
ಸಂಜೆವಾಣಿ ವಾರ್ತೆ
ಹನೂರು.ಜ.10:- ಲೋಕ ಕಲ್ಯಾಣಾರ್ಥವಾಗಿ ರೈತರ ಭವಣೆ ದೂರವಾಗಿ ಬದುಕು ಹಸನಾಗಲೆಂದು ಪ್ರಾರ್ಥಿಸಿ ಶ್ರೀ ಮಲೈ ಮಹದೇಶ್ವರ ಬೆಟ್ಟಕ್ಕೆ 10 ನೇ ವರ್ಷದ ಶಾಂತಿ, ಸೌಹಾರ್ದ ಮತ್ತು ಸದ್ಭಾವನಾ ಪಾದಯಾತ್ರೆಯು ಪೂಜ್ಯ ಶ್ರೀ ಶ್ರೀ ನಟರಾಜ ಮಹಾಸ್ವಾಮಿಗಳ ನೇತೃತ್ವದಲ್ಲಿ ಸಾಗಿತು.
ಮೈಸೂರು ಜಿಲ್ಲೆ, ಹುಣಸೂರು ತಾಲೂಕಿನ ಗಾವಡಗೆರೆ ಶ್ರೀ ಗುರುಲಿಂಗ ಜಂಗಮದೇವರು ಮಠ ಶ್ರೀ ಶ್ರೀ ನಟರಾಜ ಮಹಾಸ್ವಾಮಿಗಳ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಶ್ರೀ ಮಲೆ ಮಾದೇಶ್ವರ ಬೆಟ್ಟಕ್ಕೆ ಹತ್ತನೇ ವರ್ಷದ ಪಾದಯಾತ್ರೆಯೂ ಸೋಮವಾರ ಪ್ರಾರಂಭಿಸಿ ಈಗಾಗಲೇ ಹಲವು ಗ್ರಾಮಗಳ ಮಾರ್ಗವಾಗಿ ಹನೂರು ಪಟ್ಟಣಕ್ಕೆ ಆಗಮಿಸಿದ್ದಾರೆ.
ಗಾವಡಗೆರೆ ಶ್ರೀ ಮಠದಿಂದ ಪ್ರಾರಂಭಿಸಿದ ಪಾದಯಾತ್ರೆಯ ಶ್ರೀಗಳು ಸದ್ಭಕ್ತರು ಪಾದಯಾತ್ರೆಯ ಮೂಲಕ ಕೆ.ಆರ್ ನಗರ, ಮೈಸೂರು, ಮಾರ್ಗವಾಗಿ ಟಿ.ನರಸೀಪುರ ಮುಳ್ಳೂರು ಸೇರಿದಂತೆ ಕೊಳ್ಳೇಗಾಲದಲ್ಲಿ ವಾಸ್ತವ್ಯ ಹೂಡಿ ಇಂದು ಶುಕ್ರವಾರ ಮತ್ತೆ ಪಾದಯಾತ್ರೆಯನ್ನು ಪ್ರಾರಂಭಿಸಿ ದೊಡ್ಡಿಂದುವಾಡಿ ಕಾಮಗೆರೆ ಗ್ರಾಮದ ಮಾರ್ಗವಾಗಿ ಹನೂರು ಪಟ್ಟಣಕ್ಕೆ ಆಗಮಿಸಿದರು.
ಕೆ.ಆರ್ ನಗರ. ಹುಣಸೂರು ಕಣಗಾಲು, ಹುಳುಗನಹಳ್ಳಿ, ವಲ್ಲಿಮನುಗನಹಳ್ಳಿ, ಹರೀನಹಳ್ಳಿ ಹೇಳಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಸುಮಾರು 300 ಕ್ಕೂ ಹೆಚ್ಚಿನ ಸದ್ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡು ಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೆ ಸ್ವಾಮಿಯ ದರ್ಶನಕ್ಕಾಗಿ ಪಾದಯಾತ್ರೆಯ ಮೂಲಕ ಹೊರಟಿದ್ದಾರೆ.




























