ಶಿಕ್ಷಣದಿಂದ ಬದಲಾವಣೆ ಸಾಧ್ಯ

ಗುಳೇದಗುಡ್ಡ,ಜು5 : ವಿದ್ಯಾರ್ಥಿಗಳು ತಮ್ಮ ಜೀವನವನ್ನು ಉನ್ನತಗೊಳಿಸಲು ಪ್ರಬಲವಾದ ಅಸ್ತ್ರವೇ ಶಿಕ್ಷಣ. ನಿಮ್ಮ ಗುರಿಯನ್ನು ಸಾಧಿಸಲು ಸತತ ಪ್ರಯತ್ನ ಮಾಡಬೇಕು. ದೃಢ ನಿಶ್ಚಯದಿಂದ ಓದಿದ್ದೆ ಆದರೆ ಸಮಾಜಕ್ಕೆ ನೀವುಗಳು ಒಳ್ಳೆಯ ಕೊಡುಗೆಯನ್ನು ನೀಡುತ್ತೀರಿ ಎಂದು ಪಟ್ಟಣದ ವ್ಯಾಪಾರಸ್ಥ ಪಿ.ಎನ್. ಪವಾರ ಹೇಳಿದರು.


ಅವರು ಪಟ್ಟಣದ ಬಾಲಕರ ಪಪೂ ಕಾಲೇಜಿನ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಮಾಡಿ ಮಾತನಾಡಿ, ಮುಂದೊಂದು ದಿನ ನೀವು ಕಲಿತ ಇದೇ ಕಾಲೇಜಿನಲ್ಲಿ ಇದೇ ರೀತಿ ದಾನ ಮಾಡುವ ಸಾಮಥ್ರ್ಯವನ್ನು ಹೊಂದಬೇಕು ಎಂದರು.


ಕಾಲೇಜಿನ ಪ್ರಾಚಾರ್ಯ ವಿಠ್ಠಲ ಕಳಸಾ ಮಾತನಾಡಿದರು. ಈ ಸಂದರ್ಭದಲ್ಲಿ ಸರಸ್ವತಿ ವಿದ್ಯಾಮಂದಿರದ ಮುಖ್ಯೋಪಾಧ್ಯಾಯ ಪಿ.ಆರ್.ಬಂತಲ, ಬಿ. ವೈ. ಗೌಡರ, ಡಿ. ವೈ. ಹಾದಿಕಾರ್, ಈರಣ್ಣ ದೊಡ್ಡಮನಿ, ಎಸ್.ಹೆಚ್. ಮಡಿವಾಳ, ಬಿ.ಡಿ.ಅಜ್ಜೋಡಿ, ಎಸ್. ಬಿ. ಕೊಳ್ಳಿ, ಗಾಯತ್ರಿ ಬಾಗಲಕೋm, ಜಯಮಾಲಾ ಯಡವನ್ನವರ್, ಸುಷ್ಮಾ ಅಡಿಕಿ ಮತ್ತಿತರರು ಉಪಸ್ಥಿತರಿದ್ದರು.