Home ಜಿಲ್ಲೆ ಮೈಸೂರು ಶ್ರೀ ಶಿವಶರಣ ಮಾದಾರ ಚೆನ್ನಯ್ಯ ನೀಲಗಾರರ ಸ್ವ ಸಹಾಯ ಸಂಘದ ಪ್ರಧಮ ವರ್ಷದ ವಾರ್ಷಿಕೋತ್ಸವ

ಶ್ರೀ ಶಿವಶರಣ ಮಾದಾರ ಚೆನ್ನಯ್ಯ ನೀಲಗಾರರ ಸ್ವ ಸಹಾಯ ಸಂಘದ ಪ್ರಧಮ ವರ್ಷದ ವಾರ್ಷಿಕೋತ್ಸವ

ಸಂಜೆವಾಣಿ ವಾರ್ತೆ
ಕೊಳ್ಳೇಗಾಲ.ಫೆ.24:
ಶ್ರೀ ಶಿವಶರಣ ಮಾದಾರ ಚೆನ್ನಯ್ಯ ನೀಲಗಾರರ ಸ್ವಸಹಾಯ ಸಂಘ (ರಿ) ದ ವಾರ್ಷಿಕೋತ್ಸವದ ಸಮಾರಂಭವನ್ನು ಧರೆಗೆ ದೊಡ್ದವರ ಸಂಸ್ಥಾನ ಮಠ ರಾಜ ಬೊಪ್ಪೇಗೌಡನಪುರದ ಆಡಳಿತ ಅಧಿಕಾರಿಗಳಾದ ಶ್ರೀ ಶ್ರೀ ಶ್ರೀ ಭರತ್ ರಾಜೇ ಅರಸ್ ರವರು ಉದ್ಘಾಟಿಸಿದರು.


ಕೊಳ್ಳೇಗಾಲ ಪಟ್ಟಣದ ಬಾಪುನಗರದಲ್ಲಿ ಶ್ರೀ ಶಿವಶರಣ ಮಾದಾರ ಚೆನ್ನಯ್ಯ ನೀಲಗಾರರ ಸ್ವಸಹಾಯ ಸಂಘ(ರಿ)ದ ಮೊದಲನೇ ವರ್ಷದ ಉದ್ಘಾಟನೆಯ ಕಾರ್ಯಕ್ರಮ ಹಮ್ಮಿಕೊಂಡಿದ್ದು ಗ್ರಾಮದ ಯಜಮಾನರುಗಳು,ನೀಲಗಾರರ, ಹಾಗೂ ಮುಖ್ಯಸ್ಥರುಗಳ ಸಮ್ಮುಖದಲ್ಲಿ ತುಂಬಾ ಅಚ್ಚುಕಟ್ಟಾಗಿ ಬೀದಿಯ ರಸ್ತೆಗಳಲ್ಲಿ ಮಹಿಳೆಯರೆಲ್ಲರೂ ರಂಗೋಲಿ ಹಾಕಿ ಮಾವಿನ ತೋರಣ, ಪುಷ್ಪಾಚನೆಯೊಂದಿಗೆ ಹಾಗೂ ಟಮಟೆ ದೊಳ್ಳು ವಾಧ್ಯಗಳ ಮೂಲಕ ಶ್ರೀ ಶ್ರೀ ಶ್ರೀ ಭರತ್ ರಾಜೇ ಅರಸ್ ರವರನ್ನು ಸ್ವಾಗತಿಸಲಾಯಿತು.
ಇವತ್ತಿನ ಕಾರ್ಯಕ್ರಮವು ವೈಯಕ್ತಿಕವಾಗಿ ನನಗೆ ಖುಷಿ ನೀಡಿದೆ. ಹಬ್ಬದ ವಾತಾವರಣವಿದ್ದು, ಯಜಮಾನರು, ಹಿರಿಯರು, ಮಹಿಳೆಯರು, ವಿದ್ಯಾರ್ಥಿಗಳು, ಯುವಕ ಸಂಘದವರು ಇಂದಿನ ಕಾರ್ಯಕ್ರಮದಲ್ಲಿ ಬಹಳ ಉತ್ಸಾಹಭರಿತದಿಂದ ಇರುವುದು ಸಂತೋಷ ಹಾಗೆಯೇ ಈ ಸಂಘದ ನೀಲಗಾರರು (ದೇವರ ಗುಡ್ದರು) ಸಂಘಟನೆಯನ್ನು ಇವತ್ತಿನ ಟೆಕ್ನಾಲಜಿಯಲ್ಲಿ ಇನ್ನೂ ಮುಂದುವರಿಸುತ್ತಿರುವುದು ಹೆಮ್ಮೆಯ ವಿಷಯ, ಸಮಾಜದಲ್ಲಿ ಪ್ರತಿಯೊಬ್ಬರು ಶಿಕ್ಷಣದಿಂದ ಮಾತ್ರ ಬದಲಾವಣೆಯನ್ನು ತರಲು ಸಾಧ್ಯ. ಶ್ರಮಿಕ ಸಮಾಜದವರು ಶ್ರಮದಿಂದಲೇ ಹಣಕಾಸು ಸಂಪಾದನೆ ಮಾಡಿ ಜೀವನ ನಡೆಸಿಕೊಳ್ಳುತ್ತಿದ್ದಾರೆ ಪ್ರತಿಯೊಬ್ಬರೊ ವಿಧ್ಯಾವಂತರಾಗಬೇಕು ಎಂದು ಶ್ರೀ ಶ್ರೀ ಶ್ರೀ ಭರತ್ ರಾಜೇ ಅರಸ್ ರವರು ತಿಳಿಸಿದರು.


ನೀಲಗಾರರು (ದೇವರ ಗುಡ್ದರು) ಇವತ್ತಿನ ದಿನ ಪ್ರತಿ ಮನೆಯಲ್ಲಿ ಮನೆಗೊಬ್ಬನಿದ್ದಾನೆ, ನಮ್ಮ ಜನ್ಮ ಆಕಸ್ಮಿಕ ನಾವುಗಳು ಇವತ್ತಿನ ಟೆಕ್ನಾಲಜಿ ಯುಗದಲ್ಲಿ ನಮ್ಮ ಪೂರ್ವಜರು ಹಾಕಿಕೊಟ್ಟಂತಹ ಹಿಂದೂ ಧರ್ಮದ ಪರಂಪರೆಯಲ್ಲಿ ಜೀವನ ನಡೆಸುತ್ತಿದ್ದೆವೆ.ಕ್ರಿ.ಪೂ. 5 ನೇ ಶತಮಾನದಲ್ಲಿ ಗೌತಮ ಬುದ್ಧರು ವೈಬೋಗ ಜೀವನ ನಡೆಸುತ್ತಿದ್ದು ಅರಮನೆಯಿಂದ ಹೊರ ಬಂದಾಗ ಅವರಿಗೆ ಕಂಡದ್ದು ಮನುಷ್ಯನ ಸಾವು, ಮುಪ್ಪು, ಕಷ್ಠ, ಇವುಗಳಿಂದ ಮನುಷ್ಯ ನರಳಾಡುವುದು, ಹಾಗೂ ಮೇಲು, ಕೀಳು, ಎಂಬಂತೆ ಜೀವನ ನಡೆಸುತ್ತಿರುವುದು ಎಲ್ಲವನ್ನು ಕಂಡಂತ ಗೌತಮ ಬುದ್ಧನು ಎಲ್ಲವನ್ನು ತ್ಯಜಿಸಿ ಲೋಕ ಪರ್ಯಟನೆ ಮಾಡಿದಾಗ ಮನುಷ್ಯನ ಜೀವನ ನಶ್ವರ ಎಂದರು.


ವೇದಿಕೆಯಲ್ಲಿ ಧರೆಗೆ ದೊಡ್ಡವರ ಸಂಸ್ಥಾನ ಮಠ ರಾಜ ಬೊಪ್ಪೇ ಗಾಡನ ಪುರದ ಶ್ರೀ ಶ್ರೀ ಶ್ರೀ ಭರತ್ ರಾಜೇ ಅರಸ್ ರವರು, ಎಲ್.ಐ.ಸಿ. ರಾಜಣ್ಣ, ಮಾದಪ್ಪ, ಜಗದೀಶ್ ಶಂಕನಪುರ, ಬಿ. ಗೋಪಾಲ್, ರಾಜೇಂದ್ರ ವಕೀಲರು, ಶಿವಮಲ್ಲು, ಕೊಳ್ಳೇಗಾಲ ತಾಲ್ಲೂಕು ಬಾಬು ಜಗಜೀವನ್‍ರಾಮ್ ಒಕ್ಕೂಟದ ನೂತನ ಖಜಾಂಚಿ ಎನ್.ಮುತ್ತು ರಾಜ್, ಸಂಘಟನೆ ಕಾರ್ಯದರ್ಶಿ ವಿ.ವಸಂತ ಕುಮಾರ್, ಮುಳ್ಳೂರು ಮಂಜು, ಕಿಂಗ್ಸ್ ಗಾರ್ಡೆ ನಿಯಾ ಮನೀಷ್ ಯಜಮಾನರಾದ ಮಾದೇವ, ದೊಡ್ಡ ಸಿದ್ದಯ್ಯ, ಕುಳ್ಳ, ಗಣೇಶ, ನೀಲಗಾರರ ಅಧ್ಯಕ್ಷರಾದ ಸಿ.ರಾಜು, ಉಪಾಧ್ಯಕರಾದ ಆನಂದ್,ಖಜಾಂಚಿ ನವೀನ, ಕಾರ್ಯದರ್ಶಿ ಚೇತನ್, ಸಿದ್ದರಾಜು, ಹಾಗೂ ನೀಲಗಾರರು, ಕಾರ್ಯಕ್ರಮದ ಆಯೋಜಕರಾದ ಶೇಷ, ಡಿ.ಸಿದ್ದರಾಜು, ಶ್ರೀಧರ್, ಕುಮಾರ್, ಮಹೇಶ, ರಾಜೇಶ್. ಶಿವಲಿಂಗ. ರಮೇಶ, ಮತ್ತು ಮಹಿಳೆಯರು, ಯುವಕ ಸಂಘ ದವರು, ಗ್ರಾಮಸ್ಥರು, ಕುಲಸ್ಥರುಗಳು ಭಾಗವಹಿಸಿದ್ದರು.