
ವಾಷಿಂಗ್ಟನ್, ಡಿ.11:- ವೆನೆಜುವೆಲಾದ ಕರಾವಳಿಯಲ್ಲಿ ಆದೇಶಕ್ಕೆ ಸೇರಿದ ಬೃಹತ್ ತೈಲ ಟ್ಯಾಂಕರ್ ಅನ್ನು ಅಮೆರಿಕದ ಸೇನಾ ಪಡೆಗಳು ವಶಪಡಿಸಿಕೊಂಡಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಈ ಮೂಲಕ ವೆನುಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಸರ್ಕಾರದ ವಿರುದ್ಧ ಅಮೆರಿಕಾ ಕೈಗೊಂಡ ಮಹತ್ವದ ಕಾರ್ಯಾಚರಣೆ ಆಗಿದೆ. ಮಾದಕ ವಸ್ತು ಕಳ್ಳಸಾಗಾಣೆಗೆ ವೆನೆಜುವೆಲಾ ಅವಕಾಶ ನೀಡುತ್ತಿದೆ ಎಂದು ಆರೋಪಿಸಿ ಕಳೆದ ಹಲವು ತಿಂಗಳಿಂದ ಮಾದಕ ವಸ್ತು ವಿರೋಧಿ ಕಾರ್ಯಾಚರಣೆ ನಡೆಸಿದ್ದು ಅದರ ಭಾಗವಾಗಿ ತೈಲ ಟ್ಯಾಂಕರ್ ಅಳವಡಿಸಿಕೊಳ್ಳಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಟ್ರಂಪ್, ವೆನೆಜುವೆಲಾದ ಕರಾವಳಿಯಲ್ಲಿ ಟ್ಯಾಂಕರ್ ವಶಪಡಿಸಿಕೊಂಡಿದ್ದೇವೆ. ದೊಡ್ಡ ಟ್ಯಾಂಕರ್ ಎಂದು ಅವರು ಖಚಿತ ಪಡಿಸಿದ್ದಾರೆ.
ತೈಲ ಟ್ಯಾಂಕರ್ ವಶಪಡಿಸಿಕೊಂಡ ವಿಡಿಯೋವನ್ನು ಇದೇ ವೇಳೆ ಬಿಡುಗಡೆ ಮಾಡಿದ ಅವರು ಅಮೆರಿಕಾದ ಅಟಾರ್ನಿ ಜನರಲ್ ಪ್ಯಾಮ್ ಬೋಂಡಿ ಹಡಗನ್ನು “ವೆನೆಜುವೆಲಾ ಮತ್ತು ಇರಾನ್‍ನಿಂದ ಅನುಮೋದಿತ ತೈಲ ಸಾಗಿಸಲು ಬಳಸುವ ಕಚ್ಚಾ ತೈಲ ಟ್ಯಾಂಕರ್” ಎಂದು ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಅಮೆರಿಕಾದ ನಡೆಗೆ ವೆನುಜುವೆಲಾ ಖಂಡನೆ:
ಅಮೆರಿಕಾ ಸರ್ಕಾರದ ಈ ರೀತಿಯ ನಡೆ ತೀವ್ರ ಖಂಡನೀಯವಾದ್ದು ಈ ರೀತಿ ಮಾಡುವುದು “ಅಂತರರಾಷ್ಟ್ರೀಯ ಕಡಲ್ಗಳ್ಳತನ”ದ ಕೃತ್ಯ ಎಂದು ಹೇಳಿದ ಅವರು ಇದಕ್ಕೂ ಮೊದಲು, ವೆನೆಜುವೆಲಾ ಎಂದಿಗೂ “ತೈಲ ವಸಾಹತು” ಆಗುವುದಿಲ್ಲ ಎಂದು ಅಧ್ಯಕ್ಷ ನಿಕೋಲಸ್ ಮಡುರೊ ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್ ಆಡಳಿತ, ವೆನೆಜುವೆಲಾ ಅಮೆರಿಕಾಕ್ಕೆ ಮಾದಕವಸ್ತುಗಳನ್ನು ಪೂರೈಸುತ್ತಿದೆ ಎಂದು ಆರೋಪಿಸಿದ್ದಾರೆ. ಇದೂ ಕೂಡ ಸತ್ಯಕ್ಕೆ ದೂರವಾದ ಸಂಗತಿ. ಈ ರೀತಿಯ ಆರೋಪ ಮಾಡುವುದು ಮತ್ತು ಒಂದೇ ದೇಶದ ತೈಲ ಟ್ಯಾಂಕರ್ ಅವಳಡಿಕೆ ಮಾಡಿಕೊಳ್ಳುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ತಿಳಿಸಿದ್ದಾರೆ.
ವಿಶ್ವದ ಅತಿದೊಡ್ಡ ಸಾಬೀತಾಗಿರುವ ತೈಲ ನಿಕ್ಷೇಪಗಳಲ್ಲಿ ಕೆಲವು ನೆಲೆಯಾಗಿರುವ ವೆನೆಜುವೆಲಾ, ಪ್ರತಿಯಾಗಿ, ವಾಷಿಂಗ್ಟನ್ ತನ್ನ ತೈಲವನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ.
ಅಮೆರಿಕಾ ತೈಲ ಟ್ಯಾಂಕರ್ ಅಳವಡಿಕೆ ಮಾಡಿಕೊಂಡ ಕ್ರಮ ತೈಲ ಬೆಳ ಹೆಚ್ಚಳಕ್ಕೆ ಕಾರಣವಾಗಿದ್ದು ಪೂರೈಕೆ ಮೇಲೆ ವ್ಯತ್ಯಯವಾಗಿದೆ. ಈ ಕ್ರಮ ಸಾಗಣೆದಾರರಿಗೆ ಬೆದರಿಕೆ ಹಾಕಬಹುದು ಮತ್ತು ವೆನೆಜುವೆಲಾದ ತೈಲ ರಫ್ತಿಗೆ ಮತ್ತಷ್ಟು ಅಡ್ಡಿಯಾಗಬಹುದು ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ.
























