
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಡಿ.31: ಮಾಜಿ ಸಚಿವ, ಗ್ರಾಮೀಣ ಶಾಸಕ ಬಿ. ನಾಗೇಂದ್ರ ಅವರ ಇಬ್ಬರು ಆಪ್ತರ ಮನೆ ಮೇಲೆ ಸಿಬಿಐ ದಾಳಿ ನಡೆಸಿದೆ
ತೇರು ಬೀದಿಯಲ್ಲಿರುವ ವಿಶ್ವನಾಥ ಮತ್ತು ಹುಸೇನ್ ನಗರದಲ್ಲಿರುವ ಮಾರುತಿ ಎನ್ನುವವರ ಮನೆ ಮೇಲೆ ದಾಳಿ ನಡೆದಿದೆ. ಇವರು ಇಬ್ಬರು ನಾಗೇಂದ್ರ ಅವರ ಬಳಿ ಕೆಲಸ ಮಾಡುತ್ತಿದ್ದರಂತೆ.
ವಿಶ್ವನಾಥ ಅಕೌಂಟ್ ನೋಡಿಕೊಳ್ಳುತ್ತಿದ್ದರಂತೆ. ಅವರ ಕುಟುಂಬದ ಸದಸ್ಯರನ್ನು ಬ್ರೂಸ್ ಪೇಟೆ ಠಾಣೆಯಲ್ಲಿ ಕರೆದು ವಿಚಾರಿಸಿದರಂತೆ. ವಾಲ್ಮೀಕಿ ನಿಗಮದ ಹಗರಣದ ಹಿನ್ನಲೆಯಲ್ಲಿ ಈ ದಾಳಿ ಮಾಡಲಾಗಿದೆ ಎನ್ನಲಾಗುತ್ತಿದೆ.

























