
ಸಂಜೆವಾಣಿ ನ್ಯೂಸ್
ಮೈಸೂರು: ಜ.15:- ಸಂಕ್ರಾಂತಿ ಆಚರಿಸುವ ಸಡಗರದ ಮುನ್ನಾ ದಿನವಾದ ಬುಧವಾರ ಜನರು, ಹಬ್ಬದ ಸಿದ್ದತೆಯಲ್ಲಿ ತೊಡಗಿಸಿಕೊಳ್ಳುವುದಲ್ಲದೇ ಬಹುರೂಪಿ ನಾಟಕೋತ್ಸವಕ್ಕೆ ಆಗಮಿಸಿ ನಾಟಕ, ಚಲನಚಿತ್ರ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳ ರಂಜನೆ ಪಡೆದರು.
ಸಂಸ್ಕೃತಿಕ ಪರಂಪರೆ ಹೊಂದಿರುವ ಮೈಸೂರಿನಲ್ಲಿ ನಾಟಕ ರಂಗಭೂಮಿಯಂತಹ ಸಾಂಸ್ಕೃತಿಕ ಚಟುವಟಿಕೆಗಳನ್ನು ಕಣ್ತುಂಬಿಕೊಳ್ಳುವ ಕಲಾಪ್ರೇಮಿಗಳು ಹಾಗೂ ಪೆÇೀಷಕರಿದ್ದಾರೆ. ಹಲವು ವರ್ಷಗಳಿಂದ ಬಹುರೂಪಿ ನಾಟಕೋತ್ಸವ ಆಯೋಜಿಸುತ್ತಿರುವ ಈ ಸಾಂಸ್ಕೃತಿಕ ಹಬ್ಬಕ್ಕೆ ಸಹಜವಾಗಿಯೇ ಸಾಂಪ್ರದಾಯಿಕ ಪ್ರೇಕ್ಷಕರು ಆಗಮಿಸುತ್ತಾರೆ. ಅಂತೆಯೇ ಬುಧವಾರ ಸಂಜೆಯಾಗುತ್ತಿದ್ದಂತೆ ನಾಲ್ಕು ಕಡೆ ನಡೆಯುವ ನಾಟಕ ಪ್ರದರ್ಶನದಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ರಂಗಾಸಕ್ತರು ಕಂಡುಬಂದರು. ಕಿಂದರಜೋಗಿ ವೇದಿಕೆಯಲ್ಲಿ ನಡೆದ ಜನಪದ ಕಲಾ ತಂಡಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜನರು ಕಣ್ತುಂಬಿಕೊಂಡರು.
ಮಕ್ಕಳ ನಾಟಕೋತ್ಸವದ ಅಂಗವಾಗಿ ಕಲಾಮಂದಿರದಲ್ಲಿ ಬೆಳಗ್ಗೆ 11ಕ್ಕೆ ಹಾಗೂ ಸಂಜೆ 7ಕ್ಕೆ ಆಯೋಜಿಸಿದ್ದ ರೋಹಿತ್ ಎಸ್. ಬೈಕಾಡಿ ನಿರ್ದೇಶನದ ಸೂರ್ಯ ಚಂದ್ರ (ಕನ್ನಡ) ನಾಟಕದಲ್ಲಿ ಆಧುನಿಕ ಸಮಸ್ಯೆಗಳನ್ನು ಪರೋಕ್ಷವಾಗಿ ಅಥವಾ ರೂಪಕಾತ್ಮಕವಾಗಿ ತೋರಿಸಲಾಯಿತು. ಕೆಲವು ಪ್ರದರ್ಶನಗಳಲ್ಲಿ ಸೂರ್ಯ-ಚಂದ್ರರನ್ನು ಸೆರೆಹಿಡಿದಂತಹ ಅಥವಾ ಅವರ ಸಂಬಂಧದ ಮೂಲಕ ಮಾನವ ಜೀವನದ ಸಮಸ್ಯೆಗಳನ್ನು ಚರ್ಚಿಸಲಾಗಿದೆ. ಪೆÇೀಷಕರೊಂದಿಗೆ ನಾಟಕ ವೀಕ್ಷಣೆಗೆ ಆಗಮಿಸಿದ್ದ ಮಕ್ಕಳ ಮನಸ್ಸಿನ ಮೇಲೆ ಹೆಚ್ಚು ಪರಿಣಾಮ ಬೀರುವಲ್ಲಿ ಯಶಸ್ವಿಯಾಯಿತು. ಭೂಮಿಗೀತದಲ್ಲಿ ಹೈಸ್ನಾಂ ತೋಂಬಾ ಸಿಂಗ್ ನಿರ್ದೇಶನದ ಪಿ ಥದೊಯ್ (ಮಣಿಪುರಿ) ನಾಟಕ, ವನರಂಗ ವೇದಿಕೆಯಲ್ಲಿ ಸಪನ್ ಸರನ್ ನಿರ್ದೇಶನದ ಸೇಮ್ ಸೇಮ್ ಬಟ್ ಡಿಫರೆಂಟ್(ಇಂಗ್ಲಿಷ್, ಹಿಂದಿ) ನಾಟಕ ಪ್ರದರ್ಶನಗೊಂಡಿತು.
ಕಿರುರಂಗ ಮಂದಿರದಲ್ಲಿ ಪ್ರದರ್ಶನಗೊಂಡ ರೂಬಿನ್ ಸಂಜಯ್ ಅವರು ನಿರ್ದೇಶಿಸಿರುವ ಬೆಲ್ಲದ ದೋಣಿ ನಾಟಕಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ನಾಟಕದ ಹೆಸರು ಸಾಂಕೇತಿಕವಾಗಿದ್ದು, ಸಾಮಾನ್ಯವಾಗಿ ಕನ್ನಡ ರಂಗಭೂಮಿಯಲ್ಲಿ ಜನಪದ, ಗ್ರಾಮೀಣ ಜೀವನ, ಸಾಮಾಜಿಕ ಸಮಸ್ಯೆಗಳು, ಮಾನವ ಸಂಬಂಧಗಳು ಅಥವಾ ಆಧ್ಯಾತ್ಮಿಕ, ನೈತಿಕ ಸಂದೇಶಗಳನ್ನು ಒಳಗೊಂಡ ನಾಟಕಗಳಲ್ಲಿ ಈ ಹೆಸರು ಬಳಸಲಾಗುತ್ತದೆ. ಬೆಲ್ಲ ಮತ್ತು ದೋಣಿ (ಜೀವನದ ಪಯಣ, ಸಂಘರ್ಷದ ಸಾಧನ) ಸಂಕೇತಗಳ ಮೂಲಕ ಜೀವನದ ಸಂಕಷ್ಟಗಳ ನಡುವೆಯೂ ಸಿಹಿ, ಆಶಾಭಾವ ಕಾಪಾಡಿಕೊಳ್ಳುವುದು, ಸಮಾಜದಲ್ಲಿ ಸಹಕಾರ, ಸಾಮರಸ್ಯ ಅಥವಾ ವೈಯಕ್ತಿಕ ಬೆಳವಣಿಗೆಯ ಕಥೆಯನ್ನು ನಾಟಕದಲ್ಲಿ ಅನಾವರಣಗೊಳಿಸಲಾಯಿತು.
ಚಲನಚಿತ್ರ ರಂಜನೆ: ಬುಧವಾರ ಪ್ರದರ್ಶನಗೊಂಡ ಅಭಿನವ್ ಪಾಂಡೇ ನಿರ್ದೇಶನದ ಶ್ರೀರಂಗಮಂದಿರ ಮುಸಾಹರ್ ಚಲನಚಿತ್ರದಲ್ಲಿ ಬಿಹಾರದಲ್ಲಿ ಮುಸಾಹರ್ ಸಮುದಾಯದ ದುರವಸ್ಥೆ, ಜಾತಿವಾದ, ಶೋಷಣೆ, ಮದ್ಯಪಾನದ ಸಮಸ್ಯೆಗಳು, ಶಿಕ್ಷಣ ಮತ್ತು ಉದ್ಯೋಗದ ಕೊರತೆಯ ಬೀಕರತೆ ಅಡಕವಾಗಿತ್ತು. ಅಲ್ಲದೇ ಈ ಸಮುದಾಯದ ಹೋರಾಟ, ಸಂಗೀತ ಮತ್ತು ಸಾಮಾಜಿಕ ಅಸಮಾನತೆ ಎತ್ತಿ ತೋರಿಸಿತು. ಅಲ್ಲದೇ ಸಾಮಾಜಿಕ ನ್ಯಾಯ ಮತ್ತು ದಲಿತರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿತು. ಆನಂದ್ ಪಟವರ್ಧನ್ ನಿರ್ದೇಶನದ ಜೈ ಭೀಮ್ ಕಾಮ್ರೇಡ್-2 ಚಲನಚಿತ್ರದಲ್ಲಿ 1997ರ ರಾಮಾಬಾಯಿ ಕಾಲೋನಿ ಪೆÇಲೀಸ್ ಗುಂಡಿನ ಘಟನೆಯಿಂದ ಪ್ರಾರಂಭವಾಗಿ, ದಲಿತರ ಮೇಲಿನ ಜಾತಿ ದೌರ್ಜನ್ಯ, ಅಂಬೇಡ್ಕರ್‍ರ ಹೋರಾಟದ ಪರಂಪರೆ, ವಿಲಾಸ್ ಘೋಗ್ರೆಯಂತಹ ಕವಿ-ಗಾಯಕರ ಆತ್ಮಹತ್ಯೆಯನ್ನು ಆಧರಿಸಿ ದಲಿತ ಸಂಘರ್ಷ, ಸಂಗೀತ ಮತ್ತು ಕವಿತೆಯ ಮೂಲಕ ಪ್ರತಿರೋಧವನ್ನು ಚಿತ್ರಿಸಲಾಗಿದೆ. ಗಿರೀಶ್ ಮಾಚಳ್ಳಿ ನಿರ್ದೇಶನದ ಕಾಳ್ಚೌಡಿ ಕನ್ನಡ ಚಲನಚಿತ್ರದಲ್ಲಿ ಗ್ರಾಮೀಣ ಕರ್ನಾಟಕದಲ್ಲಿ ಜಾತಿ, ಶೋಷಣೆ ಅಥವಾ ಪರಿಸರ ಸಂಬಂಧಿತ ಸಂಘರ್ಷದ ಬಗ್ಗೆ ಸಾರಿ ಹೇಳಿತು. ಸಿನಿ ಪ್ರಿಯರು ಈ ವಿಭಿನ್ನ ಅಭಿರುಚಿಯ ಚಿತ್ರಗಳನ್ನು ವೀಕ್ಷಿಸಿ ದಲಿತರ ಮೇಲಿನ ದೌರ್ಜನ್ಯ, ಅಸಮಾನತೆಯ ಚಿತ್ರಣವನ್ನು ಪಡೆದುಕೊಂಡರು.

























