ತಾಳಿಕೋಟೆ:ಅ.೧೬: ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಘದ ಶ್ರೀ ಖಾಸ್ಗತೇಶ್ವರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು. ಚಕೋರ ಸಾಹಿತ್ಯ ವಿಚಾರ ವೇದಿಕೆ ವಿಜಯಪುರ ಶ್ರೀಖಾಸ್ಗತೇಶ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ ತಾಳಿಕೋಟಿ ಹಾಗೂ ಕನ್ನಡ ವಿಭಾಗ ಇವರ ಸಹಯೋಗದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವ್ಹಿ.ವ್ಹಿ.ಸಂಘ ಹಾಗೂ ಎಸ್.ಕೆ.ಮಹಾವಿದ್ಯಾಲಯದ ಅಧ್ಯಕ್ಷರಾದ ವ್ಹಿ.ಸಿ.ಹಿರೇಮಠ ಅವರು ವಹಿಸಿದ್ದರು.
ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಪ್ರಾಧ್ಯಾಪಕರು ನಿರ್ದೇಶಕರು ಕನ್ನಡ ಅಧ್ಯಯನ ಸಂಸ್ಥೆ ಕಲಬುರಗಿ ವಿಶ್ವವಿದ್ಯಾಲಯದ ಪ್ರೋ.ಎಚ್.ಟಿ.ಪೋತೆ ಅವರು ಮಾತನಾಡಿ ಬುದ್ದ ಹಾಗೂ ಬಸವ, ಅಂಬೆಡ್ಕರ ಮೂರು ಶಕ್ತಿಗಳು ಸಮ ಸಮಾಜದ ನಿರ್ಮಾಣಕರಾಗಿದ್ದಾರೆ ಉತ್ತರ ಕರ್ನಾಟಕದ ಜನರು ಕನ್ನಡ ಸಾಹಿತ್ಯಕ್ಕೆ ಮಹತ್ಚದ ಕೊಡುಗೆಯನ್ನು ನೀಡಿದ್ದಾರೆ ಶರಣರ ಮೂಲಕ ಸಾಹಿತ್ಯಕ್ಕೆ ದೊಡ್ಡ ಕೊಡುಗೆ ಸಿಕ್ಕಂತಾಗಿದೆ ಎಂದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಸಾಹಿತಿ ಡಾ. ಸಂಗಮೇಶ ಮೈತ್ರಿ ಅವರು ಮಾತನಾಡಿ ಶಿಕ್ಷಣದ ಮೌಲ್ಯಗಳು ದೀಪಗಳಿದಂತೆ ಇವು ಜಗತ್ತಿಗೆ ಬೆಳಕು ನೀಡುತ್ತವೆ. ಕನ್ನಡ ಸಾಹಿತ್ಯದಲ್ಲಿ ಮಾನವಿಯ ಶಿಕ್ಷಣ ಇದೆ ಶರಣರು, ದಾಸರು, ಸಂತರು ಕವಿಗಳು ಮಾನವಿಯ ಮೌಲ್ಯಗಳನ್ನು ಈ ಜಗತ್ತಿಗೆ ನೀಡಿದ್ದಾರೆಂದರು.
ಶ್ರೀಮಹಾದೇವ ಬಸರಕೋಡ ಸದಸ್ಯರು ಕನಾಟಕ ಅಕಾಡೆಮಿ ಬೆಂಗಳೂರ ಅವರು ಶಿಕ್ಷಣ ಮೌಲ್ಯಗಳನ್ನು ಕುರಿತು ಶಿವಪಾರ್ವತಿಯರ ಕಥೆ ಮೂಲಕ ಹೇಳಿದರು. ಹಾಗೆ ಕನ್ನಡ ಸಾಹಿತ್ಯವನ್ನು ಮನೆ ಮನಗಳಿಗೆ ಮುಟ್ಟಿಸುವ ಕೆಲಸ ಈ ನಮ್ಮಕನ್ನಡ ಸಾಹಿತ್ಯ ಅಕಾಡೆಮಿ ಮಾಡುತ್ತಿದೆ ಎಂದು ಆಶಯನುಡಿಗಳನ್ನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ಶ್ರೀಶೈಲ ನಾಗರಾಳ ಅವರು ಸಾಹಿತ್ಯದಲ್ಲಿ ಜೀವನದ ಮೌಲ್ಯಗಳು ಇವೆ ಹಾಗೆ ಜನಪದ ತಾಯಂದರಲ್ಲಿ ಶಿಕ್ಷಣ ಮೌಲ್ಯಗಳು ಇವೆ ಎಂದರು.
ಎಸ್‌ಕೆ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ದಯಾನಂದ ಬಿ. ಮೂಗಡ್ಲಿಮಠ ಅವರು ಮಾತನಾಡಿ ಶಿಕ್ಷಣವು ಮಾನವಿಯ ಮೌಲ್ಯಗಳು ಕಳೆದುಕೊಳ್ಳತ್ತಿದೆ ಶಿಕ್ಷಣವು ಮಾನವಿಯ ಮೌಲ್ಯಗಳನ್ನು ತುಂಬುವ ತವನಿಧಿ ಯಾಗಬೇಕು ಇದನ್ನು ಕನ್ನಡ ಸಾಹಿತ್ಯವು ತಿಳಿಸುತ್ತದೆ ಎಂದರು.
ಕನ್ನಡ ವಿಭಾಗ ಮುಖ್ಯಸ್ಥರಾದ ಡಾ. ಸುಜಾತಾ ಚಲವಾದಿ ಅವರು ಮಾತನಾಡಿ ಶರಣರ ವಚನಗಳಲ್ಲಿ ಶಿಕ್ಷಣದ ಮೌಲ್ಯಗಳಿವೆ ಎಂದು ಬಸವ ಅಲ್ಲಮರ ವಚನಗಳನ್ನು ಉದಾಹರಣೆ ನೀಡಿದ ಅವರು ಶಿಕ್ಷಣದ ಮೌಲ್ಯಗಳ ಕುರಿತು ವಿವರಿಸಿದರು.
ಅಜೇಯ ಅಬ್ಬಾರ ಅವರು ಸ್ವಾಗತಿಸಿದರು. ಶ್ರೀಮತಿ ಎಸ್. ಜಿ. ಕೊಡೆಕಲ್ಲಮಠ ನಿರೂಪಿಸಿದರು. ಕುಮಾರ ಸಾಹೇಬಗೌಡ ಕಡದರಾಳ ವಂದಿಸಿದರು.




























