ಶಬರಿಗಿರಿಗೆ ಪಾದಯಾತ್ರೆ ಆರಂಭಿಸಿದ ಮಾಲಾಧಾರಿಗಳು


ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಡಿ.02:
ಪಟ್ಟಣಕ್ಕೆ ಸಮೀಪದ ಲೊಕಪ್ಪನಹೊಲ ಗ್ರಾಮದಿಂದ ಶಬರಿ ಮಲೆಗೆ  ಇರುಮುಡಿಯೊಂದಿಗೆ ಏಳು ಮಾಲಾಧಾರಿ ಅಯ್ಯಪ್ಪಸ್ವಾಮಿಗಳು ಪಾದಯಾತ್ರೆ ಆರಂಭಿಸಿದರು.
ಪಟ್ಟಣದ ಗುರುಸ್ವಾಮಿಗಳಾದ ವೀರೇಶ್ ಸ್ವಾಮಿ, ಬ್ರಹ್ಮಾನಂದ ಸ್ವಾಮಿ, ಗುಂಡಾದ ಬಸವರಾಜ ಸ್ವಾಮಿ ಹಾಗೂ ಇತರೆ ಗುರುಸ್ವಾಮಿಗಳು ಶಾಸ್ತ್ರೋಕ್ತವಾಗಿ ಪೂಜಾ ಕೈಂಕರ್ಯಗಳೊಂದಿಗೆ ಇರುಮಡಿ ಕಾರ್ಯಕ್ರಮ ನೆರವೇರಿಸಿದರು.
ಈ ಸಂದರ್ಭದಲ್ಲಿ ಮರಿಯಮ್ಮನಹಳ್ಳಿ, ಲೋಕಪ್ಪನಹೊಲ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಅಯ್ಯಪ್ಪ ಮಾಲಾಧಾರಿಗಳು ಉಪಸ್ಥಿತರಿದ್ದು ಮೊಟ್ಟ ಮೊದಲ ಬಾರಿ ಈ ಭಾಗದಿಂದ ಪಾದಯಾತ್ರೆಗೆ ಹೊರಟ ಅಯ್ಯಪ್ಪ ಮಾಲಾಧಾರಿಗಳಿಗೆ ಹಾರೈಸಿದರು.