
ಸಂಜೆವಾಣಿ ವಾರ್ತೆ
ತಿ.ನರಸೀಪುರ.ಜ.22- ತಾಲೂಕಿನ ಧಾರ್ಮಿಕ ಸಭೆಗೆ ಮೊದಲು ಬೆಳಗ್ಗೆ ಸುಕ್ಷೇತ್ರ ಮಲ್ಲನಮೂಲೆ ಮಠದ ಶ್ರೀ ಇಮ್ಮಡಿ ಸಿದ್ದಲಿಂಗಸ್ವಾಮಿಯವರ ಪಾದಪೂಜೆಯನ್ನ ನೆರವೇರಿಸಲಾಯಿತು.ಹಲವು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಮಠದಲ್ಲಿ ಧಾರ್ಮಿಕ ಸಭೆಗೆ ಮೊದಲು ಬೆಳಗ್ಗೆ ಸುಕ್ಷೇತ್ರ ಮಲ್ಲನಮೂಲೆ ಮಠದ ಶ್ರೀ ಇಮ್ಮಡಿ ಸಿದ್ದಲಿಂಗಸ್ವಾಮಿಯವರ ಪಾದಪೂಜೆಯನ್ನ ನೆರವೇರಿಸಲಾಯಿತು. ಮಠಕ್ಕೆ ಭೇಟಿ ನೀಡಿದ ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದ ಸುನೀಲ್ ಬೋಸ್ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು.
ಬಳಿಕ ಸಂಸದ ಸುನೀಲ್ ಬೋಸ್ ಮಾತನಾಡಿ, ಮಠಮಾನ್ಯಗಳು ಸಮಾಜದ ಕಟ್ಟಕಡೆಯ ಕುಟುಂಬಗಳು, ಭಕ್ತರ ಸಮಸ್ಯೆ, ಸಂಕಷ್ಟವನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡದೆ ಇದ್ದಿದ್ದರೆ ಸಮಾಜವನ್ನು ಒಳ್ಳೆಯ ಮಾರ್ಗಕ್ಕೆ ತೆಗೆದುಕೊಂಡು ಹೋಗಲು ನಮ್ಮಂತಹ ಯಾರಿದಂದಲೂ ಸಾಧ್ಯವಾಗುತ್ತಿರಲಿಲ್ಲ. ದಕ್ಷಿಣ ಭಾರತದಲ್ಲಿ ಸಿದ್ಧಗಂಗಾ ಮಠ, ಆದಿಚುಂಚನಗಿರಿಮಠ, ಸುತ್ತೂರುಮಠ ಸೇರಿದಂತೆ ಹಲವು ಮಠಗಳು ಧಾರ್ಮಿಕ ಕಾರ?ಯಕ್ರಮವನ್ನು ನೀಡುವ ಮೂಲಕ ಸಮಾಜವನ್ನು ಶೈಕ್ಷ ಣಿಕ, ಧಾರ್ಮಿಕವಾಗಿ ಅಭಿವೃದ್ಧಿಪಡಿಸುವ ಕೆಲಸ ಮಾಡುತ್ತಿವೆ ಎಂದರು
ಧಾರ್ಮಿಕ ಸಭೆಯಲ್ಲಿ ವಾಟಾಳು ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಈ ಹಿಂದೆ ದೊಡ್ಡ ಮಠಗಳನ್ನು ಹೊರತು ಪಡಿಸಿ ಭಿಕ್ಷದ ಮಠಗಳಿರಲಿಲ್ಲ, ಹಲವಾರು ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆ ಇಲ್ಲದ್ದನ್ನು ಗಮನಿಸಿದ ಗುರುಮಲ್ಲೇಶ್ವರರು ಜನರಿಗೆ ತೊಂದರೆ ಯಾಗುವುದನ್ನು ತಪ್ಪಿಸಲು ಪ್ರತಿ ಗ್ರಾಮದಲ್ಲೂ ಭಿಕ್ಷಾ ಮಠಗಳ ಸ್ಥಾಪನೆ ಮಾಡಿ,ಆ ಮೂಲಕ ಕಾಯಕ ಮಾಡಿ ಮಠಕ್ಕೆ ಬಂದ ಜನರಿಗೆ ದಾಸೋಹ ಮಾಡಬೇಕೆಂಬ ಉದ್ದೇಶ ಹೊಂದಿದ್ದರು.ಹಾಗಾಗಿ ನೂರಾರು ಮಠಗಳನ್ನು ಅವರು ಸ್ಥಾಪನೆ ಮಾಡಿದರು.ಇದಿಷ್ಟೇ ಅಲ್ಲದೇ ವೀರಶೈವರು,ಲಿಂಗಾಯತರು ಹಣೆಗೆ ಭಸ್ಮ ಧರಿಸುತ್ತಿರಲಿಲ್ಲ,ಲಿಂಗಧಾರಣೆ ಮಾಡುತ್ತಿರಲಿಲ್ಲ,ಅಷ್ಟಾವರಣದಲ್ಲಿರುವ ಗುರು,ಲಿಂಗ,ಜಂಗಮ,ಪಾದೋಧಕ,ಪ್ರಸಾದ,ರುದ್ರಾಕ್ಷಿ,ಭಸ್ಮ ಇದಾವುದನ್ನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಗುರು ಮಲ್ಲೇಶ್ವರರು ಮುಖದ ತುಂಬೆಲ್ಲಾ ಭಸ್ಮ ಧರಿಸುತ್ತಿದ್ದರು.ಇದು ಮುಂದಿನ ಪೀಳಿಗೆಯಿಂದ ಮುಂದುವರೆಯಲಿ ಎಂಬ ಉದ್ದೇಶ ಶ್ರೀಗಳದ್ದಾಗಿತ್ತು.ಹಾಗಾಗಿ ಎಲ್ಲರೂ ಭಸ್ಮ ಧಾರಣೆ ಮಾಡಬೇಕು ಎಂದು ಸ್ವಾಮೀಜಿ ಕರೆ ನೀಡಿದರು.
ಸಭೆಯಲ್ಲಿ ಮಾಜಿ ಶಾಸಕ ಎಂ.ಅಶ್ವಿನ್ ಕುಮಾರ್, ಜಿ.ಪಂ.ಮಾಜಿ ಸದಸ್ಯ ಬಿ.ಎನ್.ಸದಾನಂದ, ಗ್ರಾಮ ವಿದ್ಯೋದಯ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಕೆ.ಪಿ.ಮಹದೇವಸ್ವಾಮಿ, ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಸಿ.ಎಂ.ಪ್ರಕಾಶ್, ನಂದಿನಿ ಸುದೀಪ್,ಗೌಡ್ರ ಟಿ.ನಂಜಪ್ಪ, ತಾ.ಪಂ ಮಾಜಿ ಅಧ್ಯಕ್ಷ ಹೆಚ್.ಎನ್.ಉಮೇಶ್, ಮಲ್ಲನ ಮೂಲೆ ಕಂಬಳೀಶ್ವರ ಮಠದ ಇಮ್ಮಡಿ ಸಿದ್ದಲಿಂಗಸ್ವಾಮಿ, ದೇವನೂರು ಮಠದ ಮಹಾಂತಸ್ವಾಮಿ,ಮಾಡ್ರಹಳ್ಳಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿ,ಮರಿಯಾಲ ಮಹಾಸಂಸ್ಥಾನಮಠದ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮಿ,ಸಿದ್ದಮಲ್ಲೇಶ್ವರ ವಿರಕ್ತಮಠದ ಚನ್ನ ಬಸವಸ್ವಾಮಿ,ಆಲಹಳ್ಳಿ ಪಟ್ಟದ ಮಠದ ಇಮ್ಮಡಿ ಬಸಪ್ಪಸ್ವಾಮಿ,ಕುರುಬನ ಕಟ್ಟೆ ವರುಣ್ ಲಿಂಗರಾಜೇಅರಸ್,ನೆರಗ್ಯಾತನಹಳ್ಳಿ ಮಠದ ಇಮ್ಮಡಿ ಶಿವಕುಮಾರಸ್ವಾಮಿ,ವೀರಪ್ಪ ಒಡೆಯರ ಹುಂಡಿ ಮಠದ ರೇಣುಕಾಶಿವಾಚಾರ್ಯ ಸ್ವಾಮಿಗಳು, ಚಿಲಕವಾಡಿ ಬೆಟ್ಟದ ಇಮ್ಮಡಿ ಗುರುಲಿಂಗಸ್ವಾಮಿ, ಹೊಸೂರಂಡಿ ಮಠದ ರಾಜಶೇಖರಸ್ವಾಮಿ ಸೇರಿದಂತೆ ಯಜಮಾನರು ಹಾಗೂ ಗ್ರಾಮಸ್ಥರು ಹಾಜರಿದ್ದರು.


























