Home ಜಿಲ್ಲೆ ಶಂಕರ ಮಠದ ಗೋಪುರು ನಿರ್ಮಾಣಕ್ಕೆ ಚಾಲನೆ.

ಶಂಕರ ಮಠದ ಗೋಪುರು ನಿರ್ಮಾಣಕ್ಕೆ ಚಾಲನೆ.

(ಸಂಜೆವಾಣಿ ವಾರ್ತೆ)

ಬಳ್ಳಾರಿ, ಫೆ.28: ನಗರದ ಸಂಗನಕಲ್ಲು ರಸ್ತೆಯಲ್ಲಿರುವ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಎಂಟನೇ ವಾರ್ಷಿಕೋತ್ಸವ ಹಾಗೂ ವಿಮಾನ ಗೋಪುರ ನಿರ್ಮಾಣ ಕಾರ್ಯಾರಂಭ ಕಾರ್ಯಕ್ರಮ ಭಕ್ತಿಭಾವದಿಂದ ಫೆ.26 ರಂದು ನಡೆಯಿತು.

ಜಗದ್ಗುರುಗಳಾದ ಭಾರತೀ ತೀರ್ಥಸ್ವಾಮಿ ಮತ್ತು ವಿದುಶೇಖರ ಭಾರತೀಸ್ವಾಮಿಗಳ ಆ ಶೀರ್ವಾದದಿಂದ ವಿಶೇಷ ಅಭಿಷೇಕ, ಪೂಜೆ, ಗೋಪೂಜೆ ಹಾಗೂ ವಿಮಾನ ಗೋಪುರ ನಿರ್ಮಾಣ ಕಾರ್ಯಕ್ಕೆ ವಿಧಿವತ್ತಾಗಿ ಚಾಲನೆ ನೀಡಲಾಯಿತು. ಗುರುಪಾದುಕಾ ಪೂಜೆ, ಭಜನಾ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು.

ವಿಮಾನ ಗೋಪುರ ನಿರ್ಮಾಣ ಕಾರ್ಯಾರಂಭವು ಮಠದ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಗಿ ಪರಿಗಣಿಸಲಾಗುತ್ತಿದೆಂದು ಮಠಾಧಿಕಾರಿ ಬಿ.ಕೆ.ಬಿ.ಎನ್ ಮೂರ್ತಿ ಹೇಳಿದರು.