
ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ.07 ಕಲ್ಚರಲ್ ಆಕ್ಟಿವಿಟೀಸ್ ಅಸೋಸಿಯೇಷನ್ (ರಿ) ವತಿಯಿಂದ ಶ್ರೀ ಶ್ರೀ ಶ್ರೀ ಸದ್ಗುರು ಸದಾನಂದ ಆಶ್ರಮ ಆಧ್ಯಾತ್ಮಿಕ ಮತ್ತು ಧ್ಯಾನಕೇಂದ್ರ (ರಿ), ಶ್ರೀ ಕ್ಷೇತ್ರ, ಸದ್ಗುರು ಕಾಲೋನಿ, ಮೋಕಾರಸ್ತೆ, ಬಳ್ಳಾರಿಯಲ್ಲಿ ಪೂಜ್ಯ ಪಂಡಿಂತ್ ಮಠಂ ಗುರುಪ್ರಸಾದ್ ರಚಿತ ಶ್ರೀ ಉಮಾ ಮಹೇಶ್ವರ ಪಂಚಾಂಗ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ಗುರುಚರಣಾನಂದಗಿರಿ ಮಾತಾಜಿ (ಶರಣಮ್ಮ ತಾಯಿಯವರು) ಕೊಕ್ಕರಚೇಡು, ಪೂಜ್ಯ ಶ್ರೀ ವಿವೇಕಾನಂದ ಸ್ವಾಮಿ , ಸದ್ಗುರು ಸದಾನಂದ ಆಶ್ರಮ ಬಳ್ಳಾರಿ ರವರು ವಹಿಸಿದ್ದರು.
ಶ್ರೀ ನಾಗರಾಜ .ಕೆ.ಎ.ಎಸ್., ಆಡಳಿತ ಆಧಿಕಾರಿ ಮತ್ತು ವಿಶೇಷ ಭೂ ಸ್ವಾಧೀನ ಅಧಿಕಾರಿ, ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ಬೆಂಗಳೂರು ರವರು ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡುತ್ತಾ ಪಂಚಾಂಗವು ದಿನನಿತ್ಯದ ಪರಿಚಯವನ್ನು ತಿಳಿಸುತ್ತದೆ. ಇದು ನಮ್ಮ ಸಂಸ್ಕೃತಿಯ ಅನಾಧಿಕಾಲದಿಂದಲೂ ನಡೆದುಬಂದ ದಾರಿಯಾಗಿದೆ. ನಮ್ಮ ಪಂಚಾಂಗ ರಚನೆಯ ಮಾದರಿ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.
ಶ್ರೀ ಉಮಾ ಮಹೇಶ್ವರ ಪಂಚಾಂಗವನ್ನು ಬಳ್ಳಾರಿ ಮಹಾನಗರ ಪಾಲಿಕೆ ಮಹಾಪೌರರಾದ ಶ್ರೀ ಪಿ. ಗಾದೆಪ್ಪ ರವರು ಬಿಡುಗಡೆಗೊಳಿಸಿ ಮಾತನಾಡುತ್ತಾ ನಮ್ಮ ಸಂಪ್ರದಾಯ ಪದ್ದತಿಗಳು ವಿಶ್ವಕ್ಕೆ ಮಾದರಿ ಎಂದು “ಸಂಸ್ಕಾರದ ಜೀವನ ಸಂತಸದ ಜೀವನ”ಎಂದು ತಿಳಿಸಿದರು.
ಮಾತಶ್ರೀಯವರು ತಮ್ಮ ಆಶೀರ್ವಚನದಲ್ಲಿ ನಂಬಿಕೆ, ಶ್ರದ್ಧೆ , ಭಕ್ತಿ, ನಮ್ಮನ್ನು ಮುಕ್ತಿಯೆಡೆಗೆ ನಡೆಸುತ್ತದೆ. ಅಚಲವಾದ ನಂಬಿಕೆಯಿಂದ ಏನಾದರೂ ಸಾಧಿಸಬಹುದು. ಸೇವೆಯೆ ನಿಮ್ಮ ಗುರಿಯಾಗಿರಲಿ ಎಂದು ತಿಳಿಸಿದರು.
ಶ್ರೀ ವಿವೇಕನಾನಂದ ಪೂಜ್ಯರು ಸತ್ಕಾರ್ಯದಲ್ಲಿ ಪಾಲ್ಗೊಳ್ಳಬೇಕು. ಹಾಗೂ ಸದಾ ನಾವುಗಳು ಸೇವಾ ಹಸ್ತದಿಂದ ಸರ್ವರಲ್ಲಿ ವಿಶ್ವಾಸಗಳಿಸಬೇಕು. ಧ್ಯಾನದಿಂದ ಏಕಾಗ್ರತೆಯನ್ನು ಸಾಧಿಸಿರಿ ಎಂದು ಕರೆನೀಡಿದರು.
ಪಂಚಾಂಗ ರಚಿತರು ಮಾತನಾಡುತ್ತಾ ಪಂಚಾಂಗ ದರ್ಶಿಕೆ ಮಾನವನ ನಡೆನುಡಿಗೆ ಮಾರ್ಗದರ್ಶನ, ಪದ್ದತಿಯ ಜೀವನಕ್ಕೆ ಉತ್ತಮ ಹಾದಿ ತಮ್ಮೆಲ್ಲರ ಸಹಕಾರದಿಂದ ನಾನು ಈ ಕಾರ್ಯಮಾಡುತ್ತಿದ್ದೇನೆ ಎಂದು ಹೇಳಿದರು.
ಅಧ್ಯಕ್ಷರು ಮಾತನಾಡಿ ನಾವು ಈ ಕಾರ್ಯಕ್ರಮ ಹಮ್ಮಿಕೊಳ್ಳುವುದು ತಮ್ಮೇಲ್ಲರ ಸಹಕಾರ ಸದಾಕಾಲ ಇದೇ ರೀತಿಯಿಂದ ಇದ್ದರೆ ಮುಂದಿನ ದಿನಗಳಲ್ಲಿ ಹತ್ತು ಹಲವಾರು ಕಾರ್ಯಕ್ರಮಗಳನ್ನು ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳುತ್ತೇವೆ. ಎಲ್ಲದಕ್ಕೂ ಪ್ರೇರಣೆ ನಮ್ಮ ಗೌರವಾಧ್ಯಕ್ಷರಾದ ಶೀಲಾಬ್ರಹ್ಮಯ್ಯನವರು. ಸದರಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ|| ಯಶವಂತಭೂಪಾಲ, ಕೆ.ಎಂ. ಶಿವಮೂರ್ತಿ, ಟಿ.ಎಂ. ರಾಜಶೇಖರ ದೀನ್, ಕೆ.ಎ. ರಾಮಲಿಂಗಪ್ಪ, ಗುರುಸಿದ್ಧಸ್ವಾಮಿ, ಬಸರೆಡ್ಡಿ, ಎಂ. ಶಿವಾಜಿರಾವ್, ಡಾ|| ಕುಪ್ಪಗಲ್ಲು ವೀರೇಶಪ್ಪ, ಎಸ್. ಲೋಕೇಶ್, ಜಯರಾಮಚಂದ್ರರೆಡ್ಡಿ ಹಾಗೂ ಆಶ್ರಮ ಭಕ್ತಾಧಿಗಳು ಭಾಗವಹಿಸಿದ್ದರು. ಸದರಿ ಕಾರ್ಯಕ್ರಮದಲ್ಲಿ ಸೂರ್ಯ ಕಲಾಟ್ರಸ್ಟ್‍ನ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಶೀಲಬ್ರಹ್ಮಯ್ಯನವರು ಸಭೆಯಲ್ಲಿ ಸ್ವಾಗತವನ್ನು ಕೋರಿದರು., ಡಾ. ಎಂ.ಟಿ.ಮಲ್ಲೇಶ್, ಖಜಾಂಜಿಗಳು ವಂದನಾರ್ಪಣೆಯನ್ನು ಸಲ್ಲಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಕೆ. ದೊಡ್ಡಬಸಪ್ಪ ರವರು ನಡೆಸಿಕೊಟ್ಟರು.






















