Home ಜಿಲ್ಲೆ ಮೈಸೂರು ವಿಶ್ವ ಮೆದುಳು ದಿನ: ಅರಿವು ಕಾರ್ಯಕ್ರಮ

ವಿಶ್ವ ಮೆದುಳು ದಿನ: ಅರಿವು ಕಾರ್ಯಕ್ರಮ

ಸಂಜೆವಾಣಿ ನ್ಯೂಸ್
ಮೈಸೂರು.ಜು.26:
ಜಿಲ್ಲಾ ಪಂಚಾಯತ್ ಮ್ಯಸೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೈಸೂರು, ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಕಬಿ (ಏಚಿಃಊI) ಮೈಸೂರು, ಮತ್ತು ಜಿಲ್ಲಾ ಆಸ್ಪತ್ರೆ ಮೈಸೂರು, ಇವರ ಸಂಯುಕ್ತಾಶ್ರಯದಲ್ಲಿ ಆಸ್ಪತ್ರೆ ಮೈಸೂರು ಇಲ್ಲಿ ವಿಶ್ವ ಮೆದುಳು ದಿನವನ್ನು ಆಚರಿಸಲಾಯಿತು.
ಪ್ರಾಸ್ಥವಿಕ ನುಡಿಗಳನ್ನಾಡಿದ ಫಿರ್ದೋಸ್ ಸೈಕಾಲಜಿಸ್ಟ್, ಕಬಿ (ಏಚಿಃಊI) ತಂಡವು ಸುಮಾರು 2.5 ವರ್ಷಗಳಿಂದ ಜಿಲ್ಲಾ ಅಸ್ಪತ್ರೆಯ 108 ನೇ ಕೊಠಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಕಬಿ (ಏಚಿಃಊI) ತಂಡದಲ್ಲಿ ಒಬ್ಬರು ವೈದ್ಯರು, ಜಿಲ್ಲಾ ಸಂಯೋಜಕರು, ಫಿಜಿûಯೋ ತೆರಪಿಸ್ಟ್, ಸ್ಪೀಚ್ ತೆರಪಿಸ್ಟ್, ಸೈಕಾಲಜಿಸ್ಟ್, ಶುಶ್ರೂಷಕರು ಇದ್ದು ಪ್ರತಿ ದಿನವು ಜಿಲ್ಲಾ ಆಸ್ಪತ್ರೆಯಲ್ಲಿ ಪಾಶ್ರ್ವವಾಯು, ಮೂರ್ಛೇ ರೋಗ, ತಲೆ ನೋವು ಹಾಗು ಮರೆವಿನ ಖಾಯಿಲೆಗೆ ವಿಶೇಷವಾಗಿ ಮತ್ತು ಉಚಿತವಾಗಿ ಚಿಕಿತ್ಸೆ, ಸಲಹೆಗಳನ್ನು ನೀಡುತ್ತಿರುವುದಾಗಿ ತಿಳಿಸಿದರು.


ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕರಿಗಳಾದ ಡಾ|| ಮೋಹನ್.ಕೆ ರವರು ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ಉಜ್ಜೀವನ್ ಸಂಸ್ಥೆಯವರು ದೇಣಿಗೆಯಾಗಿ ನೀಡಿದ ಫಿಜಿûಯೋತೆರಫಿ ಪರಿಕರಗಳನ್ನು ಜಿಲ್ಲಾ ಆಸ್ಪತ್ರೆಯ ಏಚಿಃಊI ವಿಭಾಗಕ್ಕೆ ನೀಡಿದರು.
ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿಗಳಾದ ಮತ್ತು (ಏಚಿಃಊI) ಕಾರ್ಯಕ್ರಮದ ನೋಡಲ್ ಅಧಿಕಾರಿಯಾದ ಡಾ|| ನಾಗೇಶ್.ಪಿ. ಆರಾಧ್ಯ ರವರು ಕರ್ನಾಟಕ ಮೆದುಳಿನ ಆರೋಗ್ಯ ಉಪಕ್ರಮ (ಏಚಿಃಊI) ವಿಭಾಗಕ್ಕೆ ಫಿಜಿûಯೋತೆರಫಿ ಪರಿಕರಗಳನ್ನು ದೇಣಿಗೆಯಾಗಿ ನೀಡಿದ ಉಜ್ಜೀವನ್ ಸಂಸ್ಥೆಗೆ ಧನ್ಯವಾದಗಳನ್ನು ತಿಳಿಸುತ್ತಾ ಸಂಸ್ಥೆಯು ಮುಂದಿನ ದಿನಗಳಲ್ಲಿ ಬಡವರಿಗೆ ನೆರವಗುವಂತಹ ಕಾರ್ಯಕ್ರಮಗಳನ್ನು ಆರೋಗ್ಯ ಇಲಾಖೆಯ ಜೊತೆಗೂಡಿ ಮಾಡಿಕೊಡಬೇಕೆಂದು ಕೋರಿದರು. ಮತ್ತು ಈ ವರ್ಷದ ಮೆದುಳು ದಿನದ ಘೋಷವಾಕ್ಯದ ಬಗ್ಗೆ ತಿಳಿಸುತ್ತಾ “ಃಖಂIಓ ಊಇಂಐಖಿಊ ? ಂಅಅಇSS ಈಔಖ ಂಐಐ” ಎಲ್ಲರಿಗೂ ಮೆದುಳು ಆರೋಗ್ಯದ ಲಭ್ಯತೆಯನ್ನು ಕಲ್ಪಿಸುವುದು ನಮ್ಮ ಆದ್ಯ ಕರ್ತವ್ಯ ಎಮದು ತಿಳಿಸುತ್ತಾ, ಕಸ್ಟಮರ್ ರಿಲೇಷನ್‍ಶಿಪ್ ಮ್ಯಾನೇಜರ್ ಅಶೋಕ್ ರವರಿಗೆ ವಿಶೇಷವಾಗಿ ಸನ್ಮಾನಿಸಿದರು.


ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ|| ಚಿದಂಬರ್ ರವರು ಮೆದುಳು ಆರೋಗ್ಯ ಉಪಕ್ರಮದ ಕಾರ್ಯ ನಿರ್ವಹಣೆಯ ಬಗ್ಗೆ ಮಾತನಾಡುತ್ತಾ, ಒಂದು ಕಾಲದಲ್ಲಿ ಯಾವುದೆ ಮೆದುಳು ತೊಂದರೆಗೆ ನಿಮಾನ್ಸ್ ಬೆಂಗಳೂರು ಇಲ್ಲಿಗೆ ಹೋಗಬೆಕಾಗಿದ್ದು, ಪ್ರಸ್ತುತ ರೋಗಿಗಳಿಗೆ ಅವರ ಜಿಲ್ಲೆಗಳಲ್ಲೆ ಈ ಕಾರ್ಯಕ್ರಮದ ಮುಖೇನ ಚಿಕಿತ್ಸೆ ನೀಡಲಾಗುತ್ತಿದೆ. ಅನಾವಶ್ಯಕವಾಗಿ ದೂರದ ಊರುಗಳಿಗೆ ಹೋಗುವ ತೊಂದರೆಗಳನ್ನು ತಪ್ಪಿಸಲಾಗಿದೆ. ದುಶ್ಚಟಗಳಿಂದ ದೂರವಿದ್ದು ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯವೆಂದು ತಿಳಿಸಿದರು.


ಎಲ್ಲಾ ಗಣ್ಯರಿಗೂ ಕಾರ್ಯಕ್ರಮದ ಪರವಾಗಿ ಜಿಲ್ಲಾ ಸಮಯೋಜಕರಾದ ಕುಮಾರಿ ಕೃತಿಕಾ.ಬಿ.ಎನ್ ರವರು ವಂದನಾರ್ಪಣೆಯನ್ನು ಮಾಡುವ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.
ಕಾರ್ಯಕ್ರಮದಲ್ಲಿ ಡಾ|| ಶಾಲಿನಿ ವೈದ್ಯಾಧಿಕಾರಿ (ಏಚಿಃಊI), ಇರ್ಫಾನ, ಸ್ಪೀಚ್ ತೆರಪಿಸ್ಟ್, ಶ್ರೀಮತಿ ಅಶ್ವಿನಿ ಶುಶ್ರೂಷಕರು, ಡಾ|| ಮಾಲಿನಿ ಗೋವಿಂದನ್, ಮನೋರೋಗ ತಜ್ಞರು ಜಿಲ್ಲಾ ಆಸ್ಪತ್ರೆ, ಡಾ|| ಪ್ರಶಾಂತ್ ಫಿಜಿûಷಿಯನ್, ಜಿಲ್ಲಾ ಆಸ್ಪತ್ರೆ, ನಾಗರತ್ನ ಶುಶ್ರೂಷಕ ಅಧಿಕಾರಿ, ಡಾ|| ಮಹೇಶ್ ಸಿ.ಎಂ.ಒ ಜಿಲ್ಲಾ ಆಸ್ಪತ್ರೆ, ಇವರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.