
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜ.23: ನಗರದ ಬಾಲಾಜಿ ರಾವ್ ರಸ್ತೆಯಲ್ಲಿನ ಲಕ್ಷ್ಮೀದೇವಿ ಎಸ್. ಲಿಂಗಣ್ಣ ಬಲಿಜ ಭವನದಲ್ಲಿ ನಗರದ ಶ್ರೀ ಶಿರಿಡಿ ಸಾಯಿ ಸೇವಾ ಸತ್ಸಂಗ್ ಟ್ರಸ್ಟ್ ನ 25 ನೇ ವಾರ್ಷಿಕೋತ್ಸವದ ಸಮಾರೋಪ ಸಮಾರಂಭ ಇಂದು ನಡೆಯಿತು.
ಬೆಳಿಗ್ಗೆ ಅಭಿಷೇಕ್ ಮತ್ತು ತಂಡದಿಂದ ನೃತ್ಯಪ್ರದರ್ಶನ ನಡೆಯಿತು. ಬಳಿಕ ಮೇಯರ್ ಪಿ.ಗಾದೆಪ್ಪ ಅವರು ಸಮಾರೋಪ ಸಮಾರಂಭ ಉದ್ಘಾಟಿಸಿ. ಈ ಸೇವಾ ಟ್ರಸ್ಟ್ ಮೂಲಕ ನಡೆಯುತ್ತಿರುವ ಸಾಮಾಜಿಕ ಸೇವಾ ಕಾರ್ಯಗಳನ್ನು ಶ್ಲಾಘಿಸಿದರು.
ದಕ್ಷಿಣ ಮಧ್ಯ ರೈಲ್ವೆಯ ಝಡ್ ಆರ್ ಸಿಸಿ ಸದಸ್ಯ ಮಹೇಂದ್ರ ಸಿಂಘಿ ಮೊದಲಾದವರು ಟ್ರಸ್ಟ್ ನಿಂದ ಫಲಾನ೭ಭವಿಗಳಿಗೆ ಕೃತಾಂಗಗಳ ವಿತರಣೆ, ಟೈಲರಿಂಗ್ ಮತ್ತು ಕಂಪ್ಯೂಟರ್ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಣೆ ನಡೆಯಿತು.
ನಿನ್ನೆ ಸಂಜೆ ಮದನಪಲ್ಲಿಯ ಪ್ರಕೃತಿ ವನ ಸಂಸ್ಥಾಪಕ ಪ್ರಕೃತಿ ಪ್ರಸಾದ್ ಅವರಿಂದ ಆರೋಗ್ಯ ಜಾಗೃತಿ ಬಗ್ಗೆ ತಿಳಿಸಿದರು. ಮಹಿಳೆಯರಿಗೆ ಸಂಕ್ರಾಂತಿ ವಿಶೇಷ ತಿಳಿಸಿ, ಸೀರೆ ಅಲಂಕಾರ ಕಲಶ, ಆರತಿ ತಟ್ಟಿ ಅಲಂಕಾರ ಸ್ಪರ್ಧೆ ನಡೆಯಿತು.
ಎಲ್.ವಿ.ಆಸ್ಪತ್ರೆಯ ಡಾ.ಎಲ್.ಲಲಿತ, ಸ್ನೇಹ ಎನ್.ಬಿ. ಎಸ್ ಜಿ ಟಿ ಕಾಲೇಜಿನ ಪ್ರಾಂಶುಪಾಲರಾದ ಡಾ.ರೀನಾ ಪ್ರವೀಣ್ ಆರ್ ಪಾಲ್ಗೊಂಡಿದ್ದರು.
ಈ ಕಾರ್ಯಕ್ರಮಗಳಲ್ಲಿ ಟ್ರಸ್ಟ್ ನ ಅಧ್ಯಕ್ಷ ಆರ್.ಗೋಪಾಲಕೃಷ್ಣ, ಪದಾಧಿಕಾರಿಗಳು ಮತ್ತು ಟ್ರಸ್ಟಿಗಳು ಇದ್ದರು.
























