
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು.03:– ಬಸವಾಧಿ ಶರಣರ ಸಂದೇಶಗಳೂ ಹಾಗೂ ಅದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ನಮ್ಮ ಜೀವನದಲ್ಲಿ ಅಳವಡಿಕೊಂಡು ನೆಮ್ಮದಿಯಾಗಿ ಬದುಕಲು ಸಾಧ್ಯವಿದೆ ಎಂದು ಸಾಹಿತಿ ಪ್ರೊ. ದೇವನೂರು ಸದಾಶಿವಮೂರ್ತಿ ತಿಳಿಸಿದರು.
ತಾಲೂಕಿನ ಆಲೂರು ಗ್ರಾಮದಲ್ಲಿ ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ದಿ ಸಂಘ ಹಾಗೂ ಆಲೂರು ವೀರಶೈವ ಲಿಂಗಾಯತ ಸಮಾಜದ ಸಹಯೋಗದಲ್ಲಿ ನಡೆದ ಊರಿಂದೂರಿಗೆ ಶರಣರ ಸಂದೇಶದ ಕಾರ್ಯಕ್ರಮದ ಸಮಾರೋಪ ಹಾಗೂ ಕಾಯಕ ಯೋಗಿಗಳಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬಸವಾದಿ ಶರಣರು ಅನುಭಾವದ ಮಾತುಗಳನ್ನು ವಚನದ ರೂಪದಲ್ಲಿದ್ದಾರೆ. ಅವರ ಸಂದೇಶಗಳು ಸರ್ವಕಾಲಿಕ ಮತ್ತು ಮೌಲ್ಯವನ್ನು ಹೊಂದಿದೆ. 21ನೇ ಶತಮಾನದಲ್ಲಿಯು ಅವರ ವಚನಗಳ ಸಾರಗಳು ಜನ ಮಾನಸದಲ್ಲಿದ್ದರೆ ಅದು ಅವರು ಕಂಡಂತಹ ಸತ್ಯ ಮತ್ತು ಸಮ ಸಮಾಜವನ್ನು ನಿರ್ಮಾಣ ಮಾಡಲು ಅವರು ಮಾಡಿದ ತ್ಯಾಗ ಸಾಕ್ಷಿಯಾಗಿದೆ ಎಂದರು.
ಒತ್ತಡ ಬದುಕಿಗೆ ಶರಣದ ವಚನಗಳಲ್ಲಿ ಪಾಠ ಇದೆ. ಕಾಯಕವೇ ಕೈಲಾಸ ಎಂದು ಹೇಳುವ ಮೂಲಕ ಜಗತ್ತಿಗೆ ಕಾಯಕ ಮಾರ್ಗವನ್ನು ತೋರಿಸಿಕೊಟ್ಟರು. ಸ್ತ್ರೀಯರಿಗೆ ಸಮಾನತೆ ಮತ್ತು ಸಹಬಾಳ್ವೆಯ ಮೂಲಕ ನೆಮ್ಮದಿ ಜೀವನವನ್ನು ಕಟ್ಟಿಕೊಳ್ಳಿ ಎಂದರು.
ವೀರಶೈವ ಲಿಂಗಾಯತ ನೌಕರರ ಸಂಘವು 25ನೇ ವರ್ಷದ ಬೆಳ್ಳಿ ಹಬ್ಬದ ಅಂಗವಾಗಿ ಊರಿಂದೂರಿಗೆ ಶರಣರ ಸಂದೇಶ ಕಾರ್ಯಕ್ರಮವನ್ನು ಒಂದು ವರ್ಷಗಳ ಕಾಲ 24 ಗ್ರಾಮಗಳಲ್ಲಿ ಯಶಸ್ವಿಯಾಗಿ ನಡೆಸಿ, 25ನೇ ಕಾರ್ಯಕ್ರಮವು ಮೂರು ಸಂಘಗಳ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷರಾದ ಬಸಪ್ಪ ಅವರ ನೇತೃತ್ವದಲ್ಲಿ ಬಹಳ ಯಶಸ್ವಿಯಾಗಿ ನಡೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಗ್ರಾಮದಲ್ಲಿ ಶವ ಸಂಸ್ಕಾರ ಮಾಡುವ ಕಾಯಕ ಜೀವಿಗಳಿಗೆ, ಭಜನ ತಂಡದವರಿಗೆ ಹಾಗೂ ಸಾಧನೆಗೈದ ಗ್ರಾಮದ ಹಿರಿಯರಿಗೆ ಗೌರವ ಸನ್ಮಾನ ಮಾಡಲಾಯಿತು.
ವೇದಿಕೆಯಲ್ಲಿ ಶ್ರೀ ಗುರು ಕಂಬಳೇಶ್ವರ ಮಠದ ಕಿರಿಯ ಶ್ರೀಗಳು, ವೀರಶೈ ಸಮಾಜದ ಮುಖಂಡ ಗೌಡರ ಶಿವರುದ್ರಪ್ಪ, ವೀರಶೈವ ಲಿಂಗಾಯತ ನೌಕರರ ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ, ನಿವೃತ್ತ ಪ್ರಾಧ್ಯಾಕರಾದ ಡಾ. ಬಿ. ಶೀಲಾಕುಮಾರಿ, ಆಲೂರು ಲಿಂಗಾಯತ ಸಮಾಜದ ಅಧ್ಯಕ್ಷ ಎ.ಆರ್. ಚಂದ್ರು, ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗೌರಿಶಂಕರ್, ಸಂಗಮ ಗೃಹ ನಿರ್ಮಾನ ಸಹಕಾರ ಸಂಘದ ಅಧ್ಯಕ್ಷ ಮುದ್ದಬಸವಣ್ಣ, ಆಲೂರು ಗ್ರಾಮದ ಮುಖಂಡರು, ಯುವಕರು ಸಂಘದ ಪದಾಧಿಕಾರಿಗಳು ಇದ್ದರು.