Home ಜಿಲ್ಲೆ ಶ್ರೀ ಹುರಕಡ್ಲಿ ಅಜ್ಜನವರ ಜಯಂತಿ ಮಹೋತ್ಸವ

ಶ್ರೀ ಹುರಕಡ್ಲಿ ಅಜ್ಜನವರ ಜಯಂತಿ ಮಹೋತ್ಸವ


ನವಲಗುಂದ,ಮೇ.೧೭:
“ಶ್ರೀ ಹುರಕಡ್ಲಿ ಅಜ್ಜನವರು ಕಲಿಯುಗದ ಕಲ್ಪವೃಕ್ಷವಿದ್ದ ಹಾಗೆ. ಮನಸ್ಸಿನಿಂದ ಬೇಡಿಕೊಂಡ ಪ್ರತಿಯೊಬ್ಬ ಭಕ್ತರ ಇಷ್ಟಾರ್ಥಗಳನ್ನು ತಮ್ಮ ಆಶೀರ್ವಾದದ ಮೂಲಕ ಈಡೇರಿಸುತ್ತಾ ಬಂದಿದ್ದಾರೆ” ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

\
ಪಟ್ಟಣದ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಹುರಕಡ್ಲಿ ಅಜ್ಜನವರ ೧೨೫ನೇ ಜಯಂತಿ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಹುರಕಡ್ಲಿ ಅಜ್ಜನವರು ಸಮಾಜಕ್ಕೆ ಬೆಳಕಿನಂತಿದ್ದಾರೆ. ಅವರ ಸ್ಮರಣೆ ಮಾಡುವುದರಿಂದಲೇ ಮನಸ್ಸಿಗೆ ಅಪಾರ ನೆಮ್ಮದಿ ಸಿಗುತ್ತದೆ” ಎಂದ ಅವರು, ಇದೇ ಸಂದರ್ಭದಲ್ಲಿ ಜಾನಕಿ ಬ. ತಡಹಾಳ ಅವರು ಬರೆದ “ನನ್ನ ಅಜ್ಜ” ಎಂಬ ಪುಸ್ತಕವನ್ನು ಉಲ್ಲೇಖಿಸಿ, “ಈ ಕೃತಿ ಇಂದಿನ ಯುವ ತಲೆಮಾರಿಗೆ ಅತ್ಯಂತ ಉಪಯೋಗಕಾರಿಯಾಗಿದೆ” ಎಂದು ಆಶಿಸಿದರು.


ಇದೆ ವೇಳೆ “ನನ್ನ ಅಜ್ಜ” ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಣ್ಣಪ್ಪ ಭಾಗಿ ವಹಿಸಿದ್ದರು. ವೇದಿಕೆಯಲ್ಲಿ ಹಿರಿಯ ನ್ಯಾಯವಾದಿ ವಿ.ಜಿ. ಪಾಟೀಲ, ಅಂಬಲಿ ವಕೀಲರು, ಬಿ.ಎಂ. ಹುರಕಡ್ಲಿ, ಎಂ ವ್ಹಿ ಹೊಳೆಯಣ್ಣನವರ ಸೇರಿದಂತೆ ಊರಿನ ಪ್ರಮುಖರು ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದರು.