ಶ್ರೀ ನಂದ ವಸತಿ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ.


ಸಂಜೆವಾಣಿ ವಾರ್ತೆ
ಬಳ್ಳಾರಿ.ನ.14
-ಬಳ್ಳಾರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ತಾಲೂಕ ಮಟ್ಟದ ಮತ್ತು ಜಿಲ್ಲಾ ಮಟ್ಟದ ಕ್ರೀಡಾಂಗಣದಲ್ಲಿ ಬಳ್ಳಾರಿಯ ಪ್ರತಿಷ್ಠಿತ ಶಾಲೆಯಾದ ಶ್ರೀ ನಂದ ವಸತಿ ಶಾಲೆಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಾದ  ಸತ್ಯಸಾಯಿವರ್ಮ( 7ನೇ ತರಗತಿ) 400 ಮತ್ತು 600 ಮೀಟರ್ ರನ್ನಿಂಗ್‌ನಲ್ಲಿ ಪ್ರಥಮಸ್ಥಾನ,  ಕಾವ್ಯಶ್ರೀ ಕೆ (7ನೇ ತರಗತಿ )400 ಮೀಟರ್ ರನ್ನಿಂಗ್‌ನಲ್ಲಿ ದ್ವಿತೀಯಸ್ಥಾನ ಪಡೆದಿದ್ದಾರೆ
ಪ್ರೌಢ ವಿಭಾಗದಲ್ಲಿ  ಬಿ. ಎಸ್. ಪ್ರದೀಪ್( 9ನೇ ತರಗತಿ) 1500 ಮತ್ತು 800 ಮೀಟರ್ ರನ್ನಿಂಗ್‌ನಲ್ಲಿ ದ್ವಿತೀಯಸ್ಥಾನ ಮತ್ತು ಉದ್ದಜಿಗಿತದಲ್ಲಿ ದ್ವಿತೀಯಸ್ಥಾನ, . ಕಾವ್ಯಶ್ರೀ ಕೆ (9ನೇ ತರಗತಿ) 400 ಮೀಟರ್ ರನ್ನಿಂಗ್‌ನಲ್ಲಿ ದ್ವಿತೀಯಸ್ಥಾನ ಮತ್ತು ಎತ್ತರಜಿಗಿತದಲ್ಲಿ ಪ್ರಥಮಸ್ಥಾನ ,. ಸುಶಾಂತ( 9ನೇ ತರಗತಿ) ಎತ್ತರಜಿಗಿತದಲ್ಲಿ ಪ್ರಥಮಸ್ಥಾನ . ಕಾವ್ಯಶ್ರೀ ಕೆ, ಶ್ರೀನಿಧಿ, ತನುಶ್ರೀ, ದಿವ್ಯಾ( 9ನೇ ತರಗತಿ )ರಿಲೇ ಆಟದಲ್ಲಿ ದ್ವಿತೀಯಸ್ಥಾನ ಪಡೆದುಕೊಂಡಿರುತ್ತಾರೆ.
ಜಿಲ್ಲಾ ಮಟ್ಟದಲ್ಲಿ-
ಸತ್ಯಸಾಯಿವರ್ಮ (7ನೇ ತರಗತಿ) 600 ಮೀಟರ್ ರನ್ನಿಂಗ್‌ನಲ್ಲಿ ಪ್ರಥಮಸ್ಥಾನ,
ಬಿ. ಎಸ್. ಪ್ರದೀಪ್( 9ನೇ ತರಗತಿ) ಉದ್ದಜಿಗಿತದಲ್ಲಿ ಪ್ರಥಮಸ್ಥಾನ,
ಕಾವ್ಯಶ್ರೀ ಕೆ( 9ನೇ ತರಗತಿ) 400 ಮೀಟರ್ ರನ್ನಿಂಗ್‌ನಲ್ಲಿ ದ್ವಿತೀಯಸ್ಥಾನ,
ರಾಮೋಜಿ (9ನೇ ತರಗತಿ) ಚೆಸ್‌ ಆಟದಲ್ಲಿ ಪ್ರಥಮಸ್ಥಾನ ಈ ನಾಲ್ಕು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶ್ರೀ ನಂದ ವಸತಿ ಶಾಲೆ ಹಾಗು ಸಂಯುಕ್ತ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರಾದ  ವಿ ಗಾಂಧಿ ರವರು ಮಾತನಾಡಿ ,ಆಟಆಡುವದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಮನುಷ್ಯ ಸದೃಢನಾಗುತ್ತಾನೆ. ಆರೋಗ್ಯದ ಜೊತೆಗೆ ಜೀವನದಲ್ಲಿ ಯಾವಾಗಲು ಸ್ಪೂರ್ತಿದಾಯಕ ವ್ಯಕ್ತಿಗಳಾಗಿ ಬೆಳೆಯಲು ಕಾರಣವಾಗುತ್ತಾರೆ. ಅದ್ದರಿಂದ ಓದುವುದರ ಜೊತೆಗೆ ಆಟವಾಡುವುದನ್ನು ಅಭ್ಯಾಸಮಾಡಿಕೊಳ್ಳಿ ಎಂದರು. ದೈಹಿಕ ಶಿಕ್ಷಕ  ಎಂ. ಖಾದರಭಾಷ ರನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ  ವಿ ರಮಣ್ ಕುಮಾರ್, ಶ್ರೀ ವಿ ಮುರಳಿಕೃಷ್ಣ,  ಕಿಶೋರ್ ಕುಮಾರ ಅಂಗಡಿ, ಶ್ರೀಮತಿ ಹೆಚ್.ಜೆ ಸರಿತ,  ಕೆ.ಲಕ್ಷ್ಮಿಕಾಂತ್  ವಿನಯ್‌ ಕುಮಾ‌ರ್ ಚೌದರಿ, ಶ್ರೀಮತಿ ರಾಜೇಶ್ವರಿ ಶಾಲೆಯ ಸಿಬ್ಬಂದಿವರ್ಗದವರು ಮತ್ತು ಶಾಲಾ ಮಕ್ಕಳು ಭಾಗವಹಿಸಿದ್ದರು .