
ಸುಳ್ಯ:ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಸುಳ್ಯ ಬಾಲವಿಕಾಸ ಸಮಿತಿ ಅಂಗನವಾಡಿ ಕೇಂದ್ರ ಬೆಂಡೋಡಿ ಇದರ ಆಶ್ರಯದಲ್ಲಿ ನೂತನ ಅಂಗನವಾಡಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ಬುಧವಾರ ನಡೆಯಿತು.
ಅಂಗನವಾಡಿ ಕೇಂದ್ರವನ್ನು ಸುಳ್ಯ ವಿಧಾನ ಸಬಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಅಂಗನವಾಡಿ ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಸುಮಿತ್ರ ವಹಿಸಿದ್ದರು.
ವೇದಿಕೆಯಲ್ಲಿ ಬೆಂಡೋಡಿ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಕಮಲಾಕ್ಷ ಬಿ, ನಿವೃತ್ತ ಶಿಕ್ಷಕಿ ಲಲಿತಕುಮಾರಿ ಎಸ್, ಕೊಲ್ಲಮೊಗ್ರು ಹರಿಹರ ಸಹಕಾರಿ ಸಂಘದ ಅಧ್ಯಕ್ಷ ಡಾ. ಸೋಮಶೇಖರ ಕಟ್ಟೆಮನೆ, ಉಪಾದ್ಯಕ್ಷ ಗಣೇಶ್ ಭಟ್ ಕೆ. ಎಸ್, ಸಿ.ಆರ್.ಪಿ ಕುಶಾಲಪ್ಪ ತುಂಬತ್ತಾಜೆ, ಕೊಲ್ಲಮೊಗ್ರ ವಲಯದ ಮೆಲ್ವೀಚಾರಕಿ ವಿಜಯ ಜೆ ಡಿ, ಬೆಳ್ಳಾರೆ ವಲಯ ಮೇಲ್ವಿಚಾರಕಿ ಉಷಾ ಪ್ರಸಾದ್, ಕೊಲ್ಲಮೊಗ್ರ ಗ್ರಾ.ಪಂ ಪಿಡಿಒ ಚೆನ್ನಪ್ಪ, ಕೊಲ್ಲಮೊಗ್ರು. ಗ್ರಾ ಪಂ. ನಿಕಟ ಪೂರ್ವ ಅಧ್ಯಕ್ಷೆ ಮೋಹಿನಿ ಕಟ್ಟ, ನಿಕಟಪೂರ್ವ ಉಪಾಧ್ಯಕ್ಷ ಮಾಧವ ಚಾಂತಾಳ, ಬೆಂಡೋಡಿ ಶಾಲಾ ಸ್ಥಾಪಕಾದ್ಯಕ್ಷ ಕೆ. ಪಿ. ಗಿರಿಧರ, ಸ್ಥಳ ದಾನಿ ಹೇಮಾವತಿ ಚೊಕ್ಕಾಡಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕಿ ಲಲಿತಕುಮಾರಿ ಎಸ್, ಕೊಲ್ಲಮೊಗ್ರ ಗ್ರಾ.ಪಂ ನಿಕಟಪೂರ್ವ ಉಪಾದ್ಯಕ್ಷ ಮಾಧವ ಚಾಂತಾಳ, ಪಿಡಬ್ಲ್ಯುಡಿ ಕಂಟ್ರಾಕ್ಟರ್ ರಾಧಾಕೃಷ್ಣ ಕಟ್ಟೆಮನೆ, ನಿವೃತ್ತ ಅಂಗನವಾಡಿ ಕಾರ್ಯಕರ್ತೆ ನಳಿನಿ ಹಾಗೂ ಕೊಲ್ಲಮೊಗ್ರ ಅಂಗನವಾಡಿ ಕಾರ್ಯಕರ್ತೆ ಪುಷ್ಪಾವತಿ ಅವರನ್ನು ಸನ್ಮಾನಿಸಲಾಯಿತು. ಅಂಗನವಾಡಿ ಕಾರ್ಯಕರ್ತೆ ಪವಿತ್ರ ಸ್ವಾಗತಿಸಿ, ಮಾಧವ ಚಾಂತಾಳ ಪ್ರಸ್ತಾವಿಕ ಮಾತನಾಡಿದರು. ನಯನ ಬೊಳಿಯಾನಮನೆ ಕಾರ್ಯಕ್ರಮ ನಿರೂಪಿಸಿದರು.






























