ಶ್ಯಾಮನೂರು ಶಿವಶಂಕ್ರಪ್ಪಗೆ ಶ್ರದ್ದಾಂಜಲಿ

Oplus_16908288

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಡಿ.15: ನಿನ್ನೆ ನಿಧನರಾದ ದಾವಣಗೆರೆಯ ದಕ್ಷಿಣ ಕ್ಷೇತ್ರದ ಶಾಸಕ ಶ್ಯಾಮನೂರು ಶಿವಶಂಕರಪ್ಪ ಅವರಿಗೆ ನಗರದ ಕೊಟ್ಟೂರು ಸ್ವಾಮಿ ಮಠದಲ್ಲಿ ಇಂದು ಬೆಳಿಗ್ಗೆ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದಿಂದ ಶ್ರದ್ದಾಂಜಲಿ ಸಭೆ ಹಮ್ಮಿಕೊಳ್ಳಲಾಗಿತ್ತು.

ಶಿವಶಂಕರಪ್ಪ ಅವರ ಭಾವಚಿತ್ರಕ್ಕೆ ವೀರಶೈವ ಮಹಾಸಭಾದ ಜಿಲ್ಲಾ ಅಧ್ಯಕ್ಷ ಬಿಚ್ಚುಗಲ್ಲು ಪಂಚಾಕ್ಷರಪ್ಪ, ದರೂರು ಪುರುಷೋತ್ತಮಗೌಡ, ಆರ್.ಹೆಚ್.ಎಂ. ಚನ್ನಬಸಯ್ಯ ಸ್ವಾಮಿ, ಅರುಣ್ ಕುಮಾರ್, ಸಿರಿಗೇರಿ  ನಾಗರಾಜಸ್ವಾಮಿ,  ಎನ್.ವೀರಭದ್ರಗೌಡ, ವೀರೇಶ್ ಅಂಗಡಿ, ಎಂ.ಚಂದ್ರಮೌಳಿ,  ಸಿರಿಗೇರಿ ವಿರೂಪಕ್ಷಗೌಡ,   ಸುಮಾರೆಡ್ಡಿ, ಹೆಚ್.ಎಂ.ಶಕುಂತಲ. ಶಂಕರಗೌಡ ಮೊದಲಾದವರು ಪುಷ್ಪ ನ ಸಲ್ಲಿಸಿದರು.

ನಂತರ ಮಾತನಾಡಿದ ಅವರು ಶ್ಯಾಮನೂರು ಶಿವಶಂಕರಪ್ಪ ಅವರು ವೀರಶೈವ ಸಮಾಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರು. ಅವರು ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಸಲ್ಲಿಸಿದ ಸೇವೆ ಅಪಾರವಾದುದು, ರಾಜಕೀಯವಾಗಿಯೂ ಅವರು ಹಲವು ಹುದ್ದೆಗಳನ್ನು ಅಲಂಕರಿಸಿ ಸಮಾಜದ ಅಭಿವೃದ್ದಿಗೆ ಕಾರಣರಾಗಿದ್ದರು. ಅಲ್ಲದೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಶೈಕ್ಷಣಿಕವಾಗಿ ಯುವ ಸಮುದಾಯ ಉತ್ತಮ ಬದುಕು ಕಂಡು ಕೊಳ್ಳಲು ಕಾರಣರಾಗಿದ್ದರೆಂದು ಸ್ಮರಿಸಿದರು.

ಶೋಕ: ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ವೀರಶೈವ ಲಿಂಗಾಯತ ರಡ್ಡಿ ಸಮಾಜದ ಮುಖಂಡರುಗಳಾದ ಡಾ.ಎಸ್.ಜೆ.ವಿ.ಮಹಿಪಾಲ, ಜಾನೆಕುಂಟೆ ನೇಪಾಕ್ಷಪ್ಪ, ಸಂಗನಕಲ್ಲು ಹಿಂಮತರಾಜ, ಹಾವಿನಾಳ್ ಬಸವರಾಜಪ್ಪ, ಮೊದಲಾದವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.