
ಮಂಗಳೂರು: ನಗರದ ಕೊಡಿಯಾಲಬೈಲ್‌ನ ಶಾರದಾ ವಿದ್ಯಾಲಯದ ಭೂವರಾಹ ಬಯಲು ಸಭಾಂಗಣದಲ್ಲಿ ಈ ದಿನ ಶಾರದಾ ಸಮೂಹ ವಿದ್ಯಾ ಸಂಸ್ಥೆಗಳ ಪೂರ್ವ ಪ್ರಾಥಮಿಕ ತರಗತಿಗಳ ಮುದ್ದು ಪುಟಾಣಿಗಳಿಗಾಗಿ ಶ್ರದ್ಧಾಭಕ್ತಿಯುತವಾದ, ಭಾವನಾತ್ಮಕವಾದ ಜ್ಯೋತಿಪ್ರದಾನ ಸಮಾರಂಭವು ಅತ್ಯಂತ ಸಂಭ್ರಮೋಲ್ಲಾಸದೊಂದಿಗೆ ನೆರವೇರಿತು. ಮಂಗಳೂರಿನ ಪ್ರಖ್ಯಾತ ಕೆ.ಎಂ.ಸಿ. ಆಸ್ಪತ್ರೆಯ ಮಕ್ಕಳ ವಿಭಾಗದ ಪ್ರೊಫೆಸರ್ ಡಾ. ನೂತನ್ ಕಾಮತ್ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿ ಮಕ್ಕಳ ಬೆಳವಣಿಗೆಯಲ್ಲಿ ವಿವಿಧ ಶೈಲಿಯ ಪೋ?ಕತ್ವದ ಪಾತ್ರದ ಬಗ್ಗೆ ಉಲ್ಲೇಖಿಸಿ, ಹೆತ್ತವರಿಗೆ ಅವರ ಜವಾಬ್ದಾರಿಗಳ ಕುರಿತು ಕಿವಿಮಾತನ್ನು ಹೇಳಿದರು.
ಶಾರದಾ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಡಾ| ಎಂ. ಬಿ. ಪುರಾಣಿಕ್ ಅವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಸ್ಥೆಯ ಆಡಳಿತ ನಿರ್ದೇಶಕರು ಹಾಗೂ ವಿಶ್ವಸ್ಥರಾದ ಶ್ರೀ ಸಮೀರ್ ಪುರಾಣಿಕ್, ವಿಶ್ವಸ್ಥರಾದ ಶ್ರೀ ಸುಧಾಕರ ರಾವ್ ಪೇಜಾವರ್, ಶಾರದಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಪ್ರಕಾಶ್ ನಾಯ್ಕ್, ಶಾರದಾ ಶುಭೋದಯ ವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಪ್ರತಿಭಾ ನೇಮಿರಾಜ್, ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲರಾದ ಶ್ರೀ ಮೋಹನದಾಸ್ ಉಪಸ್ಥಿತರಿದ್ದರು.
ಶುಭೋದಯ ವಿದ್ಯಾಲಯ ಮೂಡುಶೆಡ್ಡೆ, ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ತಲಪಾಡಿ, ಶಾರದಾ ವಿದ್ಯಾಲಯ ಮಂಗಳೂರಿನ ಪೂರ್ವ ಪ್ರಾಥಮಿಕ ತರಗತಿಯ ವಿದ್ಯಾರ್ಥಿಗಳು ಈ ಸಮಾರಂಭದಲ್ಲಿ ಪಾಲ್ಗೊಂಡರು. ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಮಾಣ ಪತ್ರ ಹಾಗೂ ಸ್ಮರಣಿಕೆಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಾರದಾ ವಿದ್ಯಾಲಯದ ಮೊದಲ ಮಹಡಿಯಲ್ಲಿ ಶಿಶುವಿಹಾರದ ಮುದ್ದು ಪುಟಾಣಿಗಳಿಗಾಗಿ ನೂತನವಾಗಿ ವ್ಯವಸ್ಥೆಗೊಳಿಸಿದ ಮನೋರಂಜಕವಾದ ವರ್ಣ ವಿನ್ಯಾಸ ಚಿತ್ರಗಳಿಂದ ಒಡಗೂಡಿದ ಅತ್ಯಾಕ?ಕ ಆಟದ ಕೋಣೆಯ ಉದ್ಘಾಟನೆ ನೆರವೇರಿತು. ಶಾರದಾ ವಿದ್ಯಾಲಯದ ಪ್ರಾಂಶುಪಾಲೆ ಶ್ರೀಮತಿ ಚಂದ್ರಿಕಾ ಭಂಡಾರಿ ಸ್ವಾಗತಿಸಿದರು ವಿದ್ಯಾಲಯದ ಆಡಳಿತ ಪ್ರಾಂಶುಪಾಲ ಶ್ರೀ ದಯಾನಂದ ಕಟೀಲ್ ವಂದನಾರ್ಪಣೆಗೈದರು. ಶಿಕ್ಷಕಿಯರಾದ ಶ್ರೀಮತಿ ಅಂಜನಾ ಮಾಧವ ಅತ್ತಾವರ ಹಾಗೂ ಶ್ರೀಮತಿ ಎಡ್ನಾ ವೇಗಸ್ ಕಾರ್ಯಕ್ರಮ ನಿರ್ವಹಿಸಿದರು.






























