ಸಂಜೆವಾಣಿ ವಾರ್ತೆ
ಹನೂರು.ಸೆ.15:- ತಾಲ್ಲೂಕು ವ್ಯಾಪ್ತಿಯ ಎಂಟಳ್ಳಿ ಗ್ರಾಮಗಳ ಪೀಠವಾದ ಬಂಡಳ್ಳಿ ದೊಡ್ಡಮಠದ ಪೀಠಾದಿಪತಿಗಳು ಪರಮಪೂಜ್ಯ ಶ್ರೀ ಶ್ರೀ ಶ್ರೀ ಫಲಹಾರ ಪ್ರಭುದೇವ ಸ್ವಾಮೀಜಿಯವರು ಹೃದಯಾಘಾತದಿಂದ ಲಿಂಗೈಕ್ಯೆರಾಗಿದ್ದಾರೆ.
ಶ್ರೀಗಳು ಅಪಾರ ಭಕ್ತರನ್ನು ಅಗಲಿದ್ದಾರೆ ಈ ಭಾಗದ “ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದಿರುವ ಇವರು ಈ ಭಾಗದ ಶ್ರೀಗಳು ಎಂಟಳ್ಳಿ ಭಾಗದ ಆರಾಧ್ಯ ದೈವರಾಗಿದ್ದರು.
ಶ್ರೀಗಳ ಅಂತಿಮ ವಿಧಿವಿಧಾನಗಳು ದರ್ಶನ ವ್ಯವಸ್ಥೆ, ಪಲ್ಲಕ್ಕಿ ಉತ್ಸವ ಇಂದು ದಿನಾಂಕ 15-09-2025 ಸೋಮವಾರ ದಂದು ಬಂಡಳ್ಳಿ ದೊಡ್ಡ ಮಠದಲ್ಲಿ ಸಾಂಪ್ರದಾಯಿಕವಾಗಿ ಜರುಗಲಿದೆ. ಲಿಂಗೈಕ್ಯರು ಹನೂರು ಭಾಗದಲ್ಲಷ್ಟೇ ಅಲ್ಲ ನಾಡಿನ ವಿವಿಧ ಭಾಗದಲ್ಲಿ ಅಸಂಖ್ಯಾತ ಭಕ್ತ ವೃಂದವನ್ನ ಹೊಂದಿದ್ದರು ಶ್ರೀಗಳ ಅಗಲಿಕೆಯಿಂದ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.
ಶ್ರೀಗಳ ಅಗಲಿಕೆ ನೋವನ್ನು ತಡೆದುಕೊಳ್ಳುವ ಚೈತನ್ಯವನ್ನು ನೀಡಲೆಂದು ಬಸವಾದಿ ಪ್ರಮಥರಲ್ಲಿ ಪ್ರಾರ್ಥಿಸಿಕೊಳ್ಳುತ್ತಾ ತಾಲೂಕು ಬಸವ ಕೇಂದ್ರ ಹಾಗೂ ಜಿಲ್ಲಾ ಬಸವ ಕೇಂದ್ರ ಸಂತಾಪ ಸೂಚಿಸಿದೆ.



























