
ಬೇಸಿಗೆ ರಜೆಯನ್ನು ಸದುಪಯೋಗಪಡಿಸಿಕೊಳ್ಳಲು ಶಾರದಾ ವಿದ್ಯಾಲಯ, ಕೊಡಿಯಾಲಬೈಲು, ಮಂಗಳೂರಿನಲ್ಲಿ ಕಳೆದ ಹಲವಾರು ವರ್ಷಗಳಿಂದ “ವಿಕಸನ” ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದ್ದು, ಈ ಶಿಬಿರದಲ್ಲಿ ಮಕ್ಕಳ ಸರ್ವತೋಮುಖ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವಂತಹ ಯೋಗ, ಚಿತ್ರಕಲೆ, ಕಸೂತಿ, ಭಜನೆ, ನೃತ್ಯ ಭಜನೆ, ಜಾನಪದ ನೃತ್ಯ, ಸಂಗೀತ, ಸಂಸ್ಕೃತ ಶ್ಲೋಕಾಭ್ಯಾಸ, ಭಾರತೀಯ ಆಟಗಳು, ಭಾಷಣ, ನಾಟಕ ಮುಂತಾದ ಹತ್ತು ಹಲವು ವಿಷಂiiಗಳನ್ನು ಒಳಗೊಂಡಿದ್ದು, ಶಿಬಿರವು ದಿನಾಂಕ ೦೧-೦೪-೨೦೨೬ ರಿಂದ ೧೧-೦೪-೨೦೨೬ರ ವರೆಗೆ ಜರಗಲಿದೆ.
ಈ ಶಿಬಿರದಲ್ಲಿ ಬೆಳಿಗ್ಗೆ ತಾಜಾ ಹಣ್ಣಿನ ಜ್ಯೂಸ್, ಮಧ್ಯಾಹ್ನದ ಊಟ, ಸಂಜೆ ಲಘುಪಹಾರ ಹಾಗೂ ಒಂದು ದಿನದ ಶೈಕ್ಷಣಿಕ ಪ್ರವಾಸವನ್ನು ಒಳಗೊಂಡಿದೆ ಎಂದು ಶಾರದಾ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಡಾ| ಎಂ. ಬಿ. ಪುರಾಣಿಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: ೦೮೨೪-೨೪೯೨೬೨೮, ೨೪೯೩೦೮೯, ೯೦೧೯೭೩೦೪೭೯, ೯೪೮೧೩೧೯೮೫೦, ೯೪೪೮೫೪೫೫೭೮





















