
ವಾಷಿಂಗ್ಟನ್, ಅ.6- ಇಸ್ರೇಲ್- ಗಾಜಾ ನಡುವೆ ಶಾಂತಿ ಮಾತುಕತೆಗಳು ಪ್ರಾರಂಭವಾಗುತ್ತಿದ್ದಂತೆ ಮಧ್ಯವರ್ತಿಗಳು ವೇಗವಾಗಿ ಕಾರ್ಯಪ್ರವೃತ್ತರಾಗಬೇಕು ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಹಮಾಸ್ ಮತ್ತು ಇಸ್ರೇಲ್ ನಡುವಿನ ಪರೋಕ್ಷ ಶಾಂತಿ ಮಾತುಕತೆಗಳಿಗಾಗಿ ಈಜಿಪ್ಟ್‍ನಲ್ಲಿ ಮಧ್ಯವರ್ತಿಗಳು ಸಭೆ ಸೇರಲಿದ್ದಾರೆ, ಈ ಹಿನ್ನೆಲೆಯಲ್ಲಿ ಟ್ರಂಪ್ ಸೂಚನೆ ನೀಡಿದ್ದಾರೆ.
ಗಾಜಾ ಯುದ್ಧ ಕೊನೆಗೊಳಿಸುವ ಪ್ರಯತ್ನಗಳಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರೂ ವೇಗವಾಗಿ ಕೆಲಸ ಮಾಡುವ ಮೂಲಕ ಶಾಂತಿ ಪ್ರಕ್ರಿಯೆ ಕೆಲಸ ಜಾರಿಯಾಗಲು ಶ್ರಮಿಸಬೇಕಾಗಿದೆ ಎಂದಿದ್ದಾರೆ.
ಒತ್ತೆಯಾಳುಗಳನ್ನು ಮುಕ್ತಗೊಳಿಸುವುದು ಮತ್ತು ಗಾಜಾ ಆಡಳಿತವನ್ನು ಪ್ಯಾಲೆಸ್ತೀನಿಯನ್ ಹಸ್ತಾಂತರಿಸುವುದು ಸೇರಿದಂತೆ 20 ಅಂಶಗಳ ಅಮೆರಿಕಾ ಶಾಂತಿ ಯೋಜನೆಯ ಕೆಲವು ಭಾಗಗಳಿಗೆ ಹಮಾಸ್ ಬಂಡುಕೋರರು ಒಪ್ಪಿಕೊಂಡ ನಂತರ ಮಾತುಕತೆ ಆರಂಭವಾಗಿವೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಡೊನಾಲ್ಡ್ ಟ್ರಂಪ್, ಮಾತುಕತೆಗಳು “ಬಹಳ ಯಶಸ್ವಿಯಾಗುವ ಹಂತದಲ್ಲಿವೆ.” ಮೊದಲ ಹಂತ ಈ ವಾರ ಪೂರ್ಣಗೊಳ್ಳಬೇಕು ಎಲ್ಲರೂ ವೇಗವಾಗಿ ಕೆಲಸ ಮಾಡಬೇಕು ಎಂದು ತಿಳಿಸಿದ್ದಾರೆ.
“ಸಮಯವು ಅತ್ಯಗತ್ಯ ಅಥವಾ ಬೃಹತ್ ರಕ್ತಪಾತ ನಿಲ್ಲಿಸಲು ಎಲ್ಲಾ ಮಧ್ಯವರ್ತಿಗಳು ತಮ್ಮ ಕೆಲಸವನ್ನು ಶೀಘ್ರಗತಿಯಲ್ಲಿ ಮಾಡಬೇಕು” ಎಂದು ಸಲಹೆ ನೀಡಿದ್ದಾರೆ.
ಇದಕ್ಕೂ ಮೊದಲು ವರದಿಗಾರರೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್, ಒತ್ತೆಯಾಳುಗಳನ್ನು “ಬಹಳ ಬೇಗ” ಬಿಡುಗಡೆ ಮಾಡಲು ಪ್ರಾರಂಭಿಸುವ ಪ್ರಕ್ರಿಯೆ ಆರಂಭಿಸಲಾಗುತ್ತಿದೆ ಎಂದಿದ್ದಾರೆ.
ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವೆ ಶಾಂತಿ ಯೋಜನೆ ಎಲ್ಲರೂ ಇದಕ್ಕೆ ಒಪ್ಪಿಕೊಂಡಿದ್ದಾರೆ, ಆದರೆ ಯಾವಾಗಲೂ ಕೆಲವು ಬದಲಾವಣೆಗಳು ಇರುತ್ತವೆ. ಅದನ್ನು ಈಗ ಪಾಲಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
ಈ ನಡುವೆ ಹಮಾಸ್ ಪ್ರಸ್ತಾವಿತ ಯೋಜನೆಗೆ ಪ್ರತಿಕ್ರಿಯಿಸಿದ ನಂತರ ತಕ್ಷಣ ಬಾಂಬ್ ದಾಳಿಯನ್ನು ನಿಲ್ಲಿಸಿ” ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರೂ ಇಸ್ರೇಲ್ ದಾಳಿ ನಡೆಸಿ ಹಲವರನ್ನು ಹತ್ಯೆ ಮಾಡಿತ್ತು.

































