
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜ.22: ನಗರದ ಬಸಲಜಿ ರಾವ್ ರಸ್ತೆಯಲ್ಲಿನ ಲಕ್ಷ್ಮೀದೇವಿ ಎಸ್ ಲಿಂಗಣ್ಣ ಬಲಿಜ ಭವನದಲ್ಲಿ ಇಂದು ಮತ್ತು ನಾಳೆ ನಗರದ ಶ್ರೀ ಶಿರಿಡಿ ಸಾಯಿ ಸೇವಾ ಸತ್ಸಂಗ್ ಟ್ರಸ್ಟ್ ನ 25 ನೇ ವಾರ್ಷಿಕೋತ್ಸವ ಸಮಾರಂಭ ನಡೆಯುತ್ತಿದೆ.
ಇಂದು ಬೆಳಿಗ್ಗೆಯಿಂದ ಸಾಯಿಬಾಬಾ ಪ್ರತಿಮೆ ಪ್ರತಿಷ್ಟಾಪನೆ ಮಾಡಿ, ಸಾಮೂಹಿಕ ಸಾಯಿಸತ್ಯವ್ರತ ನಡೆಯಿತು. 70 ಕ್ಕೂ ಹೆಚ್ಚು ಜನ ದಂಪತಿಗಳು ಇದರಲ್ಲಿ ಪಾಲ್ಗೊಂಡಿದ್ದರು. ಬಾಬನಿಗೆ ಕ್ಷೀರ ಅಭಿಷೇಕ, ಪುಷ್ಪ ಅಭಿಷೇಕದೊಂದಿಗೆ ನಮನ ಸಲ್ಲಿಸಲಾಯ್ತು. ನಂತರ ಪ್ರಸಾದ ವಿನಯೋಗ ನಡೆಯಿತು. ಇದೇ ವೇಳೆ 30 ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು.
ಸಂಜೆ 5 ಕ್ಕೆ ಮದನಪಲ್ಲಿಯ ಪ್ರಕೃತಿ ವನ ಸಂಸ್ಥಾಪಕ ಪ್ರಕೃತಿ ಪ್ರಸಾದ್ ಅವರಿಂದ ಆರೋಗ್ಯ ಜಾಗೃತಿ ಹಮ್ಮಿಕೊಂಡಿದೆ. ಜೊತೆಗೆ ಮಹಿಳೆಯರಿಗೆ ಸಂಕ್ರಾಂತಿ ವಿಶೇಷ ತಿಳಿಸುವುದು, ಸೀರೆ ಅಲಂಕಾರ ಕಲಶ, ಆರತಿ ತಟ್ಟಿ ಅಲಂಕಾರ ಸ್ಪರ್ಧೆ ನಡೆಯಲಿದೆ.
ಎಲ್.ವಿ.ಆಸ್ಪತ್ರೆಯ ಡ.ಎಲ್.ಲಲಿತ, ಸ್ನೇಹ ಎನ್.ಬಿ. ಎಸ್ ಜಿ ಟಿ ಕಾಲೇಜಿನ ಪ್ರಾಂಶುಪಾಲರಾದ ಡಾ.ರೀನಾ ಪ್ರವೀಣ್ ಆರ್ ಪಾಲ್ಗೊಳ್ಳಲಿದ್ದಾರೆ.
ಈ ಕಾರ್ಯಕ್ರಮಗಳು ಟ್ರಸ್ಟ್ ನ ಅಧ್ಯಕ್ಷ ಆರ್.ಗೋಪಾಲಕೃಷ್ಣ, ಪದಾಧಿಕಾರಿಗಳು ಮತ್ತು ಟ್ರಸ್ಟಿಗಳಿಂದ ವ್ಯವಸ್ಥಿತವಸಗಿ ನಡೆಯುತ್ತಿವೆ.
ನಾಳೆ ಬೆಳಿಗ್ಗೆ ನೃತ್ಯ ಪ್ರದರ್ಶನ, 11 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ಮೇಯರ್ ಪಿ.ಗಾದೆಪ್ಪ, ದಕ್ಷಿಣ ಮಧ್ಯ ರೈಲ್ವೆಯ ಝಡ್ ಆರ್ ಸಿಸಿ ಸದಸ್ಯ ಮಹೇಂದ್ರ ಸಿಂಘಿ ಮೊದಲಾದವರು ಪಾಲ್ಗೊಳ್ಳಲಿದ್ದು. ಇದೇ ವೇಳೆ ಟ್ರಸ್ಟ್ ನಿಂದ ಕೃತಾಂಗಗಳ ವಿತರಣೆ, ಟೈಲರಿಂಗ್ ಮತ್ತು ಕಂಪ್ಯೂಟರ್ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಣೆ ನಡೆಯಲಿದೆ.
























