ವಿಮ್ಸ್ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವದ ತಾಲೀಮು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.12:
ನಗರದ ವಿಮ್ಸ್ ಮೈದಾನದಲ್ಲಿ ಆ.15 ರಂದು ನಡೆಸಲಿರುವ ಸ್ವಾತಂತ್ರ್ಯೋತ್ಸವ ಸಾರ್ವಜನಿಕ ಸಮಾರಂಭಕ್ಕೆ ಪಥ ಸಂಚಲನೆ ಮಾಡುವ ತುಕಡಿಗಳಿಂದ ತಾಲೀಮು ಆರಂಭಗೊಂಡಿದೆ.
ಇಂದು ಬೆಳಿಗ್ಗೆ ಮೈದಾನದಲ್ಲಿ ಡಿಎಆರ್ ಡಿವೈಎಸ್ಪಿ ನೇತೃತ್ವದಲ್ಲಿ ಪೊಲೀಸ್, ಎನ್ಸಿಸಿ, ಗೃಹರಕ್ಷಕ ದಳ, ಶಾಲಾ ಮಕ್ಕಳಿಂದ ಪಥ ಸಂಚನೆಯ ತಾಲೀಮು ನಡೆಸಲಾಯ್ತು.
ಯಾವ ತುಕಡಿಯವರು ಎಲ್ಲಿ ನಿಲ್ಲಬೇಕು, ಹೇಗೆ ಸಾಗಬೇಕು. ಹೇಗೆ ಗಣ್ಯರು ಧ್ವಜಾರೋಹಣ ಮಾಡಿದ ನಂತರ ಧ್ವಜ ವಂದನೆ ಕೈಗೊಳ್ಳಬೇಕು ಎಂಬುದರ ಮಾರ್ಗ ದರ್ಶನ ನೀಡಲಾಯ್ತು.