Home ಜಿಲ್ಲೆ ಮಂಗಳೂರು ಶ್ರೀ ವಿಶ್ವಬ್ರಾಹ್ಮಣ ಮಹಿಳಾ ಸಮಿತಿ; ಶ್ರೀ ಮಂಗಳಗೌರಿ ಪೂಜೆ

ಶ್ರೀ ವಿಶ್ವಬ್ರಾಹ್ಮಣ ಮಹಿಳಾ ಸಮಿತಿ; ಶ್ರೀ ಮಂಗಳಗೌರಿ ಪೂಜೆ

ಶ್ರೀ ವಿಶ್ವಬ್ರಾಹ್ಮಣ ಮಹಿಳಾ ಸಮಿತಿ ವತಿಯಿಂದ ಶ್ರೀ ಮಂಗಳಗೌರಿ ಪೂಜೆ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಪಟ್ಟೆ ಲಿಂಗಪ್ಪ ಆಚಾರ್ಯ ಕಲ್ಯಾಣ ಮಂಟಪ ದಲ್ಲಿ ೧೮.೮.೨೦೨೬ ರಂದು ಕ್ಷೇತ್ರದ ಅರ್ಚಕರಾದ ವಿಘ್ನೇಶ್ ಪುರೋಹಿತರ ಆಚಾರ್ಯತ್ವದಲ್ಲಿ ಮಂಗಳಗೌರಿ ದೇವರ ಬೆಳ್ಳಿಯ ಮುಖ ಕವಚವನ್ನು ರಜತ ಕಲಶದಲ್ಲಿರಿಸಿ ವಿಶೇಷ ಅಲಂಕಾರದೊಂದಿಗೆ ಪೂಜೆ ನೆರವೇರಿಸಿದರು . ಮಹಿಳಾ ಸಮಿತಿ ಸದಸ್ಯರು ಪ್ರಾರಂಭ ದಲ್ಲಿ ಲಲಿತಾ ಸಹಸ್ರ ನಾಮ ಪಠಣೆ, ದೇವಿ ಪಾರಾಯಣ ಮಾಡಿದರು. ವಿಶ್ವಬ್ರಾಹ್ಮಣ ಮಹಿಳಾ ಸಮಿತಿಯ ಅಧ್ಯಕ್ಷೆ ಶ್ರೀಮತಿ ಅರುಣಾ ಸುರೇಶ್, ಮಹಿಳಾ ಸಮಿತಿಯ ಕಾರ್ಯ ಕಾರಿ ಸಮಿತಿಯ ಪದಾಧಿಕಾರಿಗಳು, ಸದಸ್ಯೆಯರು, ಹಾಗೂ ಅನೇಕ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದರು. ಸುಮಂಗಲಿಯರಿಗೆ ಈ ಸಂದರ್ಭ ವಾಯನ ದಾನ ಮಾಡಲಾಯಿತು.
ಕ್ಷೇತ್ರದ ಆಡಳಿತಾಧಿಕಾರಿ ಕೆ. ಉಮೇಶ್ ಆಚಾರ್ಯ, ಪಾಂಡೇಶ್ವರ, ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಮಾಜಿ ಮೊಕ್ತೇಸರರು, ಆಡಳಿತ ಮಂಡಳಿಯ ಮಾಜಿ ಸದಸ್ಯರು ಶ್ರೀ ಕಾಳಿಕಾಂಬಾ ಸೇವಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.