ಮಂಗಳೂರು : ವಿದ್ಯಾರ್ಥಿಗಳಲ್ಲಿ ಕಲಿಕೆಯೊಂದಿಗೆ ಪ್ರಕೃತಿಯೊಡನೆ ಒಡನಾಟವನ್ನು ಇಟ್ಟುಕೊಳ್ಳುವ ಪ್ರಜ್ಣೆ , ಜಾಗೃತಗೊಳಿಸುವ ವಿಶಿಪ್ಟ ಕಾರ್ಯಕ್ರಮವೇ “ಕೆಸರ್‌ಡೊಂಜಿ ದಿನ” ಇಂತಹ ಕಾರ್ಯಕ್ರಮವನ್ನು ಶಾಲಾ, ಕಾಲೇಜುಗಳಲ್ಲಿ ಆಯೋಜಿಸಿದಾಗ ವಿದ್ಯಾರ್ಥಿಗಳಿಗೆ ಗ್ರಾಮೀಣ ಜೀವನದ ಪರಿಚಯವಾಗುತ್ತದೆ. ಇದರಿಂದ ಮಕ್ಕಳಲ್ಲಿ ಮನಸ್ಸು ಒತ್ತಡದಿಂದ ಹಗುರವಾಗುತ್ತದೆ-ಎಂಬುದಾಗಿ ಅದ್ಯಪಾಡಿ ಶ್ರೀ ಆದಿನಾಥೇಶ್ವರ ದೇವಳದ ಪ್ರಧಾನ ಅರ್ಚಕರಾದ ಶ್ರೀ ಮಹೇಶ್ ಭಟ್ ಅದ್ಯಪಾಡಿ ಅವರು ಅಭಿಪ್ರಾಯಪಟ್ಟರು. ಶ್ರೀಯುತರು ಮಂಗಳೂರಿನ ಅದ್ಯಪಾಡಿ ಶ್ರೀ ಆದಿನಾಥೇಶ್ವರ ದೇವಸ್ಥಾನದ ಬಳಿಯ ಕೆಸರುಗದ್ದೆಯಲ್ಲಿ ಶಾರದಾ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ನಡೆದ “ಕೆಸರ್‌ಡೊಂಜಿ ದಿನ” ಕಾರ್ಯಕ್ರಮವನ್ನು ಭತ್ತದ ಕಳಸದಲ್ಲಿಟ್ಟ ತೆಂಗಿನ ಹಿಂಗಾರವನ್ನು ಅರಳಿಸುವುದರ ಮುಖಾಂತರ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅದ್ಯಕ್ಷರಾದ ಡಾ.ಎಂ.ಬಿ ಪುರಾಣಿಕರು ಮಾತನಾಡಿ “ವಿದ್ಯಾರ್ಥಿಗಳು ಸದಾ ಉತ್ಸಾಹದಿಂದ ಇರಬೇಕಾದರೆ ನಗರದ ಮತ್ತು ಸ್ವಾಭಿಮಾನದ ಜೀವನ ಕಟ್ಟಿಕೊಳ್ಳುವ ಪರಿಕಲ್ಪನೆ ಮಾಡಬೇಕಾದರೆ ಇಂತಹ ವಿಶಿಪ್ಟ ಗ್ರಾಮೀಣ ಕ್ರೀಡೆಗಳಿಂದ ಮಾತ್ರ ಸಾದ್ಯ’ ಎಂದು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನುಡಿದರು. ಆಡಳಿತ ಮಂಡಳಿಯ ಕಾರ್ಯದರ್ಶಿ ಶ್ರೀ ಪ್ರದೀಪ ಕುಮಾರ ಕಲ್ಕೂರ ಹಾಗೂ ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಟ್ರಸ್ಟಿ ಹಾಗು ನಿರ್ದೇಶಕರಾದ ಶ್ರೀ ಸಮೀರ್
ಪುರಾಣಿಕ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಭಜರಂಗದಳದ ಪ್ರಮುಖರಾದ ಶ್ರೀ ಭುಜಂಗ ಕುಲಾಲ್ ಉದ್ಯಮಿ ಶ್ರೀ ಕುಮಾರ್ ಅದ್ಯಪಾಡಿ, ವಿದ್ಯಾರ್ಥಿ ಕ್ಪೇಮಪಾಲನಾ ಅಧಿಕಾರಿ, ಶ್ರೀ ಗುರುರಾಜ ಬಿ, ಶಾರೀರಿಕ ನಿರ್ದೇಶಕರಾದ ಶ್ರೀ ಸುಧಾಕರ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.
ಶಾರದಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಪ್ರಕಾಶ್ ನಾಯ್ಕ್, ಅತಿಥಿಗಳನ್ನು ಪರಿಚಯಿಸಿದರು. ಉಪಪ್ರಾಂಶುಪಾಲೆ ಶ್ರೀಮತಿ ಅರುಣಾ ಕುಮಾರಿ ಧನ್ಯವಾದವಿತ್ತರು. ಸಂಸ್ಕೃತ ಉಪನ್ಯಾಸಕ ಶ್ರೀ ರಮೇಶ್ ಆಚಾರ್ಯ ಅವರು ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಿಗೆ ವಿಶೇಷವಾದ ಕೆಸರಿನಲ್ಲಿ ವಿವಿಧ ಗ್ರಾಮೀಣ ಕ್ರೀಡಾ ಸ್ಪರ್ಧೆಗಳನ್ನು ಆಯೊಜಿಸಲಾಗಿತ್ತು, ಕೆಸರಿನಲ್ಲಿ ಓಟ, ನಿಧಿ ಶೋಧನೆ, ಕೆಸರಿನಲ್ಲಿ ವಾಲಿಬಾಲ್ ಪಂದ್ಯಾಟ, ತ್ರೋಬಾಲ್ ಪಂದ್ಯಾಟ, ಮಡಕೆ ಒಡೆಯುವ ಸ್ಪರ್ಧೆ, ಹಗ್ಗ ಜಗ್ಗಾಟ ಸ್ಪರ್ಧೆ, ಹಾಗೂ ಸಾಮೂಹಿಕ eನಪದ ಗೀತೆಯನ್ನು ಹಾಡಿ ಮಕ್ಕಳು ಕೆಸರಿನಲ್ಲಿ ಜಾನಪದ ನೃತ್ಯ ಮಾಡಿ ಸಂಭ್ರಮಿಸಿದರು.
ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಹಾಗೂ ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಮಣ್ಣಿನ ಸೊಗಡಿನ ಪರಿಚಯ ಮಾಡಿಕೊಡುವ ಉದ್ದೇಶದಿಂದ “ಕೆಸರ್‌ಡೊಂಜಿ ದಿನ” ಕಾರ್ಯಕ್ರಮವನ್ನು ಆಯೊಜಿಸಲಾಗಿತ್ತು.


























