
ಸಂಜೆವಾಣಿ ವಾರ್ತೆ
ಬಳ್ಳಾರಿ, ಮೇ.22: ಓಬಳಾಪುರಂ ಮೈನಿಂಗ್ ಕಂಪನಿ (ಓಎಂಸಿ) ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ತಮಗೆ ಸಿಬಿಐ ನ್ಯಾಯಾಲಯ ವಿಧಿಸಿರುವ 7ವರ್ಷದ ಶಿಕ್ಷೆ ರದ್ದುಪಡಿಸುವಂತೆ ತೆಲಂಗಾಣದ ಕೋರ್ಟಿಗೆ ಮನವಿ ಮಾಡಿದ ಗಾಲಿ ಜನಾರ್ಧನರೆಡ್ಡಿ ಮನವಿಗೆ ಸಿಬಿಐ ಬ್ರೇಕ್ ಹಾಕಿದೆ.
ತೆಲಂಗಾಣ ಹೈಕೋರ್ಟಿನಲ್ಲಿ ನಿನ್ನೆ ಜನಾರ್ಧನರೆಡ್ಡಿ ಪರ ವಕೀಲರು ಮಧ್ಯಂತರ ಅರ್ಜಿ ಸಲ್ಲಿಸಿ ಜನಾರ್ಧನರೆಡ್ಡಿ ಅವರು ಶಾಸಕರಾಗಿದ್ದಾರೆ. ಜನಪ್ರತಿನಿಧಿಗಳಾಗಿ ಜನರಿಗೆಕೆಲಸ ಮಾಡಬೇಕಿದೆ. ಅದಕ್ಕಾಗಿ ಅವರಿಗೆ ವಿಧಿಸಿರುವ ಶಿಕ್ಷೆಯನ್ನು ಅಮಾನತ್ತಿನಲ್ಲಿಟ್ಟು ವಿಚಾರಣೆ ಮುಂದುವರಿಸಲು ಕೂಡಲೇ ಆದೇಶಿಸಿ ಎಂದು ಕೋರಿದ್ದರು ರೆಡ್ಡಿ ಪರ ವಕೀಲರು.
ಆದರೆ ವಾದ ಆಲಿಸಿದ ನ್ಯಾಯಮೂರ್ತಿ ನಂದಿಕೊಂಡ ನರಸಿಂಗ ರಾವ್, ಈ ಪ್ರಕರಣ ಶಿಕ್ಷೆ ಹಿನ್ನಲೆಯಲ್ಲಿ ಅನೇಕ ದಾಖಲೆಗಳಿವೆ ಅವುಗಳನ್ನು ಪರಿಶೀಲಿಸದೆ ತಕ್ಷಣ ಆದೇಶ ನೀಡಲು ಆಗದು ಅಲ್ಲದೆ ಈ ವಿಷಯದಲ್ಲಿ ಸಿಬಿಐ ವಾದವನ್ನು ಆಲಿಸಬೇಕಿದೆ. ಅವರು ಆಕ್ಷೇಪಣೆಗಳನ್ನು ಸಲ್ಲಿಸಲು ಎಂದಾಗ ಸಿಬಿಐ ಪರ ವಕೀಲ ಶ್ರೀನಿವಾಸ ಕಪಾಟಿಯ ಆಕ್ಷೇಪಣೆಗಳಿಗೆ ಒಂದು ತಿಂಗಳ ಕಾಲಾವಕಾಶ ಕೋರಿದರೆ, ನ್ಯಾಯಾಲಯ ಕೂಡಲೇ ಸಲ್ಲಿಸಲು ಸೂಚಿಸಿ ವಿಚಾರಣೆಯನ್ನು ಮೇ.28ಕ್ಕೆ ಮುಂದೂಡಿದ್ದಾರೆ.
ತ್ವರಿತ ವಿಚಾರಣೆ ರೆಡ್ಡಿ ಪರ ವಕೀಲರು ಕೋರಿದರೆ, ಅ ಪ್ರಕರಣದಲ್ಲಿ ಶಿಕ್ಷೆ ವಿಧಿಸಿರುವುದರಿಂದ ತ್ವರಿತ ವಿಚಾರಣೆಯ ಅವಶ್ಯಕತೆ ಕಂಡುಬರುತ್ತಿಲ್ಲ ಎಂದಿದೆ.