Home ಜಿಲ್ಲೆ ಮಂಗಳೂರು ಶ್ರೀ ಮಹಾಸತಿ ಅಮ್ಮನಿಗೆ ಸ್ವರ್ಣ ಮುಖ ಸಮರ್ಪಣೆ

ಶ್ರೀ ಮಹಾಸತಿ ಅಮ್ಮನಿಗೆ ಸ್ವರ್ಣ ಮುಖ ಸಮರ್ಪಣೆ

ಮಂಗಳೂರು- ಶ್ರೀ ಮಹಾಸತಿ , ಶ್ರೀ ಭಗವತಿ ಅಮ್ಮನವರ ಕಟ್ಟೆ, ಕರಂಗಲಪಾಡಿ, ಮಂಗಳೂರು ಇಲ್ಲಿನ ಶ್ರೀ ಮಹಾಸತಿ ಅಮ್ಮನವರಿಗೆ ಸ್ವರ್ಣದ ಮುಖ ಅರ್ಪಣೆಯು ಫೆಬ್ರವರಿ ೧೩ ರಂದು ಬೆಳಿಗ್ಗೆ ಭಜಕರು ಒಟ್ಟು ಸೇರಿ ಸಮರ್ಪಿಸಿದರು.


ಮಹಾಸತಿ ಕಟ್ಟೆ ಎದುರಿಗಿರುವ ಶ್ರೀ ಚಂದ್ರಮೌಳೀಶ್ವರ ದೇವರಿಗೆ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಮಹಾಸತಿ ಕಟ್ಟೆಯ ಬಳಿಯ ಭಗವತಿ ಅಮ್ನನ ಕಟ್ಟೆ ಹಾಗೂ ಅಶ್ವಥ್ತ ಕಟ್ಟೆ ಬಳಿ ಸಾಗಿ ಬಂದು ಶ್ರೀ ಮಹಾಸತಿ ಅಮ್ಮನ ಪೂಜಾ ಕಾರ್ಯವನ್ನು ನೆರವೇರಿಸುತ್ತಿರುವ
ಸುಧನ್ ಜೀಯವರ ಮೂಲಕ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿ ಶ್ರೀ ಮಹಾಸತಿಗೆ ಸ್ವರ್ಣ ಮುಖ ಕವಚವನ್ನು ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ಸೇವಕರಾದ ನವೀನ್, ರೋಷನ್, ಸ್ವಸ್ತಿಕ್, ರವಿ ಶೆಟ್ಟಿ ಹಾಗೂ ಮಹಾಸತಿ ಅಮ್ಮನ ಭಕ್ತರ ಸಮೂಹದವರು ಉಪಸ್ತಿತರಿದ್ದರು.