
ಸಂಜೆವಾಣಿ ವಾರ್ತೆ
ನಂಜನಗೂಡು, ಫೆ.16:– ದಕ್ಷಿಣ ಕಾಶಿ ಪ್ರಸಿದ್ಧಿಯ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ದೇವಾಲಯದಲ್ಲಿ ವಿಶೇಷ ಪೂಜೆ ಅಭಿಷೇಕಗಳು ನೆರವೇರಿದವು ನಾನಾ ಜಿಲ್ಲೆಗಳಿಂದ ಆಗಮಿಸಿದ ಭಕ್ತಾದಿಗಳು ದೇವಾಲಯದ ಮುಂದೆ ರಾತ್ರಿ ಇಡಿ ಶಿವಧಾನ್ಯ ಮಾಡುವ ಮೂಲಕ ಶಿವರಾತ್ರಿ ಆಚರಿಸಿದರು
ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಸಾವಿರಾರು ಭಕ್ತರು ಶಿವ ಪಾರ್ವತಿ ದರ್ಶನ ಪಡೆದು ಬಿಲ್ಪತ್ರೆ ಸೇವೆಮಾಡಿ ಶಿವರಾತ್ರಿ ಆಚರಿಸಿದರು.
ಮಹಾ ಶಿವರಾತ್ರಿ ಅಂಗವಾಗಿ ಬೆಳಗಿನಜಾವ ದಿಂದಲೇ ದೇವಾಲಯದ ನಾಗಚಂದ್ರ ದೀಕ್ಷಿತ್ ನೇತೃತ್ವದಲ್ಲಿ ಧಾರ್ಮಿಕ ಪೂಜಾ ಕಾರ್ಯಗಳು ಆರಂಭಗೊಂಡಿದ್ದವು ಶ್ರೀಕಂಠೇಶ್ವರ ಸ್ವಾಮಿಗೆ ಹಾಲಿನ ಅಭಿಷೇಕ ಪುಷ್ಪ ಅಭಿಷೇಕ ಬಿಲ್ಪತ್ರೆ ಅಭಿಷೇಕ ಮಾಡಿ ವಸ್ತ್ರಗಳನ್ನು ಧರಿಸಿ ಮಹಾ ಮಂಗಳಾರತಿ ನೆರವೇರಿಸಿ ದೇವರ ದರ್ಶನ ಮಾಡಲು ಭಕ್ತರಿಗೆ ಅನುವು ಮಾಡಿಕೊಟ್ಟರು.
ಶ್ರೀಕಂಠೇಶ್ವರ ಸ್ವಾಮಿಗೆ 11 ಬಾರಿ ರುದ್ರ ಪಾರಾಯಣ ಹಾಗೂ ಬೆಳಗಿನ ಅಭಿಷೇಕಗಳು ನಡೆದವು. ಮಹಾ ಶಿವರಾತ್ರಿಯ ಪ್ರಯುಕ್ತ ದೇವಾಲಯ ಮುಂಭಾಗ ರಾತ್ರಿಯಿಡಿ ಸಂಸ್ಕೃತಿಕ ಕಾರ್ಯಕ್ರಮಗಳು ನಡೆಸಲಾಯಿತು. ಭರತನಾಟ್ಯ ಭಕ್ತಿಗೀತೆ ಗಾಯನ ಹಾಗೂ ಹರಿಕಥೆ ಕೇಳುವ ಮೂಲಕ ಭಕ್ತಾದಿಗಳು ಶಿವರಾತ್ರಿ ಆಚರಣೆ ಮಾಡಿದರು.
ಭಕ್ತಾದಿಗಳಿಗೆ ಬೆಳಗಿನ ಉಪಹಾರ ವಿತರಣೆಗೆ ಶಾಸಕ ದರ್ಶನ್ ದ್ರುವ ನಾರಾಯಣ್ ಚಾಲನೆ ನೀಡಿದರು.
ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ದಾಸೋಹ ಭವನದಲ್ಲಿ ಶಾಸಕ ದರ್ಶನ್ ದ್ರುವ ನಾರಾಯಣ ಅವರು ಭಕ್ತರಿಗೆ ಬೆಳಗಿನ ತಿಂಡಿ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿದರು ಮುಂದುವರೆದು ಮಾತನಾಡಿ ದಾಸೋ ಭವನದಲ್ಲಿ ಮಧ್ಯಾಹ್ನದ ಊಟವನ್ನು ಮಾತ್ರ ನೀಡಲಾಗುತ್ತಿತ್ತು ಇದರಿಂದ ದೇವಾಲಯಕ್ಕೆ ಬರುವ ಭಕ್ತರು ಬೆಳಗಿನ ತಿಂಡಿಗೆ ಪರದಾಡುತ್ತಿದ್ದರು ಹೀಗಾಗಿ ಭಕ್ತರಿಗೆ ಬೆಳಗಿನ ತಿಂಡಿ ಹಾಗೂ ಮಧ್ಯಾಹ್ನದ ಊಟದ ಜೊತೆಗೆ ವಿಶೇಷ ದಿನಗಳಂದು ರಾತ್ರಿ ಊಟವನ್ನು ಪ್ರಸಾದ ರೂಪದಲ್ಲಿ ನೀಡಲು ತೀರ್ಮಾನಿಸಲಾಗಿದೆ ಇನ್ನು ಮುಂದೆ 24 ಗಂಟೆಗಳು ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ದೇವಾಲಯದ ಕಾರ್ಯನಿರ್ವಾಧಿಕಾರಿ ಕೃಷ್ಣ ಅವರು ದೇವಾಲಯಕ್ಕೆ ಶಿವರಾತ್ರಿ ಪ್ರಯುಕ್ತ ಬಂದಿದ್ದ ಎಲ್ಲಾ ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಜೊತೆಗೆ ದೇವರ ದರ್ಶನಕ್ಕೂ ಯಾವುದೇ ಅಡೆ-ತಡೆ ಇಲ್ಲದೆ ದರ್ಶನ ಮಾಡಲು ಅನುವು ಮಾಡಿಕೊಟ್ಟಿದ್ದರು.
ಶಾಸಕರು ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ನಾಡಿನ ಜನತೆಗೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಧರ್ಮದರ್ಶಿಗಳಾದ ಗೋವಿಂದರಾಜು ಗೋಪಾಲಕೃಷ್ಣ ಕೃಷ್ಣ ಬಸವಗೌಡ ಮಾಜಿ ನಗರಸಭೆ ಅಧ್ಯಕ್ಷ ಶ್ರೀಕಂಠ ಸ್ವಾಮಿ ಮಾಜಿ ನಗರಸಭೆ ಸದಸ್ಯರುಗಳಾದ ಮಹೇಶ ಗಂಗಾಧರ ಗಾಯಿತ್ರಿ ಸಿದ್ದಿಕ್ಕಿ ಶ್ರೀಧರ್ ಸೇರಿದಂತೆ ಇತರರು ಇದ್ದರು.






























