Home ಜಿಲ್ಲೆ ಮಂಗಳೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿಗೆ ರವಿಕೃಷ್ಣ ಕಲ್ಲಾಜೆ ಸಾರಥ್ಯ

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿಗೆ ರವಿಕೃಷ್ಣ ಕಲ್ಲಾಜೆ ಸಾರಥ್ಯ

 ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭವು ಕಾಲೇಜಿನಲ್ಲಿ ನಡೆಯಿತು. ಮಾತೃಸಂಸ್ಥೆ ವಿವೇಕಾನಂದ ವಿದ್ಯಾವರ್ಧಕ ಸಂಘ ಇಂಜಿನಿಯರಿಂಗ್ ಕಾಲೇಜಿಗೆ ನೂತನ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಿದ್ದಾರೆ. ಇಂಜಿನಿಯರ್ ಕಾಲೇಜಿನ ನೂತನ ಅಧ್ಯಕ್ಷರಾಗಿ ರವಿಕೃಷ್ಣ ಡಿ.ಕಲ್ಲಾಜೆ ಅವರ ಅಧಿಕಾರ ಸ್ವೀಕರಿಸಿದರು. ಸಂಚಾಲಕರಾಗಿ ಬೊಳ್ವಾರು ಪ್ರಸನ್ನ ದರ್ಬೆ, ಕೋಶಾಧಿಕಾರಿಗಳಾಗಿ ನೆಕ್ರಾಜೆಯ ಅರವಿಂದ ವಳಕಟ್ಟೆ, ನಿರ್ದೇಶಕರುಗಳಾಗಿ ಮುಕ್ರಂಪಾಡಿ ರಕ್ಷಾ ಪ್ರಭು, ಕೊಂಬೆಟ್ಟು ವೇದಾ ಲಕ್ಷ್ಮೀಕಾಂತ ಆಚಾರ್ಯ, ಚಿಕ್ಕ ಮುಡ್ನೂರು ಮನೋಜ್ ಶೆಣೈ, ಕಲ್ಲಡ್ಕದ ಸುಜಿತ್ ಕೊಟ್ಟಾರಿ, ಮುಂಡ್ಯ ನೆಟ್ಟಣಿಗೆ ಮುಡ್ನೂರಿನ ಕೆ.ಸುಬ್ರಮಣ್ಯ ಭಟ್ ಮತ್ತು ದ ವೆಬ್ ಪೀಪಲ್ ಸಂಸ್ಥಾಪಕ ಆದಿತ್ಯ ಕಲ್ಲೂರಾಯ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ ಅವರು ಮಾತನಾಡಿ, ವಿವೇಕಾನಂದ ಸಮೂಹ ಸಂಸ್ಥೆಗಳ ಏಳಿಗೆ ನಮ್ಮ ಎಲ್ಲರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲಾ ಸಮರ್ಪಕವಾಗಿ ಕಾರ್ಯನಿರ್ವಹಿಸುವ ಮೂಲಕ ಸಂಸ್ಥೆಯ ಅಭಿವೃದ್ಧಿಗೆ ದುಡಿಯಬೇಕು ಎಂದರು. ಕಾರ್ಯದರ್ಶಿಗಳಾದ ವಿಜಯನಾರಾಯಣ.ಕೆ.ಎಂ ಮಾತನಾಡಿ,  ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು, ಪೋಷಕರು, ಉಪನ್ಯಾಸಕರು ಮತ್ತು ಆಡಳಿತ ಮಂಡಳಿ ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಅದು ಉನ್ನತ ಸ್ಥಾನಕ್ಕೆ ಏರಬಹುದು. ನೂತನ ಆಡಳಿತ ಮಂಡಳಿಯ ಜೊತೆಯಲ್ಲಿ ನಾವೆಲ್ಲರೂ ಸಹಮತದಿಂದ ಕಾರ್ಯನಿರ್ವಹಿಸೋಣ ಎಂದರು.

ಇಂಜಿನಿಯರಿಂಗ್ ಕಾಲೇಜಿನ ನೂತನ ಅಧ್ಯಕ್ಷ ರವಿಕೃಷ್ಣ.ಡಿ.ಕಲ್ಲಾಜೆ ಮಾತನಾಡಿ ನಾನು ಈ ಕಾಲೇಜಿನ ಆಗುಹೋಗುಗಳ ಬಗ್ಗೆ ತಿಳುವಳಿಕೆಯನ್ನು ಹೊಂದಿದ್ದು, ಮುಂದಿನ ಕಾರ್ಯನಿರ್ವಹಣೆಯಲ್ಲಿ ಸಹಕಾರಿಯಾಗಲಿದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ನೀಡುವುದಕ್ಕೆ ಆಡಳಿತ ಮಂಡಳಿ ಬದ್ಧವಾಗಿದೆ ಎಂದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ರವೀಂದ್ರ. ಪಿ, ಶ್ರೀಪತಿ ಕಲ್ಲೂರಾಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಪ್ರಸಾದ್, ಸಹಾಯಕ ಕಾರ್ಯನಿರ್ವಣಾಧಿಕಾರಿ ವೆಂಕಟ್ರಮಣ ಭಟ್ ಮಂಕುಡೆ, ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ.ಕೆ, .ನಿರ್ಗಮಿತ ಅಧ್ಯಕ್ಷ ವಿಶ್ವಾಸ್ ಶೆಣೈ ಮತ್ತು ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್ ಉಪಸ್ಥಿತರಿದ್ದರು.