ ಚಿಕ್ಕಮಾಳಿಗೆ ಮಾತನಾಡಿ, ಪತ್ರಕರ್ತರು ಸೌಲಭ್ಯಗಳ ಕೊರತೆಗಳ ನಡುವೆ ಸಮಾಜ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಾಮಾಣಿಕವಾಗಿ ಜನರ ಸಮಸ್ಯೆಗಳನ್ನು ಬೆಳಕು ಚೆಲ್ಲುತ್ತಿದ್ದಾರೆ. ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ತಮ್ಮ ನೇತೃತ್ವದಲ್ಲಿ ಕೊಳ್ಳೇಗಾಲ ಪತ್ರಕರ್ತರ ಭವನ ಕಾಮಗಾರಿ ಪೂರ್ಣ ಗೊಳ್ಳಬೇಕು. ಪತ್ರಕರ್ತ ರಿಗೆ ಸರ್ಕಾರದಿಂದ ಉಚಿತ ನಿವೇಶನ ಕೊಡಿಸಬೇಕು. ಹಾಗೆಯೇ ಶಾಸಕರ ನಿಧಿಯಲ್ಲಿ ಲ್ಯಾಪ್ ಟಾಪ್ ವಿತರಣೆ ಮಾಡಬೇಕು ಎಂದರು.
ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆರ್.ಎನ್.ಸಿದ್ದಲಿಂಗಸ್ವಾಮಿ ಅವರು ದಿಕ್ಸೂಚಿ ಭಾಷಣ ಮಾಡಿ, ಸಂಘದ ಚಟುವಟಿಕೆ ಬಗ್ಗೆ ಸವಿಸ್ತರವಾಗಿ ತಿಳಿಸಿದರು.


ಈ ವೇಳೆ ತಾಲೂಕು ಸಂಘದ ಪದಾಧಿಕಾರಿಗಳು ಕೊಳ್ಳೇಗಾಲ ತಾಲೂಕು ಪತ್ರಕರ್ತರ ಭವನ ಕಾಮಗಾರಿಗೆ ಅನುದಾನ ನೀಡಿ ಕಟ್ಟಡ ಪೂರ್ಣಗೊಳಿಸುವುದರ ಜತೆಗೆ ಪತ್ರಕರ್ತರಿಗೆ ನಿವೇಶನ ಮತ್ತು ಲ್ಯಾಪ್ ಟ್ಯಾಪ್ ವಿತರ ಣೆಯನ್ನು ಮಾಡಬೇಕೆಂದು ತಾಲೂಕು ಸಂಘದ ಪದಾ ಧಿಕಾರಿಗಳು ಶಾಸಕ ಎ.ಆರ್.ಕೃಷ್ಣಮೂರ್ತಿ ಅವರಿಗೆ ಭಿನ್ನ ವತ್ತಳೆ ಸಲ್ಲಿಸಿದರು. ಬಳಿಕ, ಕೊಳ್ಳೇಗಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರ ಕೈಪಿಡಿ ಯನ್ನು ಶಾಸಕ ಆರ್.ನರೇಂದ್ರ ಅವರು ಬಿಡುಗಡೆ ಮಾಡಿದರು. ನಂತರ ಜಿಲ್ಲಾ ಸಂಘದ ಉಪಾಧ್ಯಕ್ಷ ಡಿ. ನಟರಾಜು, ನಿರ್ದೇಶಕರಾದ ಎಸ್.ರಾಜಶೇಖರ್, ಎಂ. ಮರಿಸ್ವಾಮಿ, ಮಲ್ಲಪ್ಪ ಯಡದೊರೆ, ಎಚ್.ಕೆ ವಿಜಯಾ ಮಹೇಶ ದತ್ತಿ ಪ್ರಶಸ್ತಿ ಪುರಸ್ಕೃತ ಸಿ.ಬಸಂತ್ ಕುಮಾರ್, ಪತ್ರಿಕಾ ವಿತರಕರಾದ ಕುಶಾಲ್, ಗಿರೀಶ್ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಿ ಸಾಧನೈ ಗಿದಿರುವ ತಾಲೂಕು ಸಂಘದ ಸದಸ್ಯ ಪಿ.ಮಹೇಶ ಅವರ ಪುತ್ರ ಎಂ.ವಂಶಿತ್ ಅವರನ್ನು ಸನ್ಮಾನಿಸಿ ಗೌರವಿ ಸಲಾಯಿತು.


ಈ ಸಂದರ್ಭದಲ್ಲಿ ತಹಸಿಲ್ದಾರ್ ಐ.ಇ ಬಸವರಾಜು, ಡಿವೈಎಸ್ಪಿ ಜೆ.ಮೋಹನ್, ತಾಲೂಕು ಪಂಚಾ ಯಿತಿ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಕುಮಾರ್, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಎಸ್.ಲಕ್ಕೂರು, ರಾಜ್ಯ ಸಮಿತಿ ಸದಸ್ಯ ಸಿ.ಮಹೇಂದ್ರ, ಕೊಳ್ಳೇಗಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಿಕ್ಕಮಾಳಿಗೆ, ಪ್ರಧಾನ ಕಾರ್ಯದರ್ಶಿ ಎನ್.ನಟರಾಜು, ಜಿಲ್ಲಾ ಸಂಘದ ಉಪಾ ಧ್ಯಕ್ಷ ಡಿ.ನಟರಾಜು, ಜಿಲ್ಲಾ ನಿರ್ದೇಶಕರಾದ ಎಸ್. ರಾಜಶೇಖರ್, ಎಂ.ಮರಿಸ್ಬಾಮಿ, ಮಲ್ಲಪ್ಪ ಯಡದೊರೆ ಹಾಗು ತಾಲೂಕು ಸಂಘದ ಉಪಾಧ್ಯಕ್ಷರು, ಸಂಘಟನೆ ಕಾರ್ಯದರ್ಶಿ, ನಿರ್ದೇಶಕರು, ಸದಸ್ಯರು, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಇತರೆ ಸಮುದಾಯದ ಮುಖಂಡರು ಗಳು, ನಗರಸಭೆ ಮಾಜಿ ಸದಸ್ಯರುಗಳು, ಸಂಘ -ಸಂಸ್ಥೆಗಳ ಮುಖಂಡರು ಈ ಕಾರ್ಯಕ್ರಮ ದಲ್ಲಿ ಹಾಜರಿದ್ದರು.