Home Uncategorized ವಿಶ್ವ ರೆಡ್ಕ್ರಾಸ್ ದಿನಾಚರಣೆ ಪ್ರಯುಕ್ತ  ಸ್ವಯಂ ಪ್ರೇರಿತ ರಕ್ತದಾನ ಹಾಗೂ ಆರೋಗ್ಯ ತಪಾಸಣೆ

ವಿಶ್ವ ರೆಡ್ಕ್ರಾಸ್ ದಿನಾಚರಣೆ ಪ್ರಯುಕ್ತ  ಸ್ವಯಂ ಪ್ರೇರಿತ ರಕ್ತದಾನ ಹಾಗೂ ಆರೋಗ್ಯ ತಪಾಸಣೆ

ಸಂಜೆವಾಣಿ ವಾರ್ತೆ

ಹೊಸಪೇಟೆ.ಮೇ.10  ವಿಶ್ವ ರೆಡ್ಕ್ರಾಸ್ ದಿನಾಚರಣೆ ಅಂಗವಾಗಿ ನಗರದ ಪಿಡಿಐಟಿ ಕಾಲೇಜು ಆವರಣದಲ್ಲಿ ಶುಕ್ರವಾರ ಸ್ವಯಂ ಪ್ರೇರಿತ ರಕ್ತದಾನ  ಮತ್ತು ಉಚಿತ ಆರೋಗ್ಯ ತಪಾ¸ಣೆ ಶಿಬಿರ ಜರುಗಿತು.

ಭಾರತೀಯ ರೆಡ್ಕ್ರಾಸ್ ಸೊಸೈಟಿ ವಿಜಯನಗರ ಜಿಲ್ಲಾ ಶಾಖೆ, ರೋಟರಿ ವೈ. ಉಮಾಮಹೇಶ್ವರರಾವ್ ರಕ್ತನಿಧಿ ಕೇಂದ್ರ ಹಾಗೂ ಎಸ್ಬಿಬಿಎನ್ ಬಿಇಡಿ ಕಾಲೇಜು ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಶಿಬಿರವನ್ನು ರೆಡ್ಕ್ರಾಸ್ ಸೊಸೈಟಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಖಾ ಪ್ರಕಾಶ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ‘ರೆಡ್ಕ್ರಾಸ್ ಸಂಸ್ಥಾಪಕ ಜೀನ್ ಹೆನ್ರಿ ಡ್ಯೂನಾಂಟ್ ಅವರ ಜನ್ಮದಿನವನ್ನು ವಿಶ್ವ ರೆಡ್ಕ್ರಾಸ್ ದಿನವಾಗಿ ಆಚರಿಸಲಾಗುತ್ತದೆ. 126 ರಾಷ್ಟ್ರಗಳಲ್ಲಿ ಸಕ್ರಿಯವಾಗಿರುವ ಈ ಸಂಸ್ಥೆ ಯುದ್ಧ, ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಜಾತಿ, ಧರ್ಮ, ದೇಶ ಭೇದವಿಲ್ಲದೆ ಮಾನವೀಯ ಸೇವೆ ಸಲ್ಲಿಸುತ್ತಿದೆ. ವಿಶ್ವದಲ್ಲೇ ಅತಿ ಹೆಚ್ಚು ನೊಬೆಲ್ ಪುರಸ್ಕಾರ ಪಡೆದ ಏಕೈಕ ಸಂಸ್ಥೆ ಇದಾಗಿದೆ’ ಎಂದರು.

ಜಿಲ್ಲಾ ಘಟಕದ ಸಭಾಧ್ಯಕ್ಷ ರವಿಶಂಕರ್ ಮಾತನಾಡಿ, ‘ವಿಜಯನಗರ ಘಟಕದಿಂದ ಶ್ರವಣ ಸಾಧನ, ವೀಲ್ಚೇರ್ ವಿತರಣೆ, ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಟಾರ್ಪಾಲ್, ಪಾತ್ರೆ ವಿತರಣೆ ಮಾಡಲಾಗಿದೆ. ಸಂಸ್ಥೆಯು ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಅದರ ಹೊರತಾಗಿ ಸಂಸ್ಥೆ ನಡೆಸುವ ಇತರ ಕಾರ್ಯಗಳಿಗೂ ಕಾಲೇಜು ಆಡಳಿತ ಮಂಡಳಿ ಸಂಪೂರ್ಣ ಸಹಕಾರ ನೀಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ.ಶಿವನಗೌಡ ಸತ್ಮಾರ್, ಆಪಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶ್ವೇತಾ ವಸ್ತ್ರದ್ ಮಾತನಾಡಿದರು. ಶಿಬಿರದಲ್ಲಿ 120ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. 20 ಮಂದಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.

ಕಾರ್ಯಕ್ರಮದಲ್ಲಿ ರೆಡ್ಕ್ರಾಸ್ ಸೊಸೈಟಿ ಸದಸ್ಯರಾದ ಅನ್ನಪೂರ್ಣ ಸದಾಶಿವ, ಮಹೇಂದ್ರ ಸೋನಿ, ಅನ್ನಪೂರ್ಣ ರೆಡ್ಡಿ, ಬಿಂದು ಮಲ್ಲಿಕಾರ್ಜುನ, ರೋಟರಿ ರಕ್ತನಿಧಿ ಕೇಂದ್ರದ ಅಧ್ಯಕ್ಷ ದೀಪಕ್ ಕೊಳಗದ್, ಡಾ. ಸನಾ ಆಯೇಷಾ ಸೇಠ್, ಉಪನ್ಯಾಸಕರಾದ ಮಲ್ಲಿಕಾ, ಬಿದರಕುಂದಿ ಮಲ್ಲಿಕಾರ್ಜುನ, ರೋಟರಿ ರಕ್ತನಿಧಿಯ ಪವನ್ ಸೇರಿದಂತೆ ರೋಟರಿ ರಕ್ತ ಭಂಡಾರದ ಸಿಬ್ಬಂದಿ, ಆಪಿ ಆಸ್ಪತ್ರೆ ಸಿಬ್ಬಂದಿ ಹಾಗೂ ಹಾಗೂ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.