Home ಜಿಲ್ಲೆ ಶ್ರೇಷ್ಠ ಇಂಟರ್ ನ್ಯಾಷನಲ್ ಸ್ಕೂಲ್ ವಿಕಲಚೇತನರಿಗೆ ಉಚಿತ, ತಂದೆ ಇಲ್ಲದ ಮಕ್ಕಳಿಗೆ ಅರ್ಧ ಫೀಜ್

ಶ್ರೇಷ್ಠ ಇಂಟರ್ ನ್ಯಾಷನಲ್ ಸ್ಕೂಲ್ ವಿಕಲಚೇತನರಿಗೆ ಉಚಿತ, ತಂದೆ ಇಲ್ಲದ ಮಕ್ಕಳಿಗೆ ಅರ್ಧ ಫೀಜ್

oplus_6291456

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ:ಫೆ,11- ತಾಲೂಕಿನ ಸಿರಿವಾರ ಕ್ರಾಸ್ ಬಳಿ ಮಾತೃಭೂಮಿ ಎಜುಕೇಷನಲ್ ಅಂಡ್ ಚಾರಿಟಬಲ್ ಟ್ರಸ್ಟ ನಿಂದ ಪರ ಶ್ರೇಷ್ಠ ಇಂಟರ್ ನ್ಯಾಷನಲ್ ಶಾಲೆ, ವಿಕಲಚೇತನ ಮಕ್ಕಳಿಗೆ ಉಚಿತ, ತಂದೆ ಇಲ್ಲದ ಮಕ್ಕಳಿಗೆ ಶೇ 50 ರಷ್ಟು, ರೈತರ ಮಕ್ಕಳಿಗೆ ಶೇ 10 ರಷ್ಟು ಫೀಜ್ ರಿಯಾಯತಿಯಲ್ಲಿ ಮೌಲ್ಯವರ್ಧಿತ ಅಂದರೆ ಕೌಶಲ್ಯಾಧಾರಿತ ಶಿಕ್ಷಣ ನೀಡಲಿದೆ ಎಂದು ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಬ್ರಹ್ಮಯ್ಯ ನಾಯ್ಡು ಹೇಳಿದ್ದಾರೆ.

ಅವರು ಇಂದು ನಗರದಲ್ಲಿ ಸುದ್ದಿಗೋಷ್ಡಿ ನಡೆಸಿ. ಖ್ಯಾತ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರ ಇಂಟಿಗ್ರೇಟೆಡ್ ಸ್ಪೋರ್ಟ್ಸ್ ಅಕಾಡೆಮಿ ಟೆನ್ ವಿಕ್ ಸಂಸ್ಥೆ ಮತ್ತು ಶಿಕ್ಷಣ ತಜ್ಞ ಗುರುರಾಜ ಕರ್ಜಿಗಿ ಅವರ ಅಕಾಡೆಮಿ ಫರ್ ಕ್ರಿಯೇಟಿವ್ ಟೀಚಿಂಗ್ ನೊಂದಿಗೆ ಒಡಂಬಡಿಕೆ ಮಾಡಿಕೊಂಡು ಸಿ ಬಿ ಎಸ್ ಇ ಪಠ್ಯದೊಂದಿಗೆ ಶಾಲೆ ಆರಂಭಿಸಿದೆ.

ಶಾಲೆಯು 9 ಎಕರೆ ಆವರಣದಲ್ಲಿ ಆರಂಭಗೊಂಡಿದ್ದು ಪಕ್ಕದ 12 ಎಕರೆಯನ್ನು ಸಹ ಭೋಗಕ್ಕೆ ಪಡೆದಿದೆ.

ಇಲ್ಲಿ ಶಿಕ್ಷಣದ ಜೊತೆಗೆ ವಿಶೇಷವಾಗಿ ಕ್ರೀಡೆಗೆ ಸಹ ಹೆಚ್ಚಿನ ಒತ್ತು ನೀಡುತ್ತಿದೆ. ಅನಿಲ್ ಕುಂಬ್ಳೆ ಅವರ ಸಂಸ್ಥೆಯಿಂದ ಕ್ರಿಕೆಟ್, ಈಜು, ಫುಟ್ ಬಾಲ್, ಬ್ಯಾಡ್ ಮಿಂಟನ್, ಕುದರೆ ಸವಾರಿ ಮೊದಲಾದ ಕ್ರೀಡೆಗಳನ್ನು ಕಲಿಸಲಿದೆ. ತಮಿಳುನಾಡಿನ ತಂಜಾವೂರಿನ ಸಂಸ್ಥೆಯಿಂದ ಪಾರಂಪರಿಕ ಅಸತ್ಮ ರಕ್ಷಣೆಯ ಕಲೆಗಳನ್ನು  ಕಲಿಸಲಿದೆ. ಮುಖ್ಯವಾಗಿ ಮಕ್ಕಳಿಗೆ ಒತ್ತಡ ರಹಿತ ಶಿಕ್ಷಣ ನೀಡುವುದಾಗಿದೆ. ಶಾಲೆಯಲ್ಲಿನ ಮಕ್ಕಳಿಗೆ ನಮ್ಮ ಸಂಸ್ಥೆಯ 35 ಎಕರೆ ಪ್ರದೇಶದಲ್ಲಿ ಬೆಳೆಯುವ ಸಾವಯವ ತರಕಾರಿ, ಹಣ್ಣು, ಧಾನ್ಯಗಳಿಂದಲೇ ಊಟದ ವ್ಯವಸ್ಥೆ ಮಾಡಲಿದೆಂದು ತಿಳಿಸಿದರು. ಶಾಲೆಯ ಪ್ರವೇಶಕ್ಕೆ ಪೋಷಕರು ಶಿಕ್ಷಣ ಪಡೆದಿರಬೇಕು ಎಂಬ ಯಾವುದೇ ನಿಯಮ ಇಲ್ಲ ಎಂದರು.

ಈ ತಿಂಗಳ 14 ರಂದು ಶಾಲೆಯ  ಪ್ರಾಥಮಿಕ ವಾರ್ಷಿಕೋತ್ಸವ ಸಂಜೆ 5 ಕ್ಕೆ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದು. ಶಿಕ್ಷಣ ತಜ್ಞ ಡಾ.ಗುರುರಾಜ್ ಕರ್ಜಿಗಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆಂದು ಬ್ರಹ್ಮಯ್ಯ ನಾಯ್ಡು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಸಂಸ್ಥೆಯ ಸುನೀಲ್ ಕುಮಾರ್ ಮತ್ತು ವಿವೇಕ್ ಇದ್ದರು.