ಸಂಜೆವಾಣಿ ವಾರ್ತೆ
ಬಳ್ಳಾರಿ, ಆ.01: ವಿಶೇಷ ಚೇತನ ಅತಿಥಿ ಶಿಕ್ಷಕರ ಬೇಡಿಕೆಗಳ ಈಡೇರಿಕೆಗೆ ಅಖಿಲ ಭಾರತ ಶಿಕ್ಷಣ ಉಳಿಸಿಸಮಿತಿ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ರಾಜ್ಯದಲ್ಲಿ ನೂರಾರು ವಿಶೇಷ ಚೇತನ ಅತಿಥಿ ಶಿಕ್ಷಕರು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕೆಲಸ ಮಾಡುತ್ತಾ ಬಂದಿದ್ದೇವೆ. ಉತ್ತಮ ಗುಣವಟ್ದದ ಶಿಕ್ಷಣ ನೀಡುವಲ್ಲಿ
ಮತ್ತು ವಿದ್ಯಾರ್ಥಿಗಳ ಭವಿಷ್ಯದ ನಿರ್ಮಾಣದಲ್ಲಿ ಪ್ರಾಮಾಣಿಕವಾಗಿ ಪಯತ್ನ ಮಾಡುತ್ತಾ ಬಂದಿದ್ದೇವೆ.
ನಮಗಿರುವ ಯಾವುದೇ ಸಮಸ್ಯೆಗಳನ್ನು ಲೆಕ್ಕಿಸದೆ ರಾಜ್ಯದ ಮಕ್ಕಳಿಗೆ ಹಾಗೂ ಶಿಕ್ಷಣಕ್ಕೆ ನಮ್ಮ ಸೇವೆ ಸಲ್ಲಿಸುತಿದ್ದೇವೆ. ಆದರೆ, ಇಂದಿಗೂ ನಮ್ಮ ಜೀವನ ಶೊಚನೀಯವಾಗಿದೆ. ಕಡಿಮೆ ಗೌರವ
ಧನ ಸೇರಿದಂತೆ , ಪ್ರತಿ ವರ್ಷವೂ ನಮ್ಮ ಸೇವೆಯನ್ನು ಪರಿಗಣಸದೆ ಯಾವುದೇ ಸೇವಾ ಭದ್ರತೆ ಇಲ್ಲದೆ ಜೀವನ ನಡೆಸುತ್ತಿದ್ದೇವೆ. ಶಾಲೆಗಳು ಎಷ್ಟೇ ದೂರವಿದ್ದರೂ , ದೈಹಿಕ ಸಮಸ್ಯೆಗಳೊಂದಿಗೆ
ನಾವು ಅಲ್ಲಿ ತೆರಳಿ ಪಾಠ ಮಾಡುತ್ತಿದ್ದೇವೆ. ನಮ್ಮಂತ ಅಭ್ಯರ್ಥಿಗಳಿಗೆ ಪ್ರಜಾ ತಾಂತ್ರಿಕವಾಗಿ ವಿಶೇಷ ಸ್ಥಾನಮಾನ ನೀಡಬೇಕಾಗಿದೆ. ಆದರೆ ವಾಸ್ತವದಲ್ಲಿ ಪ್ರತಿವರ್ಷ ಅತಿಥಿ ಶಿಕ್ಷಕರ
ನೇಮಕಾತಿಯ ಸೂಚನೆಯಲ್ಲಿ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲೂ ಸರ್ಕಾರ ಮತ್ತು ಶಾಲಾ ಶಿಕ್ಷಣ ಇಲಾಖೆ ಪರಿಗಣನೆ ನೀಡುತ್ತಿಲ್ಲ.. ಅದ್ದರಿಂದ ಸೂಕ್ತ ಪರಿಹಾರ ನೀಡಬೇಕೆಂದು ಮನವಿ.ಮಾಡಿಕೊಂಡಿದ್ದಾರೆ.
ಮನವಿ ಸಲ್ಲಿಸಿದ ಸಂದರ್ಭದಲ್ಲಿ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ಆರ್. ಸೋಮಶೇಖರ್ ಗೌಡ, ನಾಗರತ್ನ, ಎಸ್ ಜಿ ಸುತ್ರಾಯ ಸುಧಾಕರ್ ಜಿಲ್ಲಾ ಅಧ್ಯಕ್ಷರು, ಜಿಲ್ಲಾ ಕಾರ್ಯದರ್ಶಿ ಅತಿಥಿ ಶಿಕ್ಷಕರು(ವಿಶೇಷ ಚೇತನ) ಮತ್ತಿತರರು ಇದ್ದರು.


































