ವೀರ್ಯವೃದ್ಧಿ ಹಾಗೂ ಸ್ಥಲನ ಮನೆಮದ್ದು

೧. ವೀರ್ಯಾಣುಗಳ ಕೊರತೆ ಇರುವವರುಪ್ರತಿನಿತ್ಯಖರ್ಜೂರದ ಹಲ್ವ ಸೇವಿಸುತ್ತಾ ಬಂದರೆ ವೀರ್ಯವರ್ಧಕವಾಗಿ ಕೆಲಸ ಮಾಡುತ್ತದೆ.

೨.ಹೊನಗೊನೆ ಸೊಪ್ಪು ಹಾಗೂ ಬೇಲದ ಹಣ್ಣಿನ ಸೊಪ್ಪು ಎರಡನ್ನೂನೆರಳಲ್ಲಿ ಒಣಗಿಸಿ ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಿ. ಪ್ರತಿನಿತ್ಯ ೪೮ ದಿನ ಸೇವಿಸಿದರೆ ವೀರ್ಯದಲ್ಲಿರುವ ಉಷ್ಣತೆಯನ್ನು ಕಡಿಮೆ ಮಾಡುತ್ತದೆ ಹಾಗೂ ವೀರ್ಯಾಣುಗಳ ಕೊರತೆಯನ್ನು ನೀಗಿಸುತ್ತದೆ.

೩. ವೀರ್ಯಸ್ಥಲನವಾಗುತ್ತಿದ್ದರೆ, ಸೋರೆಕಾಯಿಯನ್ನು ದಿನನಿತ್ಯ ಬಳಸುತ್ತಿದ್ದರೆ ಉಪಯೋಗವಾಗುತ್ತದೆ.

೪. ವೀರ್ಯಸ್ಥಲನವಾಗುತ್ತಿದ್ದರೆ, ಧ್ಯಾನಮಾಡುವುದು, ಮಾನಸಿಕ ಚಿಂತೆಗಳನ್ನು ಮಾಡದಿರುವುದು, ಆಧ್ಯಾತ್ಮದಲ್ಲಿತೊಡಗಿಸಿಕೊಂಡರೆ ಅನುಕೂಲವಾಗುತ್ತದೆ.

೫. ಗೋಡಂಬಿಯನ್ನು ಪ್ರತಿನಿತ್ಯದಲ್ಲಿ ಸೇವನೆ ಮಾಡಿ. ಬೆಳಿಗ್ಗೆ ಎದ್ದ ತಕ್ಷಣ ತಣ್ಣೀರು ಸ್ನಾನ, ಅಧ್ಯಯನ ಇತ್ಯಾದಿಯಿಂದ ಅನುಕೂಲವಾಗುವುದು.

೬. ವೀರ್ಯವೃದ್ಧಿಗೆ:ಎಳನೀರಿಗೆ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಅತ್ಯಂತ ಪ್ರಯೋಜನವಾಗುತ್ತದೆ.

೭.ಖರ್ಜೂರ,ಬಾದಾಮಿ,ಒಣದ್ರಾಕ್ಷಿ, ಒಣಕೊಬ್ಬರಿ ಎಲ್ಲವನ್ನೂ ಪುಡಿಮಾಡಿಟ್ಟುಕೊಂಡು ಒಂದು ಚಮಚ ಜೇನುತುಪ್ಪದ ಜೊತೆ ಸೇವಿಸುತ್ತಿದ್ದರೆ, ವೀರ್ಯವೃದ್ಧಿಯಾಗುತ್ತದೆ.

೮. ಉದ್ದಿನಬೇಳೆಯನ್ನು ಕೆಂಪಗೆ ಹುರಿದು ಪುಡಿಮಾಡಿಟ್ಟುಕೊಂಡು ಬೆಲ್ಲದ ಪಾಕಮಾಡಿ ತುಪ್ಪಹಾಕಿ ತಳ ಸೀಯದಂತೆ ಕೆದಕುತ್ತಾ ಇರಬೇಕು. ತಳಬಿಡುವಾಗ ಏಲಕ್ಕಿಪುಡಿ ಹಾಕಿ ಈಚೆ ಇಳಿಸಿ ಆರಿದ ನಂತರ ಗಾಜಿನ ಸೀಸೆಗೆ ಹಾಕಿ ಇಟ್ಟುಕೊಳ್ಳಿ. ಪ್ರತಿನಿತ್ಯ ರಾತ್ರಿ ಮಲಗುವಾಗ ಸೇವಿಸುತ್ತಿದ್ದರೆ ವೀರ್ಯಾಣುಗಳ ಕೊರತೆ ನೀಗಿ ವೀರ್ಯವೃದ್ಧಿಯಾಗುತ್ತದೆ.

೯.ತುಳಸಿಯನ್ನು ಬೀಜದಸಹಿತವಾಗಿ ಸೇವಿಸುತ್ತಿದ್ದರೆ ನಪುಂಸಕತ್ವ ಹಾಗೂ ವೀರ್ಯಾಣುಗಳ ಕೊರತೆಯನ್ನು ನೀಗಿಸುತ್ತದೆ.

೧೦.ಖರ್ಜೂರವನ್ನು ಬೀಜತೆಗೆದು ಸಮಪ್ರಮಾಣಹುರಿಗಡಲೆಯನ್ನು ಸೇರಿಸಿ ಚೆನ್ನಾಗಿ ಕುಟ್ಟಿಕೊಳ್ಳಿ. ನಂತರ ಅದಕ್ಕೆ ಸ್ವಲ್ಪ ಬೆಲ್ಲ ಸೇರಿಸಿ ಉಂಡೆಗಳಾಗಿ ಮಾಡಿಟ್ಟುಕೊಳ್ಳಿ. ನೀರು ಸೇರಿಸದಿದ್ದರೆ ಹಾಳಾಗುವುದಿಲ್ಲ. ಪ್ರತಿನಿತ್ಯ ಒಂದೊಂದು ಉಂಡೆಯನ್ನು ತಿನ್ನುತ್ತಾಬಂದರೆ ವೀರ್ಯವೃದ್ಧಿಯಾಗುತ್ತದೆ.

೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಟ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ

೨.ಡಾ.ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ

. ೯೫೩೫೩೮೩೯೨೧