Home ಜಿಲ್ಲೆ ಸಂಘಟನೆಯೇ ನಿಜವಾದ ಶಕ್ತಿ-ಯೋಗೇಶ್ವರಾನಂದಜೀ

ಸಂಘಟನೆಯೇ ನಿಜವಾದ ಶಕ್ತಿ-ಯೋಗೇಶ್ವರಾನಂದಜೀ

ಕೆಂಗೇರಿ, ಮಾ, ೧೧ : ಸಂಘಟನೆಯೇ ನಿಜವಾದ ಶಕ್ತಿ, ಸಮಾಜದ ಸೌಕರ್ಯ ಬಳಸಿಕೊಂಡು ಬೆಳೆದ ವ್ಯಕ್ತಿ ಸಮಾಜಕ್ಕೆ ಕಾಣಿಕೆ ನೀಡಬೇಕು. ಇಲ್ಲವಾದಲಿಆತ ಸಮಾಜ ದ್ರೋಹಿ ಎಂದು ರಾಮಕೃಷ್ಣ ಯೋಗ ಆಶ್ರಮದ ಯೋಗೇಶ್ವರಾನಂದಜೀ ಮಹಾರಾಜ್ ಸ್ವಾಮೀಜಿ ಎಂದು ಹೇಳಿದರು.

ಕೆಂಗೇರಿ ಉಪನಗರದ ಗುರು ರಾಜ ಸಭಾ ಭವನದಲ್ಲಿ ಆಯೋಜಿಸಲಾಗಿದ್ದ ಕನಕದಾಸರ ೫೩೮ನೇ ಜಯಂತೋತ್ಸವ ಹಾಗೂ ಕನಕ ದಾಸ ಸೇವಾ ಚಾರಿಟೇಬಲ್ ಟ್ರಸ್ಟ್ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮಹಾಪುರುಷರ ಜಯಂತಿಗಳು ಕೇವಲ ಆಚರಣೆಗಳಿಗೆ ಮೀಸಲಾಗಿದೆ.
ಕನಕರ ವಚನಗಳನ್ನು ಯಾವ ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಅವರ ಹರಿ ಭಕ್ತಿ ಸಾರದ ಒಂದು ಸಾಲು ಯಾರಿಗೆ ತಿಳಿದಿದೆ ಎಂದು ಪ್ರಶ್ನಿಸಿದರು. ಅವರ ಆದರ್ಶಗಳನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ನಿಜವಾದ ಆಚರಣೆ ಎಂದು ಅಭಿಪ್ರಾಯಪಟ್ಟರು.


ಶಾಸಕ ಎಸ್. ಟಿ. ಸೋಮಶೇಖರ್ ಮಾತನಾಡಿ,ಕುರುಬ ಜನಾಂಗದ ಮೂವರು ಮುಖಂಡರಿಗೆ ಈ ಬಾರಿಯ ಜಿ ಬಿ ಎ ಚುನಾವಣೆಗೆ ನಾಮಪತ್ರ ನೀಡಲಾಗುವುದು ಎಂದು ಭರವಸೆ ನೀಡಿದರು.ನಗರದ ಯಾವುದೇ ಕ್ಷೇತ್ರದಲ್ಲಿ ಕುರುಬ ಜನಾಂಗಕ್ಕೆ ಇಷ್ಟು ಪ್ರಾಧಾನ್ಯತೆ ನೀಡಿಲ್ಲ. ಎಲ್ಲಾ ಅಭ್ಯರ್ಥಿಗಳು ಗೆಲ್ಲಬೇಕೆಂಬ ದೃಷ್ಟಿಯಿಂದ ಈಗಲೇ ಯಶವಂತಪುರ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ಘೋಷಣೆಗೆ ವಾಗಿಸಲಾಗಿದೆ. ಈ ಪೈಕಿ ಈಗಾಗಲೇ ಇಬ್ಬರು ಕುರುಬ ಜನಾಂಗದ ಅಭ್ಯರ್ಥಿಗೆ ಟಿಕೆಟ್ ನೀಡುವ ಘೋಷಣೆ ಮಾಡಲಾಗಿದೆ. ಉಪ ಮುಖ್ಯಮಂತ್ರಿ ಅವರೊಂದಿಗೆ ಸಮಾಲೋಚನೆ ನಡೆಸಿ ಕುರುಬ ಜನಾಂಗಕ್ಕೆ ಮತ್ತೊಂದು ಪ್ರಾತಿನಿಧ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.


ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ಟ್ರಸ್ಟಿನ ಗೌರವಾಧ್ಯಕ್ಷ ಆರ್. ಶಿವಮಾದಯ್ಯ ಮಾತನಾಡಿ,ಶಾಸಕರು ಪ್ರತಿಯೊಂದು ಜನಾಂಗದ ಮುಖಂಡರನ್ನು ಗುರುತಿಸಿ ಮುಖ್ಯ ವಾಹಿನಿಗೆ ತರುವ ಮಹತ್ತರ ಕಾರ್ಯ ಮಾಡುತ್ತಿದ್ದಾರೆ. ಎಂದು ತಿಳಿಸಿದರು. ರಾಮೋಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಟ್ರಸ್ಟಿನ ಗೌರವಾಧ್ಯಕ್ಷಗಳಾದ ಮಹೇಶ್ ಜಿ., ಕೆ. ವಿ. ಲಿಂಗಯ್ಯ, ಟ್ರಸ್ಟಿನ ಅಧ್ಯಕ್ಷರಾದ ಕೆ.ಕೆ. ಬಸವರಾಜು, ಉಪಾಧ್ಯಕ್ಷರಾದ ಆರ್. ರವಿಕುಮಾರ್, ಗುರುದೇವನ್, ಲಕ್ಷ್ಮಣಗೌಡ ಎಂ. ಬಿ., ಕಾರ್ಯದರ್ಶಿಗಳಾದ ಜಿ. ವಿ. ಸುರೇಶ್, ಸುಭಾಷ್, ಎಂ. ಬಾಳೇಗೌಡ, ಪಾರ್ವತಮ್ಮ ಕೆ., ಮಂಗಳಗೌರಿ ಹೆಚ್. ಎಸ್., ಖಜಾಂಚಿ ಶಿವಲಿಂಗಯ್ಯ ಕೆ. ಎಲ್., ಸಂಘಟನ ಕಾರ್ಯದರ್ಶಿಗಳಾದ ಜೆ. ವಿ. ರಮೇಶ್, ಜಲಜಾಕ್ಷೀ ಬಿ., ಕೆ. ಎಂ. ರಾಜೇಶ್, ಮುಖ್ಯ ಸಲಹೆಗಾರ ಮಂಜುನಾಥ್ ಎಂ.ಎಸ್., ಟ್ರಸ್ಟಿನ ಎಲ್ಲಾ ಪದಾಧಿಕಾರಿಗಳು, ಸಮುದಾಯದ ಮುಖಂಡರು ಹಾಗೂ ಕೆಂಗಲ್ ಹನುಮಂತಯ್ಯ ಜಿಬಿಎ ವಾರ್ಡಿನ ಕಾಂಗ್ರೆಸ್ ಮುಖಂಡ ಚೇತನ್ ಗೌಡ, ಕೆಂಗೇರಿ ವಾರ್ಡ್ ಅಧ್ಯಕ್ಷ ಟಿ. ಪ್ರಭಾಕರ್ ಮತ್ತಿತರರು ಉಪಸ್ಥಿತರಿದ್ದರು