ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮನವಿ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು.05-
ಸೇವಾನಿರತ ಪಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಚಾಮರಾಜನಗರ ತಾಲೂಕು ಘಟಕದ ವತಿಯಿಂದ ಮುಖ್ಯಮಂತ್ರಿಗಳಿಗೆ ಹಾಗೂ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಚಾಮರಾಜನಗರ ತಾಲೂಕು ಘಟಕದ ಅಧ್ಯಕ್ಷರು ರಾಮಸ್ವಾಮಿ ನೇತೃತ್ವದಲ್ಲಿ ತಹಶೀಲ್ದಾರ್ ಹಾಗೂ ಡಿಡಿಪಿಐ ಮೂಲಕ ಮನವಿ ಸಲ್ಲಿಸಿದರು.


2016ರಲ್ಲಿ ಸಿ&ಆರ್ ತಿದ್ದುಪಡಿಯಾದಗಿನಿಂದ ಸೇವಾನಿರತ ಪದವಿಧರ ಶಿಕ್ಷಕರಿಗೆ ಅನ್ಯಾಯವಾಗಿರುವ ಬಗ್ಗೆ ಸುಮಾರು ವರ್ಷಗಳಿಂದ ಮನವಿ ಮಾಡಿದ್ದಾಗಿಯೂ ಸಮಸ್ಯೆಗೆ ತಾರ್ಕಿಕ ಅಂತ್ಯ ದೊರಕಿರುವುದಿಲ್ಲ. ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಮಂತ್ರಿಗಳು ಕಳೆದ ವರ್ಷ ಆಗಸ್ಟ್‍ನಲ್ಲಿ ಬೆಂಗಳೂರಿನಲ್ಲಿ ನಡೆದ ಶಿಕ್ಷಕರ ಬೃಹತ್ ಹೋರಾಟಕ್ಕೆ ಸ್ಪಂದಿಸಿ, ತಕ್ಷಣದಲ್ಲೇ ಸಮಸ್ಯೆ ಬಗೆಹರಿಸಲಾಗುವುದು ಎಂದು ಆಶ್ವಾಸನೆ ನೀಡಿದ್ದರು.


2025-26ನೇ ಸಾಲಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಹೆಚ್ಚವರಿ ಶಿಕ್ಷಕರ ಮರುಹೊಂದಾಣಿಕೆ ಕೈಗೊಳ್ಳುತ್ತಿರುವುದರಿಂದ, ಬಾಧಿತ ಶಿಕ್ಷಕರಿಗೆ ತುಂಬಾ ತೊಂದರೆಯಾಗುತ್ತಿದ್ದು, ಕೂಡಲೇ ಹೆಚ್ಚುವರಿ ಶಿಕ್ಷಕರ ಮರುಹೊಂದಾಣಿಕೆಯನ್ನು ಸಿ&ಆರ್ ತಿದ್ದುಪಡಿ ಮಾಡಿ, ಸೇವಾನಿರತ ಪದವಿಧರ ಶಿಕ್ಷಕರ ಸಮಸ್ಯೆ ಬಗೆಹರಿಸುವವರೆಗೂ ಹೆಚ್ಚುವರಿ ಶಿಕ್ಷಕರ ಮರುಹೊಂದಾಣಿಕೆಯನ್ನು ಮುಂದೂಡುವುದು ಅಥವಾ ರದ್ದುಪಡಿಸಬೇಕು. ಹೆಚ್ಚುವರಿ ನಿಯಮದಲ್ಲಿ ಮುಖ್ಯ ಶಿಕ್ಷಕರ ಹುದ್ದೆಯನ್ನು ಪಿಟಿಆರ್‍ನಿಂದ ಕೈ ಬಿಡಬೇಕು.


ಹೆಚ್ಚುವರಿ ಮರುಹೊಂದಾಣಿಕೆಯನ್ನು ತಾಲ್ಲೂಕಿನೊಳಗೆ ಮಾತ್ರ ಮಾಡುವುದು. ಜಿಲ್ಲಾ ಹಂತದಲ್ಲಿ ಮರುಹೊಂದಾಣಿಕೆಯನ್ನು ಕೈಬಿಡಬೇಕು. ಹೆಚ್ಚುವರಿ ಪಿಟಿಆರ್ ಶಿಕ್ಷಕರಿಗೆ ಖಾಲಿ ಇರುವ ಜಿ.ಪಿ.ಟಿ ಹುದ್ದೆಗಳಿಗೆ ಅವಕಾಶ ನೀಡಬೇಕು.


ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕೊರತೆಯಿಂದಾಗಿ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿರುವುದು ತಮ್ಮ ಆದ್ಯ ಗಮನಕ್ಕೆ ಬಂದಿರುತ್ತದೆ. ಇಂತಹ ಸಂದರ್ಭದಲ್ಲಿ ಹೆಚ್ಚುವರಿ ಮಾಡುವುದು ಸಾಧುವಲ್ಲ.
ಸರ್ಕಾರಿ ಶಾಲೆಗಳು ವಿಷಯಾಧರಿತ ಹಾಗೂ ತರಗತಿಗೊಬ್ಬ ಶಿಕ್ಷಕರ ಕೊರತೆಯನ್ನು ಎದುರಿಸುತ್ತಿವೆ. ಹಾಗಾಗಿ ಹೆಚ್ಚುವರಿಯನ್ನು ಕೈಬಿಡುವುದು. ಇಲಾಖೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಸಂಖ್ಯೆಯು ಬಹಳ ಕಡಿಮೆ ಇದ್ದು, ಅವರನ್ನು ಸಹ ಯಾವುದೇ ಕಾರಣಕ್ಕೂ ಹೆಚ್ಚುವರಿ ಮಾಡದೇ, ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶಾಲೆಗೊಬ್ಬರು ದೈಹಿಕ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರು ಕರ್ತವ್ಯ ನಿರ್ವಹಿಸುವಂತೆ ಮಾಡುವುದು.
ಹೆಚ್ಚುವರಿಯಾದ ಶಿಕ್ಷಕರಿಗೆ ಮುಂದಿನ ವರ್ಗಾವಣೆಗಳಲ್ಲಿ ಸೇವಾವಧಿಯನ್ನು ಮಿತಿಗೊಳಿಸದೇ ಮುಕ್ತವಾಗಿ ವರ್ಗಾವಣೆಗೆ ಅವಕಾಶ ಕಲ್ಪಿಸುವುದು.
ಹೆಚ್ಚುವರಿ ಮರುಹೊಂದಾಣಿಕೆ ಮಾಡುವ ಸಂದರ್ಭದಲ್ಲಿ 2024-25ನೇ ಸಾಲಿನ ವಿದ್ಯಾರ್ಥಿಗಳ ದಾಖಲಾತಿ ಮತ್ತು 2025-26ನೇ ಸಾಲಿನ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಯಾವುದೇ ಹೆಚ್ಚು ಇರುತ್ತದೋ ಆ ವರ್ಷದ ದಾಖಲಾತಿಯನ್ನು ಪರಿಗಣಿಸುವುದು.


ಮುಖ್ಯ ಶಿಕ್ಷಕರ ಹುದ್ದೆಯನ್ನು ಮಕ್ಕಳ ಸಂಖ್ಯೆಗೆ ನಿಗದಿಗೊಳಿಸದೇ, ಶಾಲೆಗೊಂದು ಮುಖ್ಯ ಶಿಕ್ಷಕರ ಹುದ್ದೆಯನ್ನು ನೀಡುವುದು. ಪ್ರಸ್ತುತ ಮೊಟ್ಟೆ ಧಾರಣೆಗೆ ತಕ್ಕಂತೆ ಮೊಟ್ಟೆಯ ದರ ನಿಗದಿಗೊಳಿಸಿ ಮುಖ್ಯ ಶಿಕ್ಷಕರ ಹೊರೆ ಕಡಿಮೆಗೊಳಿಸುವುದು.


ಪಿಟಿಟಿ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವ ತನಕ, ಸರ್ಕಾರವು, ಇಲಾಖೆಯು ಪ್ರಸ್ತುತ ನಿಗಧಿಪಡಿಸಿರುವ ಪಿಟಿಟಿ ಹುದ್ದೆಯಲ್ಲಿ ಮುಂದುವರಿಯುತ್ತೇವೆ. ಒಂದರಿಂದ ಐದನೇ ತರಗತಿಯμÉ್ಟೀ ನಿರ್ವಹಣೆ ಮಾಡಬೇಕು ಎಂದು ತಹಶೀಲ್ದಾರ್ ಗಿರಿಜಾರವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.


ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧಾ, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ, ಸದಸ್ಯರುಗಳಾದ ಮಲ್ಲಿಕಾರ್ಜುನ್, ಕೃಷ್ಣಮೂರ್ತಿ, ಮುರುಗೇಶ್, ಮಹದೇವಯ್ಯ ರಾಚಯ್ಯ, ನಟರಾಜು, ಸಿದ್ದಲಿಂಗಮೂರ್ತಿ, ರಾಜು, ಈಶ್ವರ್, ಚಂದ್ರು, ಶಿವಕುಮಾರ್, ಧನಂಜಯ್ ಮುಂತಾದವರು ಭಾಗವಹಿಸಿದ್ದರು.ಸ