Home ಜಿಲ್ಲೆ ಮಂಗಳೂರು ಶಾಸಕರಿದ್ದಾಗ ಡೀಲ್ ಮಾಡಿದವರು ಈಗ ರಸ್ತೆಯಲ್ಲಿ ಗುಂಡಿ ಹುಡುತ್ತಿದ್ದಾರೆ: ಶಾಸಕ ಅಶೋಕ್ ರೈ

ಶಾಸಕರಿದ್ದಾಗ ಡೀಲ್ ಮಾಡಿದವರು ಈಗ ರಸ್ತೆಯಲ್ಲಿ ಗುಂಡಿ ಹುಡುತ್ತಿದ್ದಾರೆ: ಶಾಸಕ ಅಶೋಕ್ ರೈ

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್‌ಗೆ ನಾನು ಶಾಸಕನಾದ ಮೂರು ವರ್ಷದ ಅವಧಿಯಲ್ಲಿ ಕುಡಿಯುವ ನೀರಿನ ಯೋಜನೆಗೆ ೧೦೦ ಕೋಟಿ ಸೇರಿ ಒಟ್ಟು ೧೧೧.೫೭ ಕೋಟಿ ಅನುದಾನವನ್ನು ನೀಡಿದ್ದೇವೆ, ಮುಂದಿನ ಎರಡು ವರ್ಷ ಇನ್ನೂ ಹೆಚ್ಚಿನ ಅನುದಾನ ನೀಡುತ್ತೇವೆ, ಹಿಂದೆ ಶಾಸಕರಾಗಿದ್ದವರು ಅಧಿಕಾರದ ಅವಧಿಯಲ್ಲಿ ಕಚೇರಿಯಲ್ಲಿ ಕುಳಿತು ಡೀಲ್ ಮಾಡಿದ್ದರು ಅವರೇ ಈಗ ರಸ್ತೆಯಲ್ಲಿ ಗುಂಡಿ ಹುಡುಕುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಅವರು ಆರೋಪಿಸಿದ್ದಾರೆ.
ಅವರು ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಿರಂತರ ಅಭಿವೃದ್ದಿ ಕೆಲಸಗಳು ನಡೆಯುತ್ತಿದೆ. ಜನರು ನಮಗೆ ವೋಟು ಹಾಕಿದ್ದು ಅಭಿವೃದ್ದಿ ಮಾಡುವ ಉದ್ದೇಶದಿಂದ ಈ ಕಾರಣಕ್ಕೆ ಜನರ ಬೇಡಿಕೆಯನ್ನು ಈಡೇರಿಸುತಿದ್ದೇವೆ, ಕಾಂಕ್ರೀಟ್ ಕಾಣದ ರಸ್ತೆಗಳನ್ನು ಅಭಿವೃದ್ದಿ ಮಾಡುತ್ತಿದ್ದೇವೆ,ಮೂರು ವರ್ಷದಲ್ಲಿ ಶಾಸಕ ಅಶೋಕ್ ರೈ ಕ್ಷೇತ್ರಕ್ಕೆ ಎಷ್ಟು ಅನುದಾನ, ಎಲ್ಲೆಲ್ಲಿಗೆ ಅನುದಾನ ನೀಡಿದ್ದೇವೆ ಎಂಬುದರ ಜಾತಕ ನಮ್ಮಲ್ಲಿದೆ ಅಗತ್ಯವಿದ್ದವರು ರಸ್ತೆಯಲ್ಲಿ ಗುಂಡಿ ಹುಡುಕುವವರು ತಮ್ಮ ಕಚೇರಿಯಿಂದ ಮಾಹಿತಿ ಪಡೆದುಕೊಳ್ಳಬಹುದು.ಅಭಿವೃದ್ದಿಯೋಂದೇ ನಮ್ಮ ಮಂತ್ರ ವಾಗಿದೆ, ನಮ್ಮದು ಅಭಿವೃದ್ದಿ ರಾಜಕೀಯವಾಗಿದೆ ಇದೇ ಕಾರಣಕ್ಕೆ ಕ್ಷೇತ್ರದ ಜನತೆ ಕಾಂಗ್ರೆಸ್ ಪಕ್ಷದತ್ತ ವಾಲುತ್ತಿದ್ದಾರೆ ಬೆಕಾದರೆ ಜನರಲ್ಲಿ ಕೇಳಿ ನೋಡಿ ಎಂದು ಸವಾಲು ಹಾಕಿದರು.
ನಾವು ಜನರನ್ನು ಧರ್ಮದ ಹೆಸರಿನಲ್ಲಿ ವಿಭಜನೆ ಮಾಡಿ, ಗಲಭೆ ಸೃಷ್ಟಿಸಿ, ಯಾರದ್ದೋ ಮಕ್ಕಳನ್ನು ಜೈಲಿಗೆ ಕಳು ಹಿಸಿ, ಯಾರದ್ದೋ ಮಕ್ಕಳ ಮೇಲೆ ಕೇಸು ಹಾಕಿಸಿ ನಾವು ಜನರಲ್ಲಿ ವೋಟು ಕೇಳುತ್ತಿಲ್ಲ, ನಾವು ಜನರ ಬೇಡಿಕೆ ಯನ್ನು ಈಡೇರಿಸಿ ಅಭಿವೃದ್ದಿ ಮಾಡಿ ವೋಟು ಕೇಳುತ್ತಿದ್ದೇವೆ ಎಂದು ಮಾಜಿ ಶಾಸಕ ಮಠಂದೂರು ವಿರುದ್ದ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.ಬಿಜೆಪಿಗೆ ಅಭಿವೃದ್ದಿ ಮಾಡಿ ಗೊತ್ತಿಲ್ಲ ಅವರಿಗೆ ಧರ್ಮದ ಹೆಸರಿನಲ್ಲಿ ಜನರ ನಡುವೆ ಸಂಘರ್ಷ ಸೃಷ್ಟಿ ಮಾಡುವುದೇ ಕೆಲಸ. ಅಧಿಕಾರಕ್ಕೆ ಬಂದಿದ್ದ ಇವರು ಹಿಂದೂ ಧರ್ಮಕ್ಕೆ ನೀಡಿದ ಕೆಲಸ ವೇನು ಎಂಬುದನ್ನು ಬಹಿರಂಗಪಡಿಸಲಿ, ಕೇವಲ ವೋಟಿಗಾಗಿ ಇವರು ಧರ್ಮವನ್ನು ದುರ್ಬಳಕೆ ಮಾಡುತ್ತಿದ್ದಾರೆ. ಜನ ಈಗ ವಿದ್ಯಾವಂತರಾಗಿದ್ದಾರೆ, ಬಿಜೆಪಿಯ ನಾಟಕ ಪೋಷಕರಿಗೂ ಅರ್ಥವಾಗುತ್ತಿದೆ ಮುಂದೆ ಇವರ ಧರ್ಮ ರಾಜಕೀಯ ನಾಟಕ ನಡೆಯುವುದಿಲ್ಲ ಜನ ಅಭಿವೃದ್ದಿ ಪರ ಇದ್ದಾರೆ ಎಂದು ಶಾಸಕರು ಹೇಳಿದರು.
ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ, ಈ ಕಾರಣಕ್ಕೆ ೧೦೦ ಕೋಟಿ ಅನುದಾನ ಇಟ್ಟಿದ್ದೇವೆ, ಕಾಮಗಾರಿ ಪ್ರಗತಿಯಲ್ಲಿದ್ದು ಮುಂದಿನ ಜನವರಿ ವೇಳೆ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ದಿನದ ೨೪ ಗಂಟೆ ಶುದ್ದ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡುತ್ತೇವೆ ಎಂದು ಶಾಸಕರು ಈ ಸಂದರ್ಭದಲ್ಲಿ ಜನರಿಗೆ ಭರವಸೆ ನೀಡಿದರು.
ಶಾಸಕರ ಅಭಿವೃದ್ದಿ ಕೆಲಸವನ್ನು ಕಂಡು ಬಿಜೆಪಿ ಹತಾಷೆಗೊಂಡಿದೆ, ಈ ಕಾರಣಕ್ಕೆ ಕ್ಷುಲ್ಲಕ ವಿಚಾರವನ್ನು ಮುಂದಿಟ್ಟು ಪುತ್ತೂರಿನಲ್ಲಿ ಸಂಘರ್ಷವನ್ನು ಸೃಷ್ಟಿ ಮಾಡುತ್ತಿದೆ. ಇಲ್ಲಿ ಶಾಂತಿಯುತ ವಾತಾವರಣ ಇದ್ದರೆ ಮಾತ್ರ ಅಭಿವೃದ್ಧಿ ಯಾಗಲು ಸಾಧ್ಯ ಎಂಬುದು ಬಿಜೆಪಿಗೆ ಗೊತ್ತಿದೆ. ಅಭಿವೃದ್ದಿಯಾಗುವುದನ್ನು ಕಂಡು ಸಹಿಸಲು ಸಾಧ್ಯವಾಗದ ಬಿಜೆಪಿ ಜನರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡುವ ಕೆಲಸದಲ್ಲಿ ತೊಡಗಿದೆ ಆದರೆ ಇನ್ನು ಬಿಜೆಪಿ ಡೋಂಗಿ ಆಟಗಳು ನಡೆಯುವುದಿಲ್ಲ ಎಂದು ವಿಟ್ಲ ಬ್ಲಾಕ್ ಅಧ್ಯಕ್ಷ ಪದ್ಮನಾಭ ಪೂಜಾರಿ ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್ , ಗ್ಯಾರಂಟಿ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಡಿಸಿಸಿ ಕಾರ್ಯದರ್ಶಿ ಮುರಳೀಧರ್ ರೈ ಮಟಂತಬೆಟ್ಟು, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಅಶ್ರಫ್, ನಾಮನಿರ್ದೇಶಿತ ಸದಸ್ಯ ಶ್ರೀನಿವಾಸ್ ವಿಟ್ಲ, ಹಂಝ, ರಮನಾಥ ವಿಟ್ಲ , ಸುಧೀರ್ ಉಕ್ಕುಡ,ಸುರೇಶ್ ವಿಟ್ಲ, ಮುರಳೀ ನಾಯಕ್, ಅಬ್ದುಲ್ ರಹಿಮಾನ್ ಕಾಂತಡ್ಕ, ಅಬ್ದುಲ್ ರಹಿಮಾನ್ ಕುರುಂಬಳ,ಚಂದ್ರಹಾಸ ಗೌಡ, ಕೃಷ್ಣಯ್ಯ ವಿಟ್ಲ ಅರಮನೆ, ಆನಂದ ದರ್ಬೆ, ಗಿರಿಧರ್ ಪುಚ್ಚೆಗುತ್ತು, , ಎಸ್ ಕೆಮಹಮ್ಮದ್, ಸುನಿತಾ ಕೋಟ್ಯಾನ್ ಉಕ್ಕುಡ, ರವಿ ಬಿಕೆ ಸೇರಿದಂತೆ ಪಕ್ಷದ ಕಾರ್ಯಕರ್ತರು ಫಲಾನುಭವಿಗಳು ಉಪಸ್ಥಿತರಿದ್ದರು.