
ಸುಳ್ಯ:ಐವತ್ತೊಕ್ಲು ಗ್ರಾಮದ ನಿಡ್ವಾಳ-ಅತ್ಯಡ್ಕ-ಮೇಲ್ಪಾಡಿ ಕಾಂಕ್ರೀಟಿಕರಣಗೊಂಡ ರಸ್ತೆ ಮತ್ತು ನಿಡ್ವಾಳ ಮಹಾವಿಷ್ಣು ದೇವಸ್ಥಾನಕ್ಕೆ ಹೋಗುವ ರಸ್ತೆಯನ್ನು ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು.
ಬಹು ವರುಷಗಳ ಬೇಡಿಕೆಯಾದ ಐವತ್ತೊಕ್ಲು ಗ್ರಾಮದ ನಿಡ್ವಾಳ-ಅತ್ಯಡ್ಕ-ಮೇಲ್ಪಾಡಿ ರಸ್ತೆ ಕಾಂಕ್ರೀಟಿಕರಣಕ್ಕೆ ೫೦ಲಕ್ಷ ಅನುದಾನ ಮತ್ತು ನಿಡ್ವಾಳ ಮಹಾವಿಷ್ಣು ದೇವಸ್ಥಾನ ರಸ್ತೆ ಕಾಂಕ್ರೀಟಿಕರಣಕ್ಕೆ ಸುಮಾರು ೧೦ಲಕ್ಷ ಅನುದಾನದಲ್ಲಿ ಕಾಂಕ್ರೀಟಿಕರಣಗೊಂಡಿತ್ತು.
ಈ ಸಂದರ್ಭ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಸುವರ್ಣಿನಿ, ಪಂಜ ಗ್ರಾಪಂ ಮಾಜಿ ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್ಲು, ನಿಕಟ ಪೂರ್ವ ಉಪಾಧ್ಯಕ್ಷ ನಾರಾಯಣ ಕೃಷ್ಣ ನಗರ, ನಿಕಟ ಪೂರ್ವ ಸದಸ್ಯ ಜಗದೀಶ್ ಪುರಿಯ, ಶಿವರಾಮಯ್ಯ ಕರ್ಮಾಜೆ, ದಯಾನಂದ ಮೇಲ್ಮನೆ, ಅಶೋಕ್ ಮೇಲ್ಪಾಡಿ, ನಾರಾಯಣ ಶಿರಾಜೆ, ಲಕ್ಷ್ಮಿ ನಾರಾಯಣ ಮೇಲ್ಪಾಡಿ, ಜಗನಾಥ ರೈ ಕುಳಾಯಿತ್ತೋಡಿ, ವಾಸುದೇವ ಅಲೆಂಗಾರ, ಕುಶಾಲಪ್ಪ ಬರೆಮೇಲು ಹಾಗೂ ರಸ್ತೆಯ ಫಲಾನಭವಿಗಳು ಉಪಸ್ಥಿತರಿದ್ದರು. ಲೋಕೇಶ್ ಬರೆಮೇಲು ಸ್ವಾಗತಿಸಿ, ಸುರೇಶ್ ಅತ್ಯಡ್ಕ ವಂದಿಸಿದರು.

































