ಶ್ರೀರಾಮ ದೇವರ ಬೃಹ್ಮ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು

ಸಂಜೆವಾಣಿ ವಾರ್ತೆ
ಕೆ.ಆರ್.ನಗರ,ಜ.17:-
ದಕ್ಷಿಣ ಭಾರತದಲ್ಲಿ ತನ್ನದೇ ಅದ ಇತಿಹಾಸ ಹೊಂದಿರುವ ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಯ ಶ್ರೀರಾಮ ದೇವರ ಬೃಹ್ಮ ರಥೋತ್ಸವ ಶುಕ್ರವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ಮತ್ತು ಸಂಭ್ರಮದಿಂದ ಜರುಗಿತು.


ಬೆಳಿಗ್ಗೆ ಸುಮಾರು 11.30 ಸಮಯದಲ್ಲಿ ಶ್ರೀರಾಮ ದೇವಾಲಯದಿಂದ ಉತ್ಸವ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಅವುಗಳನ್ನು ಮೆರವಣಿಗೆಯಲ್ಲಿ ಶಾಸಕ ಡಿ.ರವಿಶಂಕರ್ ಅವರ ನೇತೃತ್ವದಲ್ಲಿ ವೇದ ಘೋಷಗಳೊಂದಿಗೆ ಲಕ್ಷಾಂತರ ಮಂದಿಯ ಸಮ್ಮುಖದಲ್ಲಿ ರಥಕ್ಕೆ ತಂದು ಪ್ರತಿಷ್ಠಾಪನೆ ಮಾಡಲಾಯಿತು.


12 ಗಂಟೆಯ ಸಮಯದಲ್ಲಿ ಆದಿಚುಂಚನಗಿರಿ ಮೈಸೂರು ಶಾಖ ಮಠದ ಸೋಮನಾಥೇಶ್ವರ ಸ್ವಾಮಿಜಿ, ಸೋಮನಾಥ ಸ್ವಾಮಿಜಿ, ಗಾವಡಗೆರೆ ಜಂಗಮ ದೇವರ ಮಠದ ನಟರಾಜ ಶ್ರೀ, ಬೆಟ್ಟದಪುರದ ವಿರುಕ್ತ ಮಠದ ಚನ್ನಬಸವ ದೇಶಿಕೇಂದ್ರಿ ಸ್ವಾಮಿಜಿ ಅವರ ಸಾನಿಧ್ಯದಲ್ಲಿ ಶಾಸಕ ಡಿ.ರವಿಶಂಕರ್ ಮತ್ತು ಜಿಲ್ಲಾ ಸಹಕಾರ ಬ್ಯಾಂಕಿನ ಅಧ್ಯಕ್ಷ ದೊಡ್ಡ ಸ್ವಾಮೀಗೌಡ ಅವರು ಜಂಟಿಯಾಗಿ ಚಾಲನೆ ನೀಡಿದರು.
ನಂತರ ಇಲ್ಲಿ ನೆರೆದಿದ್ದ ಶ್ರೀರಾಮನ ಭಕ್ತರು ದೇವರಿಗೆ ಜಯಕಾರ ಕೂಗಿ ರಥವನ್ನು ದೇವಾಲಯದ ಸುತ್ತು ಶ್ರೀರಾಮನ ಪಾದಕೆ ಗೋವಿಂದ, ಜೈ ಶ್ರೀರಾಮ್ ಎಂದು ಭಕ್ತಿ ಘೋಷಣೆಯೊಂದಿಗೆ ಒಂದು ಸುತ್ತು ಎಳೆದಾಗ ಈ ಅಭೂತಪೂರ್ವ ದೃಶ್ಯವನ್ನು ಕಣ್ಣುಂಬಿ ಕೊಂಡ ಭಕ್ತ ಸಾಗರ ಭಾವ ಪರವಶವಾಯಿತು.


ರಥವು ದೇವಾಲಯದ ಸುತ್ತುವಾಗ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಮತ್ತು ಸ್ಥಳೀಯ ಭಕ್ತಗಣ ದೇವರಿಗೆ ಬಾಳೆಹಣ್ಣು, ಧವನ ಎಸೆದು ತಮ್ಮ ಭಕ್ತಿ ಭಾವ ಸಮರ್ಪಿಪಿಸಿದರು. ನವ ವಧುವರರು ಭಾಗವಹಿಸಿದ್ದು ಅಲ್ಲದೇ ಭಕ್ತಾಧಿಗಳು ಸರತಿ ಸಾಲಿನಲ್ಲಿ ನಿಂತು ಸೀತಾ ಸಮೇತ ಶ್ರೀರಾಮ ಮತ್ತು ಲಕ್ಷಣ ದೇವರ ದರ್ಶನ ಪಡೆದರು.
ರಥೋತ್ಸವಕ್ಕೆ ಅಗಮಿಸಿದ್ದ ಕೆಲವರು ದೇವಾಲಯದ ಆವರಣದಲ್ಲಿ ಅಡುಗೆ ಮಾಡಿ ಭಕ್ತರಿಗೆ ಉಣ ಬಡಿಸಿ ತಮ್ಮ ಹರಕೆ ತೀರಿಸಿದರು. ಇದರ ಜತೆಗೆ ಬಸವನ ವೃತ್ತದಿಂದ ಶ್ರೀರಾಮ ದೇವಾಲಯದವರೆಗೆ ರಸ್ತೆಯ ಎರಡೂ ಬದಿಯಲ್ಲಿ ಹಾಕಿರುವ ಸಿಹಿತಿಂಡಿ ಮತ್ತು ವಿವಿಧ ಆಟಿಕೆಯ ಅಂಗಡಿಗಳು ಮನ ಸೆಳೆದವು.


ಶ್ರೀರಾಮ ರಥೋತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಶಾಸಕ ಡಿ.ರವಿಶಂಕರ್ ಮತ್ತು ಜಿಲ್ಲಾ ಸಹಕಾರ ಬ್ಯಾಂಕಿನ ಅಧ್ಯಕ್ಷ ದೊಡ್ಡಸ್ವಾಮೇಗೌಡ ಏರ್ಪಡಿಸಿದ್ದ ಅನ್ನ ಸಂತರ್ಪಣೆ ಏರ್ಪಡಿಸಿದ್ದರು.


ಬಾರಿ ಪೆÇಲೀಸ್ ಬಿಗಿ ಭದ್ರತೆ
ಚುಂಚನಕಟ್ಟೆ ಜಾತ್ರೆಗೆ ಬೆಳಗ್ಗೆ ಯಿಂದ ಸಂಬ ಯಿಂದ ಸಂಜೆಯವರೆಗೆ 1 ಲಕ್ಷಕ್ಕೂ ಅಧಿಕ ಮಂದಿ ಆಗಮಿಸಿದ್ದರಿಂದ ಸಾಲಿಗ್ರಾಮ ನಿರೀಕ್ಷಕ ಶಶಿಕುಮಾರ್ ನೇತೃತ್ವದಲ್ಲಿ ಭಾರೀ ಪೆÇಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.


ಬಾರ್ ಗಳು ಬಂದ್
ರಥೋತ್ಸವ ಯಶಸ್ವಿಯಾಗಿ ನಡೆಯುವುದು ಮತ್ತು ಯಾವುದೇ ಅಹಿತರಕ ಘಟನೆ ನಡೆಯುವುದನ್ನ ತಪ್ಪಿಸಲು ಚುಂಚನಟ್ಟೆ ಮತ್ತು ಹೊಸೂರು ಗ್ರಾಮದಲ್ಲಿರುವ ಬಾರ್ ಗಳನ್ನು ಶಾಸಕ ಡಿ.ರವಿಶಂಕರ್ ಅವರ ಸೂಚನೆಯ ಮೇರೆಗೆ ಇದೇ ಪ್ರಥಮ ಬಾರಿಗೆ ಅಬಕಾರಿ ಇಲಾಖೆಯ ಅಧಿಕಾರಿಗಳ ಬಂದ್ ಮಾಡಿಸಿದ್ದರು ಜೆಡಿಎಸ್ ಮುಖಂಡ ಹಳಿಯೂರು ಮಧುಚಂದ್ರರವರ ವತಿಯಿಂದ ಪಾನಕ ಮತ್ತು ಮಜ್ಜಿಗೆ ವಿತರಿಸಲಾಯಿತು.


ರಥೋತ್ಸವದಲ್ಲಿ ತಾ.ಪಂ.ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಉದಯಶಂಕರ್, ಉದಯಶಂಕರ್, ಪಿಎಲ್ ಡಿ ಬ್ಯಾಂಕ್ ಮಾಜಿ ನಿರ್ದೇಶಕ ಗಂಧನಹಳ್ಳಿ ಹೇಮಂತ್, ಎಂಪಿಎಂಸಿ ಮಾಜಿ ಅಧ್ಯಕ್ಷ ನಾಗೇಂದ್ರ, ಒಕ್ಕಲಿಗರ ಸಂಘದ ಹೆಬ್ಬಾಳು ಪರುಶುರಾಮ್ , ಕುಪ್ಪೆ ಗ್ರಾ.ಪಂ.ಅಧ್ಯಕ್ಷೆ ಶಾರದಮ್ಮ ಮಾಜಿ ಅಧ್ಯಕ್ಷ ಮಂಜುನಾಥ್ , ಹಳಿಯೂರು ಗ್ರಾ.ಪಂ.ಉಪಾಧ್ಯಕ್ಷ ನೂತನ್ ಗೌಡ ಮುಖಂಡರಾದ ಡೈರಿ ಮಾದು, ಸಾಲಿಗ್ರಾಮ ತಹಸೀಲ್ದಾರ್ ರುಕಿಯಾ ಬೇಗಂ, ಉಪತಹಸೀಲ್ದಾರ್ ಮಹೇಶ್, ,ಪಾರುಪತ್ತೆದಾರ ರಾದ ಯತೀರಾಜ್, ನಾಡಕಚೇರಿಯ ಭಾಗ್ಯ ಕೆಸ್ತೂರು ವಿಜಿ, ಸೇರಿದಂತೆ ಮತ್ತಿತರರು ಹಾಜರಿದ್ದರು.