ವುಂಕಿಮರಿಸಿದ್ದಮ್ಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ನ,16-
ಜವಾಹರಲಾಲ್ ನೆಹರು ಜಯಂತಿ ಪ್ರಯುಕ್ತ ಇಲ್ಲಿನ‌ ಬಸವೇಶ್ವರ ನಗರದ ವುಂಕಿಮರಿಸಿದ್ದಮ್ಮ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು  ಹಬ್ಬದ ರೀತಿಯಲ್ಲಿ  ಹಬ್ಬಿಕೊಳ್ಳಲಾಗಿತ್ತು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ  ಎಲ್. ಟಿ. ಶೇಖರ್ ದೀಪ ಹಚ್ಚುವ ಮೂಲಕ ಕಾರ್ಯಕ್ರಮ ಪ್ರಾರಂಭಿಸಿ 2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಮಾಡಿದ ಸಾಧನೆಯನ್ನು ಸ್ಮರಿಸುತ್ತ. ಯೋಗಾ, ಕ್ರೀಡಾ ಸ್ಪರ್ಧೆಗಳಲ್ಲಿ ರಾಜ್ಯ ಮಟ್ಟಕೆ ಆಯ್ಕೆಯಾಗಿರುವ ಪುನಿತ್, ಚರಣ್, ಶಾಮ ಪರ್ವಿನ್ ವಿದ್ಯಾರ್ಥಿಗಳಿಗೆ ಶುಭಕೋರಿದರು.
 ನಮ್ಮ ಶಾಲೆಯು ಬಡವಿದ್ಯಾರ್ಥಿಗಳ ಶ್ರೇಯಸ್ಸು ಗುರಿಯಾಗಿ ಇಟ್ಟುಕೊಂಡು ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಮುಂಬರುವ ದಿನಗಳಲ್ಲಿ ರೋಬೋಟಿಕ್ ಲ್ಯಾಬ್ ಆಧುನಿಕ ಸೈನ್ಸ್ ಲ್ಯಾಬ್ ವ್ಯವಸ್ಥೆಮಾಡಲಾಗುತ್ತದೆ ಎಂದು ತಿಳಿಸಿದರು.
 ಈ ವೇಳೆ ಶಾಲೆಯ ಆಡಳಿತ ಮಂಡಳಿಯ ಸದಸ್ಯ ಎಸ್.ಎಸ್. ಪ್ರಭು ಶಾಲಾ ಮುಖ್ಯಗುರು ಮಂಜುಳಾ ದಂಡಿನಾ,  ಬೋಧಕ ಮತ್ತು ಬೋದಕೇತರ ವರ್ಗ, ಶಾಲಾ ಮಕ್ಕಳು ಉಪಸ್ಥಿತರಿದ್ದರು.
 ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು  ಜರುಗಿದವು.