ಶೇ 100 ವಿದೇಶಿ ನೇರ ಬಂಡವಾಳ ವಿರೋಧಿಸಿ ಪ್ರತಿಭಟನೆ

ಸಂಜೆವಾಣಿ ವಾರ್ತೆ

ಬಳ್ಳಾರಿ, ಡಿ,19- ಐದು ಸಂಘಟನೆಗಳ (ಬ್ಯಾಂಕಿಂಗ್ ಮತ್ತು ವಿಮಾ ಕ್ಷೇತ್ರದ) ಉದ್ಯೋಗಿಗಳು ಕೇಂದ್ರ ಸರ್ಕಾರದ ವಿಮಾ ಕ್ಷೇತ್ರದಲ್ಲಿ 100% ವಿದೇಶಿ ನೇರ ಬಂಡವಾಳದ ನಿರ್ಧಾರದ ವಿರುದ್ಧ ದೊಡ್ಡ ಮತ ಪ್ರದರ್ಶನವನ್ನು ಅಖಿಲ ಭಾರತ ಕರೆಯ ಮೇರೆಗೆ ಎಲ್. ಐ.ಸಿ  ಶಾಖೆ 2 ರ ಮುಂದೆ ಒಗ್ಗಟ್ಟಾಗಿ ಪ್ರದರ್ಶಿಸಿದೆವು. ವಿದೇಶಿ ನೇರ ಬಂಡವಾಳವು ದೇಶದ ಸಾರ್ವಭೌಮತ್ವಕ್ಕೆ ದಕ್ಕೆ ತರುವುದಲ್ಲದೆ ಜನರ ಸಣ್ಣ ಉಳಿತಾಯವು ವಿದೇಶಿಗರ ಪಾಲಾಗುವುದು. ಇಂದಿನ ಮತ ಪ್ರದರ್ಶನದಲ್ಲಿ(AIIEA, AIBEA, BEFI, AIBOC, NCBE, Pensioners, Class 1 officers in LIC ) ಯ ಎಲ್ಲಾ ಸದಸ್ಯರು ಸಕ್ರಿಯವಾಗಿ ಪಾಲೊಂಡಿದ್ದರು.

ಕೊನೆಯಲ್ಲಿ ಮೊಬೈಲ್ ಟಾರ್ಚ್ ನ್ನು ಬೆಳಗಿಸುವುದರ ಮೂಲಕ ವಿರೋಧವನ್ನು ವ್ಯಕ್ತಪಡಿಸಲಾಯಿತು ಎಂದು ಕನ್ವೀನರ್ ಡಿ.ವಿ.ಸೂರ್ಯನಾರಾಯಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ