ಮಂಗಳೂರು- ದ.ಕಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಮಂಗಳೂರು ಹಾಗೂ ಶಾರದಾ ಪದವಿ ಪೂರ್ವಕಾಲೇಜುಕೊಡಿಯಾಲ್‌ಬ್ಯೆಲ್ ಮಂಗಳೂರು ಮತ್ತು ಪೊಂಪ್ಯೆ ಪ್ರೌಢಶಾಲೆಉರ್ವಇದರ ಸಂಯುಕ್ತಆಶ್ರಯದಲ್ಲಿ ನಡೆದ ಮಂಗಳೂರು ಉತ್ತರತಾಲೂಕು ಮಟ್ಟದ ೧೪ ರಿಂದ ೧೭ ವಯೋಮಿತಿಯ ಬಾಲಕ ಬಾಲಕಿಯರಕಬಡ್ಡಿ ಪಂದ್ಯಾಟವು ಶಾರದಾ ಪ.ಪೂ ಕಾಲೇಜಿನ ಭೂವರಾಹಸಭಾಂಗಣದಲ್ಲಿ ಸಮಾರೋಪ ಸಮಾರಂಭ ಹಾಗೂ ಪ್ರಶಸ್ತಿ ಪ್ರಧಾನಕಾರ್ಯಕ್ರಮ ನಡೆಯಿತು.
ಬಾಲಕರ ವಿಭಾಗದ ೧೪ರ ವಯೋಮಿತಿಯಕಬಡ್ಡಿ ಪಂದ್ಯಾಟದಲ್ಲಿವಾಲ್ಮೀಕಿ ಮಹರ್ಷಿ ಪ್ರೌಢಶಾಲೆ ಮದ್ಯ ಸುರತ್ಕಲ್‌ಶಾಲಾ ತಂಡ ಪ್ರಥಮ ಸ್ಥಾನ ಪಡೆದು ಪ್ರಶಸ್ತಿ ಪಡೆಯಿತು. ಹಾಗೂ ವಾಲ್ಮೀಕಿ ಮಹರ್ಷಿ ಪ್ರೌಢಶಾಲೆ ಮದ್ಯ ಸುರತ್ಕಲ್ ಶಾಲೆ ದ್ವಿತೀಯ ಸ್ಥಾನ ಪಡೆದು ಪ್ರಶಸ್ತಿ ಪಡೆಯಿತು.೧೪ರ ವಯೋಮಿತಿಯಬಾಲಕಿಯ ವಿಭಾಗದಲ್ಲಿಇಂದಿರಾಗಾಂಧಿ ಪ್ರೌಢಶಾಲೆಕೊಂಚಾಡಿಶಾಲಾ ತಂಡ ಪ್ರಥಮಸ್ಥಾನದೊಂದಿಗೆಪ್ರಶಸ್ತಿ ಪಡೆಯಿತು. ಹಾಗೂ ಸರಕಾರಿ ಪ್ರೌಢಶಾಲೆ ಮೀನಕಳಿಯ ಶಾಲೆ ದ್ವಿತೀಯ ಸ್ಥಾನ ಪಡೆದು ಪ್ರಶಸ್ತಿ ಪಡೆಯಿತು.೧೭ರ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಬಟ್ರೆಂಡ್‌ರಸೆಲ್ ಪ್ರಾಥಮಿಕ ಶಾಲೆ ಸುರತ್ಕಲ್‌ಶಾಲಾ ತಂಡ ಪ್ರಥಮ ಸ್ಥಾನದೊಂದಿಗೆ ಪ್ರಶಸ್ತಿ ಪಡೆಯಿತು. ಹಾಗೂ ವಿದ್ಯಾಜ್ಯೋತಿ ಪ್ರಾಥಮಿಕ ಶಾಲೆ ಕಾವೂರು ಶಾಲೆ ದ್ವಿತೀಯ ಸ್ಥಾನ ಪಡೆದು ಪ್ರಶಸ್ತಿ ಪಡೆಯಿತು. ಹಾಗೂ ಬಾಲಕರ ವಿಭಾಗದಲ್ಲಿ ಹೋಲಿಫ್ಯಾಮಿಲಿ ಪ್ರಾಥಮಿಕ ಶಾಲೆ ಸುರತ್ಕಲ್ ಶಾಲಾ ತಂಡಪ್ರಥಮ ಸ್ಥಾನದೊಂದಿಗೆ ಪ್ರಶಸ್ತಿ ಪಡೆಯಿತು.ಇಂದಿರಾಗಾಂಧಿ ಪ್ರೌಢಶಾಲೆಕೊಂಚಾಡಿ ಶಾಲೆ ದ್ವಿತೀಯ ಸ್ಥಾನ ಪಡೆದು ಪ್ರಶಸ್ತಿ ಪಡೆಯಿತು.
ಸಮಾರೋಪ ಸಮಾರಂಭದಲ್ಲಿ ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅದ್ಯಕ್ಷರಾದ ಶ್ರೀ ಡಾ.ಎಂ.ಬಿ ಪುರಾಣಿಕ್ ಹಾಗೂ ನಿರ್ದೇಶಕರಾದ ಶ್ರೀ ಸಮೀರ್ ಪುರಾಣಿಕ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದಅಧ್ಯಕ್ಷೆ ಶ್ರೀಮತಿ ಚೆಲುವಮ್ಮ, ಮಂಗಳೂರು ಉತ್ತರ ವಲಯದದೈಹಿಕ ಶಿಕ್ಷಣಾಧಿಕಾರಿ ಶ್ರೀ ಭರತ್, ಸಿ.ಆರ್.ಪಿ ಶ್ರೀ ಸಿಕಂದರ, ಕ್ರೀಡಾಭಾರತೀಯ ಕಾರ್ಯದರ್ಶಿ ಶ್ರೀ ಹರೀಶರೈ, ಶಾರದಾ ಪ.ಪೂ ಕಾಲೇಜಿನ ಪ್ರಾಚಾರ್ಯ ಶ್ರೀ ಪ್ರಕಾಶ್ ನಾಯ್ಕ್, ಉಪ ಪ್ರಾಚಾರ್ಯ ಶ್ರೀಮತಿ ಅರುಣಾಕುಮಾರಿ, ಶಾರದಾ ವಿದ್ಯಾಲಯ ಪ್ರಾಶುಪಾಲರಾದ ಶ್ರೀ ದಯಾನಂದಕಟೀಲ್ ಹಾಗೂ ಶಾರದಾ ಪ.ಪೂ ದ್ಯೆಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಸುಧಾಕರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಉಪನ್ಯಾಸಕ ಶ್ರೀ ರಮೇಶ್‌ಆಚಾರ್ಯ ನಾರಳಕಾರ್ಯಕ್ರಮ ನಿರೂಪಿಸಿದರು.


























