ಸಂತ ಫಿಲೋಮಿನ ಕಾಲೇಜಿನಲ್ಲಿ ಆರು ದಿನಗಳ ಅಧ್ಯಾಪಕ ಅಭಿವೃದ್ಧಿ ಈಆP ಕಾರ್ಯಕ್ರಮಕ್ಕೆ ಚಾಲನೆ

ಸಂಜೆವಾಣಿ ನ್ಯೂಸ್
ಮೈಸೂರು: ಜ.03:-
ಸಂತ ಫಿಲೋಮಿನಾ ಕಾಲೇಜು ಆಂತರಿಕ ಗುಣಮಟ್ಟ ಭರವಸೆ ಕೋಶ (Iಕಿಂಅ) ಹಾಗೂ ಸಂಸ್ಥೆಯ ನವೋದ್ಯಮ ಪರಿಷತ್ ಗಳ (IIಅ) ಸಂಯುಕ್ತ ಆಶ್ರಯದಲ್ಲಿ ಆರು ದಿನಗಳ ಈಆP ಅಭಿವೃದ್ಧಿ ಕಾರ್ಯಕ್ರಮಕ್ಕೆ ಶುಕ್ರವಾರ ಅಧಿಕೃತ ಚಾಲನೆ ನೀಡಲಾಯಿತು.


ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟ ಆಧಾರಿತ ಹಾಗೂ ಸಸ್ಥಿರ ಶೈಕ್ಷಣಿಕ ಶ್ರೇಷ್ಠತೆಯಿಗಾಗಿ ಅಧ್ಯಾಪಕರ ಸಾಮಥ್ರ್ಯ ವೃದ್ಧಿ'' ಎಂಬ ಶೀರ್ಷಿಕೆಯಡಿ ಆಯೋಜಿಸಲಾದ ಈ ಕಾರ್ಯಕ್ರಮವು ಪದವಿ ಹಾಗೂ ಸ್ನಾತಕೋತ್ತರ ಹಂತದ ಅಧ್ಯಾಪಕರಿಗಾಗಿ ರೂಪುಗೊಂಡಿದೆ. ಕಾಲೇಜಿನ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ (ಎSSಂಊಇಖ) ಸಂಶೋಧನಾ ವಿಭಾಗದ ಡೀನ್ ಹಾಗೂ ಜೆಎಸ್‍ಎಸ್ ಮೆಡಿಕಲ್ ಕಾಲೇಜಿನ ಜೈವರಸಾಯನಶಾಸ್ತ್ರ ಪ್ರಾಧ್ಯಾಪಕರಾದ ಡಾ. ಪ್ರಶಾಂತ್ ವಿಶ್ವನಾಥ್ ಅವರು ಉದ್ಘಾಟನಾ ಭಾಷಣ ಮಾಡಿದರು. ಸಮಕಾಲೀನ ಬೋಧನಾ ವಿಧಾನಗಳಲ್ಲಿ ನಿರಂತರ ಸಾಮಥ್ರ್ಯ ವೃದ್ಧಿಯ ಅಗತ್ಯವಿದೆ ಎಂದು ಅವರು ಹೇಳಿದರು. ಕಾರ್ಯಕ್ರಮಕ್ಕೆ ರೆಕ್ಟರ್ ರೆವ್. ಡಾ. ಲೂರ್ದು ಪ್ರಸಾದ್ ಜೋಸೆಫ್ ಅವರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಪ್ರಾಂಶುಪಾಲ ಡಾ. ರವಿ ಜೆ. ಡಿ. ಸಲ್ದಾನ್ಹ, ನಿರ್ವಹಣಾಧಿಕಾರಿ ರೆವ್. ಫಾ. ಜ್ಞಾನ್ನ ಪ್ರಗಾಸಂ, ರೆವ್. ಫಾ. ಡೇವಿಡ್ ಸಗಾಯರಾಜ್. ಎಸ್, ಉಪಪ್ರಾಂಶುಪಾಲ, ರೊನಾಲ್ಡ್ ಪ್ರಕಾಶ್ ಕುಟಿನ್ಹಾ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಸಹ ಪ್ರಾಧ್ಯಾಪಕರಾದ ಎ. ಥಾಮಸ್ ಗುಣಸೀಲನ್, Iಕಿಂಅ ಸಂಯೋಜಕ ಹಾಗೂ ಸಾಮಾಜಿಕ ಕಾರ್ಯ ವಿಭಾಗ (ಒSW) ಮುಖ್ಯಸ್ಥರು ಹಾಗೂ ಸಹ ಪ್ರಾಧ್ಯಾಪಕರಾದ ಹಾಗು ಸ್ನಾತಕೋತ್ತರ ಸಂಯೋಜಕರಾದ ಡಾ. ನೂರ್ ಮುಬಶೀರ್ ಸಿ.ಎ. ಉಪಸ್ಥಿತರಿದ್ದರು. ಉದ್ಘಾಟನಾ ಸಮಾರಂಭದ ಬಳಿಕ ಮೊದಲ ತಾಂತ್ರಿಕ ಅಧಿವೇಶನವನ್ನು ಭಾರತೀಯ ವಿಜ್ಞಾನ ಸಂಸ್ಥೆ (IISಛಿ), ಬೆಂಗಳೂರುನ ನೆಟ್ವರ್ಕ್ ಯೋಜನೆಯ ಮಾಜಿ ಮುಖ್ಯಸ್ಥ ಹಾಗೂ ಐಐಎಂ ಬೆಂಗಳೂರು ಮತ್ತು ಇಂಡೋರ್ನ ಅತಿಥಿ ಪ್ರಾಧ್ಯಾಪಕರಾದ ಡಾ. ಅಶೋಕ್ ರಾವ್ ನಡೆಸಿಕೊಟ್ಟರು.ಭಾರತೀಯ ಜ್ಞಾನ ಪರಂಪರೆ (IಏS)” ವಿಷಯದ ಕುರಿತು ಅವರು ಉಪನ್ಯಾಸ ನೀಡಿ, ಸಾಂಪ್ರದಾಯಿಕ ಜ್ಞಾನವನ್ನು ಸಮಕಾಲೀನ ಉನ್ನತ ಶಿಕ್ಷಣದೊಂದಿಗೆ ಏಕೀಕರಿಸುವ ಮಹತ್ವವನ್ನು ವಿವರಿಸಿದರು.


ಈ ಅಧ್ಯಾಪಕ ಅಭಿವೃದ್ಧಿ ಕಾರ್ಯಕ್ರಮವು ಜನವರಿ 8ರವರೆಗೆ ಮುಂದುವರಿಯಲಿದ್ದು, ಪ್ರತಿದಿನ ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಅಧಿವೇಶನಗಳು ನಡೆಯಲಿವೆ. ಕಾರ್ಯಕ್ರಮವನ್ನು ಡಾ. ದೀಪಾ ವಿ., Iಕಿಂಅ ಸಹ ಸಂಯೋಜಕಿ ಸಂಯೋಜಿಸುತ್ತಿದ್ದು, ಎ. ಥಾಮಸ್ ಗುಣಸೀಲನ್, Iಕಿಂಅ ಸಂಯೋಜಕರು ಕಾರ್ಯಕ್ರಮದ ಸಂಚಾಲಕರಾಗಿದ್ದಾರೆ.