Home ಜಿಲ್ಲೆ ಸಂಜೆ ಪಾಲಿಕೆ ಬಜೆಟ್ ಸಿದ್ದತೆ ಸಭೆ

ಸಂಜೆ ಪಾಲಿಕೆ ಬಜೆಟ್ ಸಿದ್ದತೆ ಸಭೆ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಫೆ.19. ಇಂದು ಸಂಜೆ 4.30 ಕ್ಕೆ ಇಲ್ಲಿನ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ 2026-27 ನೇ ಸಾಲಿನ ಬಜೆಟ್ ಸಿದ್ದತೆ ಕುರಿತು ಪಾಲಿಕೆ ಸದಸ್ಯರ ಸಭೆಯನ್ನು ಮೇಯರ್ ಗಾದೆಪ್ಪ ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ.

ಈ ತಿಂಗಳ 16 ರಂದು ಬಜೆಟ್ ಸಭೆ ಕರೆದಿತ್ತು. ಅದಕ್ಕೂ ಪೂರ್ವದಲ್ಲಿ ಸಿದ್ದತಾ ಸಭೆ ಕರೆದಿತ್ತು. ಆದರೆ ಮೇಯರ್ ಮತ್ತು ಸದಸ್ಯರ ನಡುವಿನ ಶೀತಲ ಸಮರದಿಂದ ಆ ಸಭೆಗೆ ಪಾಲಿಕೆ ಸದಸ್ಯರು ಹಾಜರಾಗಿರಲಿಲ್ಲ. ಅದಕ್ಕಾಗಿ ಮತ್ತೊಮ್ಮೆ ಸಭೆ ಕರೆಯಲು ಸದಸ್ಯರು ಆಗ್ರಹಿಸಿ ಬಜೆಟ್ ಸಭೆ ಮುಂದೂಡುವಂತೆ ಆಗ್ರಹಿಸಿದ್ದರು.

ಈ ಹಿನ್ನಲೆಯಲ್ಲಿ ಬಜೆಟ್ ಸಭೆಯನ್ನು ಫೆ. 23 ಕ್ಕೆ ಮುಂದೂಡಿದ್ದು. ಇಂದು ಮತ್ತೊಮ್ಮೆ ಪಾಲಿಕೆ ಸದಸ್ಯರು ಪಾಲ್ಗೊಳ್ಳಲು ಬಜೆಟ್ ಪೂರ್ವ ಸಿದ್ದತಾ ಸಭೆ ಕರೆಯಲಾಗಿದೆ.