ಶಿವಗಂಗೆ ಬೆಟ್ಟದಲ್ಲಿ ಸ್ವಚ್ಚತಾ ಅಭಯಾನ

ಬೆಂಗಳೂರು: ನ.24:- ವಾಸವಿ ಜ್ಞಾನಪೀಠ ಫಸ್ಟ್ ಗ್ರೇಡ್ ಕಾಲೇಜ್ ಮತ್ತು ಬೆಂಗಳೂರು ವಿಶ್ವವಿದ್ಯಾಲಯ ಸಹಯೋಗದಲ್ಲಿ ರಂಗಸ್ವಾಮಿ ದೇವಸ್ಥಾನ ಮತ್ತು ಶಿವಗಂಗೆ ಬೆಟ್ಟ ಸ್ವಚ್ಚತಾ ಅಭಿಯಾನ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ,ಗೋಶಾಲೆ ಸೇವೆ ಕಾರ್ಯಕ್ರಮ ಅಂಗವಾಗಿ ಎನ್.ಎಸ್.ಎಸ್.ವಿಶೇಷ ಕಾರ್ಯಗಾರ ಆಯೋಜಸಲಾಗಿತ್ತು.
ಶ್ರೀ ಶ್ರೀ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮಿಜಿರವರು ವಾಸವಿ ಜ್ಞಾನಪೀಠ ಸಮೂಹ ಸಂಸ್ಥೆಯ ಕಾರ್ಯದರ್ಶಿ ಡಿ.ಆರ್.ವಿಜಯಸಾರಥಿರವರು ಮತ್ತು ಎನ್.ಎಸ್.ಎಸ್.ಅಧಿಕಾರಿ ಲೋಹಿತ್, ಪ್ರಾಂಶುಪಾಲರಾದ ರಂಗಸ್ವಾಮಿರವರು ನೂರಾರು ಮಕ್ಕಳ ಜೊತೆಯಲ್ಲಿ ಭಾಗವಹಿಸಿದ್ದರು.


ಇದೇ ಸಂದರ್ಭದಲ್ಲಿ ಡಿ.ಆರ್.ವಿಜಯಸಾರಥಿರವರು ಮಾತನಾಡಿ ಮಕ್ಕಳಿಗೆ ಶಿಕ್ಷಣ, ಆರೋಗ್ಯ ಮತ್ತು ಸಮಾಜಸೇವೆ ಮಹತ್ವ ತಿಳಿಸಲು ಎನ್.ಎಸ್.ಎಸ್. ವಿಶೇಷ ಕಾರ್ಯಗಾರ ಆಯೋಜಿಸಲಾಗಿದೆ.
ನಾನು ಎಂಬುದು ಅಹಂಕಾರ, ನಾವೆಲ್ಲರು ಎಂಬದು ಶಾಶ್ವತ. ನಮ್ಮ ಮನೆ, ನಮ್ಮ ಸುತ್ತಮುತ್ತಲ ಪರಿಸರ ಸ್ವಚ್ಚತೆ ಇದ್ದರೆ ಮಾತ್ರ ಆರೋಗ್ಯವಂತರಾಗಿ ಬಾಳಬಹುದು. ಇಂದು ಮನುಷ್ಯರ ಅತಿ ಆಸೆಯಿಂದ ಪರಿಸರದ ಮೇಲೆ ನಿರಂತರ ದೌರ್ಜನ್ಯದಿಂದ ಪರಿಸರ ನಾಶದತ್ತ ಸಾಗುತ್ತಿದ್ದೇವೆ.


ಮುಂದಿನ ಪೀಳಿಗೆಗೆ ಪರಿಸರ ಉಳಿಸಬೇಕು ಆರೋಗ್ಯವಂತರಾಗಿ ಜೀವನ ಸಾಗಿಸಬೇಕು ಎಂಬ ಉದ್ದೇಶ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಯುವ ಸಮುದಾಯ ರಾಷ್ಟ್ರ, ರಾಜ್ಯ ಮತ್ತು ಭಾಷೆ ನಮ್ಮ ನೆಲ, ಜಲ ಎಂಬ ಅಭಿಮಾನ ಬೆಳಸಿಕೊಳ್ಳಿ, ತಂದೆ, ತಾಯಿಗೆ ಒಳ್ಳೆಯ ಮಕ್ಕಳಾಗಿ, ದೇಶಕ್ಕೆ ಸೇವೆ ಸಲ್ಲಿಸಿ ಎಂದು ಹೇಳಿದರು.