
ಸಂಜೆವಾಣಿ ವಾರ್ತೆ
ಬಳ್ಳಾರಿ, ಆ.27: ನಗರದ ಪ್ರತಿಷ್ಠಿತ ವೀರಶೈವ ಮಹಾವಿದ್ಯಾಲಯದಲ್ಲಿಂದು ರಾಷ್ಟ್ರೀಯ ಕ್ರೀಡಾ ದಿನಾಚರಣೆ-2026 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜ್ ನ ಪ್ರಾಚಾರ್ಯರಾದ ಡಾ.ರಾಜಶ್ರೀ ಪಾಟೀಲ್,ವಹಿಸಿಕೊಂಡಿದರು ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಯುವಜನರಲ್ಲಿ ಕ್ರೀಡೆ, ಆರೋಗ್ಯಕರ ಜೀವನಶೈಲಿ ಹಾಗೂ ರಾಷ್ಟ್ರ ನಿರ್ಮಾಣದ ಕುರಿತು ಜಾಗೃತಿ ಮೂಡಿಸುವುದು ಉದ್ದೇಶವಾಗಿತ್ತು. ಈ ಸಂದರ್ಭದಲ್ಲಿ “ಖೇಲೋ ಇಂಡಿಯಾ ಡೈಲಾಗ್ಸ್ ಖೇಲ್ ಕಿ ಬಾತ್ ಮೋದೀಜಿ ಸಾಥ್” ಎಂಬ ಥೀಮ್ ಅನ್ನು ಇಟ್ಟುಕೊಂಡು ವಿದ್ಯಾರ್ಥಿಗಳಿಗೆ ಜೀವನಶೈಲಿ ರೋಗಗಳನ್ನು ಎದುರಿಸಲು ಪ್ರತಿಯೊಬ್ಬರು ದಿನಕ್ಕೆ ಕನಿಷ್ಟ 60 ನಿಮಿಷಗಳನ್ನು ದೈಹಿಕ ಚಟುವಟಿಕೆಗಳಿಗೆ ಮೀಸಲಿಡುವಂತೆ ವಿದ್ಯಾರ್ಥಿಗಳಿಗೆ ಪ್ರಾಚಾರ್ಯರು ಪ್ರೋತ್ಸಾಹಿಸಿದರು.
ಈ ಕಾರ್ಯಕ್ರಮದಲ್ಲಿ ಡಾ.ಜಿ.ಮನೋಹರ, ಡಾ.ಶ್ಯಾಮೂರ್ತಿ.ಜಿ, ಡಾ.ಶರಣಗೌಡ, ಡಾ.ವಿನೋದ್ ಕುಮಾರ್, ಶ್ರೀಮತಿ ಮಾಲ.ಆರ್, ನಿಖಿಲ್.ಬಿ, ಗಗನ್ ದೀಪ್.ಆರ್, ಲಿಂಗಪ್ಪ.ಕೆ ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿಯಾದ ರಾಧಸ್ವಾಮಿ.ಕೆ.ಪಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.





























