Home ಜಿಲ್ಲೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ  ಶಾಸಕ ನಾರಾ ಭರತ್ ರೆಡ್ಡಿ

ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ  ಶಾಸಕ ನಾರಾ ಭರತ್ ರೆಡ್ಡಿ

(ಸಂಜೆವಾಣಿ ವಾರ್ತೆ)

ಬಳ್ಳಾರಿ, ಫೆ.10: ನಗರ ಶಾಸಕ ನಾರಾ ಭರತ್ ರೆಡ್ಡಿಯವರು  ಬಸವೇಶ್ವರ ನಗರದ ಸಂಗಮೇಶ್ವರ ದೇವಸ್ಥಾನದ ಅಭಿವೃದ್ಧಿ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ  ಅಂದಾಜು 95 ಲಕ್ಷ ರೂ.ಗಳ ಅನುದಾನದಡಿ ನಿನ್ನೆ ಭೂಮಿ ಪೂಜೆ ನೆರವೇರಿಸಿದರು.

 ವಿ. ವಿ. ಸಂಘದ ಜಂಟಿ ಕಾರ್ಯದರ್ಶಿ ಯಾಳ್ಪಿ ಪಂಪನಗೌಡ, ಕೆರನಹಳ್ಳಿ ಚಂದ್ರಶೇಖರ್, ಸಂಗಮೇಶ್ವರ ದೇವಸ್ಥಾನದ ಕಮಿಟಿಯ ಚಿದಾನಂದಪ್ಪ, ಕಟ್ಟೆಗೌಡ, ಚಂದ್ರಮೌಳಿ, ಮಹೇಶ್, ಜಯದೇವಗೌಡ, ಸುರೇಶ್ ಸ್ವಾಮಿ, ವಾಸು ರೆಡ್ಡಿ, ಗುರುಸಿದ್ಧ, ಸುರೇಖಾ ಮಲ್ಲನಗೌಡ,   ಎಸ್.  ಮಲ್ಲನಗೌಡ, ಮಾಜಿ ಮೇಯರ್ ರಾಜೇಶ್ವರಿ, ಪಾಲಿಕೆಯ ಸದಸ್ಯರಾದ ಮಿಂಚು ಸೀನ ಮತ್ತಿತರರು ಹಾಜರಿದ್ದರು.

ಅದೇ ರೀತಿ ವಾರ್ಡ್ ಸಂಖ್ಯೆ 8ರ ವ್ಯಾಪ್ತಿಯಲ್ಲಿ 34.52 ಕೋಟಿ ರೂ.ಗಳ ವೆಚ್ಚದಲ್ಲಿ ಕಲ್ಯಾಣದುರ್ಗ  ರಸ್ತೆಯ ಸಿಸಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭ ವಾರ್ಡಿನ ಸದಸ್ಯ ರಾಮಾಂಜನೇಯ

 ಮಾಜಿ ಮೇಯರ್ ಎಂ.ರಾಜೇಶ್ವರಿ, ಮುಲ್ಲಂಗಿ ನಂದೀಶ್, ಪಾಲಿಕೆಯ ಸದಸ್ಯರಾದ ಮಿಂಚು ಸೀನಾ, ಎಂ.ಪ್ರಭಂಜನಕುಮಾರ್, ವೆಂಕಟೇಶ ಹೆಗಡೆ, ಹೊನ್ನಪ್ಪ. ಮತ್ತಿತರರು ಇದ್ದರು.

 ಮಹಾನಂದಿಕೊಟ್ಟಂನಲ್ಲಿ 50 ಲಕ್ಷ ರೂ.ಗಳ ಅನುದಾನದಡಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೂ ಸಹ  ಭರತ್ ರೆಡ್ಡಿಯವರು ಭೂಮಿ ಪೂಜೆ ನೆರವೇರಿಸಿದರು. ಈ ವೇಳೆ ಮೇಯರ್ ಪಿ.ಗಾದೆಪ್ಪ  ಮತ್ತಿತರರು ಇದ್ದರು

ಬಳಿಕ ಬಳ್ಳಾರಿ ಜಿಲ್ಲಾ ಖನಿಜ ಪ್ರತಿಷ್ಠಾನದಿಂದ ಬಳ್ಳಾರಿ ನಗರದ ಮುನಿಸಿಪಲ್ ಕಾಲೇಜು ಆವರಣದಲ್ಲಿ ನಿರ್ಮಿಸಲಾಗಿರುವ ನಾಲ್ಕು ಶಾಲಾ ಕೊಠಡಿಗಳನ್ನು  ಉದ್ಘಾಟಿಸಿದರು. ಈ ವೇಳೆ ಕಾಲೇಜು ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಲಕ್ಷ್ಮಣ ಹಳ್ಳದಮನಿ, ಪ್ರಾಂಶುಪಾಲ ಸುಂಕಪ್ಪ ಮೊದಲಾದವರು ಇದ್ದರು.