
ಸಂಜೆವಾಣಿ ವಾರ್ತೆ
ಕೊಳ್ಳೇಗಾಲ.ಜೂ.6:- ಪಟ್ಟಣದ ವಿಶ್ವ ಚೇತನ ಸಮೂಹ ವಿದ್ಯಾಸಂಸ್ಥೆಗಳ ವತಿಯಿಂದ ಗಿಡಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು.
ಇದೆ ವೇಳೆ ಸಂಸ್ಥೆಯ ಪ್ರಾಂಶುಪಾಲ ಭಾಸ್ಕರ್ ರವರು ಮಾತನಾಡಿ ಪರಿಸರ ದಿನದ ಮಹತ್ವ ಮತ್ತು ಪರಿಸರ ನಾಶದಿಂದ ಪ್ರಕೃತಿಯ ಮೇಲೆ ಆಗುತ್ತಿರುವ ಅಸಮತೋಲನ, ವಿಕೋಪಗಳ ಬಗ್ಗೆ ತಿಳಿಸಿದರು.
ಸಂಯೋಜಕರಾದ ರಾಜೇಶ್ ಎಸ್.ಬಿ ರವರು ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯು ಒಂದೊಂದು ಗಿಡ ಗಳನ್ನು ತಮ್ಮ ಮನೆ ಅಂಗಳದಲ್ಲಿ ನೆಟ್ಟು ಬೆಳೆಸುವುದರ ಮೂಲಕ ಪರಿಸರ ದಿನಾಚರಣೆ ಆಚರಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖೋಪಾಧ್ಯಾಯರಾದ ಅಕ್ಬರ್, ಉಪನ್ಯಾಸಕ ಚೇತನ್, ಜ್ಯೋತಿ ಲಿಂಗಯ್ಯ , ಲಕ್ಷ್ಮಣ್, ಮಯೂರ, ಪ್ರಕೃತಿ, ಅಂಜಲಿ, ಗಾಯತ್ರಿ, ಅರ್ಚನಾ , ಮೋಹನ್, ಶಿವಣ್ಣ ಹಾಗೂ ಸಂಸ್ಥೆ ಎಲ್ಲಾ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಭಾಗಿಯಾಗಿದ್ದರು.